ಕೆ.ಎನ್.ಪಿ.ವಾರ್ತೆ,ಬೆಂಗಳೂರು, ಮಾ.15;

ಪದವಿಪೂರ್ವ ಶಿಕ್ಷಣ ಇಲಾಖೆಯು ಪ್ರಸಕ್ತ ಸಾಲಿನ ಪ್ರಥಮ ಪಿಯುಸಿ ಪೂರಕ ಪರೀಕ್ಷೆ ವೇಳಾ ಪಟ್ಟಿಯನ್ನು ಪ್ರಕಟಿಸಿದ್ದು, ಏ.16 ರಿಂದ ಏ.28ರವರೆಗೆ ಪರೀಕ್ಷೆ ನಡೆಯಲಿದೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಪ್ರಥಮ ಪಿಯು ಪರೀಕ್ಷೆಗಳು ನಡೆಯಲಿದ್ದು, ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟವಾದ ದಿನದಿಂದ ಮಾ.31ರೊಳಗೆ ಪರೀಕ್ಷಾ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಪೂರಕ ಪರೀಕ್ಷೆ ಫಲಿತಾಂಶ ಮೇ.4ರಂದು ಪ್ರಕಟಗೊಳ್ಳಲಿದೆ.

ಪರೀಕ್ಷಾ ಶುಲ್ಕ ವಿವರ : ಒಂದು ವಿಷಯಕ್ಕೆ ₹ 101, ಎರಡು ವಿಷಯಕ್ಕೆ ₹ 201, ಮೂರು ಮತ್ತು ಅದಕ್ಕಿಂತ ಹೆಚ್ಚಿನ ವಿಷಯಗಳಿಗೆ ₹ 302 ಶುಲ್ಕ ನಿಗದಿಪಡಿಸಲಾಗಿದೆ.

ಏ. 16 ರಂದು ಸಮಾಜಶಾಸ್ತ್ರ, ರಸಾಯನಶಾಸ್ತ್ರ

ಏ. 17 ರಂದು ಇಂಗ್ಲಿಷ್

ಏ. 20 ರಂದು ಇತಿಹಾಸ, ಭೂಗರ್ಭಶಾಸ್ತ್ರ, ಎಲೆಕ್ಟ್ರಾನಿಕ್ಸ್, ಗಣಕ ವಿಜ್ಞಾನ

ಏ. 21 ರಂದು ತರ್ಕಶಾಸ್ತ್ರ, ಬಿಸಿನೆಸ್ ಸ್ಟಡೀಸ್, ಗಣಿತ

ಏ. 23 ರಂದು ಅರ್ಥಶಾಸ್ತ್ರ

ಏ. 24 ರಂದು ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಮನಃಶಾಸ್ತ್ರ, ಭೌತಶಾಸ್ತ್ರ.

ಏ. 25 ರಂದು ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಗೃಹ ವಿಜ್ಞಾನ

ಏ. 26 ರಂದು ಭೂಗೋಳಶಾಸ್ತ್ರ, ಜೀವಶಾಸ್ತ್ರ, ಬೇಸಿಕ್‍ ಗಣಿತ

ಏ. 27 ರಂದು ಹಿಂದಿ, ಸಂಸ್ಕೃತ

ಏ. 28 ರಂದು ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಅರೇಬಿಕ್‍ ಹಾಗೂ ಫ್ರೆಂಚ್ ಭಾಷೆಯ ಪರೀಕ್ಷೆಗಳು ನಡೆಯಲಿವೆ.