ಕೆ.ಎನ್.ಪಿ.ವಾರ್ತೆ,ನವಲಿ,ನ.25

ಗ್ರಾಮ ಪಂಚಾಯತ ನವಲಿ, ಉದ್ಯೋಗ ವಿನಿಮಯ ಕೇಂದ್ರ ಕೊಪ್ಪಳ, ಶ್ರೀ ಕ್ಷೇತ್ರ ನವಲಿ ವೀರಭದ್ರೇಶ್ವರ ಗ್ರಾಮೀಣಾಭಿವೃದ್ದಿ ಸಂಸ್ಥೆ ಸಹಯೋಗದಲ್ಲಿ ಸರಕಾರಿ ಫ್ರೌಢ ಶಾಲೆಯಲ್ಲಿ ನಡೆದ ನವಲಿ ಹೋಬಳಿ ಮಟ್ಟದ ಉದ್ಯೋಗ ಮೇಳ ಯಶಸ್ವಿಗೊಂಡಿತು.

400 ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದರು. ಸುಮಾರು 20 ಕ್ಕೂ ಹೆಚ್ಚು ಕಂಪನಿಗಳು ಮೇಳದಲ್ಲಿ ಸಂದರ್ಶನ ನಡೆಸಿದವು. ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.

ಯಶಸ್ವಿಗೊಂಡ ನವಲಿ ಹೋಬಳಿ ಮಟ್ಟದ ಉದ್ಯೋಗ ಮೇಳ

ಈ ಸಂದರ್ಭದಲ್ಲಿ ಕನಕಗಿರಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಬಸವರಾಜ ದಡೆಸುಗೂರವರು, ಕಂಪನಿ ಮುಖ್ಯಸ್ಥರೊಂದಿಗೆ ಮಾಹಿತಿ ಪಡೆದು ನಮ್ಮ ಕ್ಷೇತ್ರದ ವಿದ್ಯಾವಂತ ನಿರುದ್ಯೋಗಿ ಯುವ ಜನತೆಗೆ ಅರ್ಹತೆಗೆ ತಕ್ಕಂತೆ ಕೆಲಸ ನೀಡಲು ತಿಳಿಸಿದರು.

ಯಶಸ್ವಿಗೊಂಡ ನವಲಿ ಹೋಬಳಿ ಮಟ್ಟದ ಉದ್ಯೋಗ ಮೇಳ

ನಂತರ ನವಲಿ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳಾದ ಬಸವರಾಜ ಗೌಡ ಮಾತನಾಡಿ ‘‘ದೇಶದಲ್ಲಿ ಪ್ರತಿವರ್ಷ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಇದು ಆಘಾತಕಾರಿ ಬೆಳವಣಿಗೆಯಾಗಿದೆ.

ವಿದ್ಯಾವಂತರೇನೂ ಸಾಕಷ್ಟು ಮಂದಿ ಇದ್ದು, ಉದ್ಯೋಗಗಳಿಗೂ ಕೊರತೆಯಿಲ್ಲ. ಕೌಶಲ್ಯಾಧಾರಿತ ತರಬೇತಿ ಪಡೆಯದಿರುವುದು ನಿರುದ್ಯೋಗ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.

ಯಶಸ್ವಿಗೊಂಡ ನವಲಿ ಹೋಬಳಿ ಮಟ್ಟದ ಉದ್ಯೋಗ ಮೇಳ

ಹಾಗಾಗಿ ಇಲ್ಲಿ ಬಂದಿರುವ ಕಂಪನಿಗಳ ಜೊತೆಗೆ ತಮ್ಮ ಸೂಕ್ತ ಮಾಹಿತಿ ನೀಡುವ ಮೂಲಕ ಉದ್ಯೋಗಮೇಳದ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಗ್ರಾಮ ಪಂಚಾಯತ ಸದಸ್ಯರಾದ ಸಿದ್ದರಾಮ ಗೌಡ ಉಪ್ಪಳ ಪ್ರಾಸ್ಥಾವಿಕವಾಗಿ ಮಾತನಾಡಿ, ಉದ್ಯೋಗವಿಲ್ಲದವನ ಜೀವನ ಕೀಡೆ ತಿಂದಂತೆ, ಬದುಕು ಹಸನಾಗಿಸಿಕೊಳ್ಳಲು ದುಡಿಮೆ ಅಗತ್ಯ.

ಇಂದಿನ ದಿನಮಾನಗಳಲ್ಲಿ ಒಂದು ಕುಟುಂಬ ಸಮೃದ್ದ ಜೀವನ ಸಾಗಿಸಬೇಕಾದರೆ ಉದ್ಯೋಗ ಬಹು ಮುಖ್ಯವಾಗಿದೆ.

ಉದ್ಯೋಗ ನೀಡುವಂತ ಕಂಪನಿಗಳು ನಮ್ಮ ಭಾಗಕ್ಕೆ ಬಂದಿದ್ದು ಯುವಕರು ಇದರ ಉಪಯೋಗ ಪಡೆದುಕೊಳ್ಳಬೇಕು. ಇಂತ ಸಮಾಜಮುಖಿ ಕಾರ್ಯದಲ್ಲಿ ಪಾಲ್ಗೋಂಡಿರುವ ಸಂಸ್ಥೆಯವರು ಯುವ ಮಿತ್ರರ ಕಾರ್ಯ ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಕಸಾಪ ಹೋಬಳಿ ಘಟಕದ ಅಧ್ಯಕ್ಷರಾದ ವೀರುಪಣ್ಣ ಕಲ್ಲೂರ, ಗ್ರಾಮ ಪಂಚಾಯತ ಸದಸ್ಯರಾದ ಮಲ್ಲಿಕಾರ್ಜುನ ಬಳಗಾನೂರ, ತಿಮ್ಮಾರೆಡ್ಡೆಪ್ಪ ಆದಾಪೂರ, ವೆಂಕಟೇಶ ಆದಾಪೂರ, ಮುಖ್ಯೋಪಾಧ್ಯಾಯರಾದ ಪರಯ್ಯ ಸ್ವಾಮಿ ಅರವಟಗಿಮಠ, ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿಗಳು, ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷರಾದ ಅಮರೇಶ ಕುಳಗಿ, ಊರಿನ ಯುವ ಮಿತ್ರರು, ನೆಹರು ಯುವ ಕೇಂದ್ರ ಕೊಪ್ಪಳದ ಸಂಯೋಜಕರು, ಯುವ ಮುಖಂಡರಾದ ನಾಗರಾಜ ಬಿಲ್ಗಾರ, ಚಂದ್ರಶೇಖರ ಮುಸಾಲಿ, ವಿರೇಶ ಸಾಲೋಣಿ, ಜಡಿಯಪ್ಪ ಮುಕುಂದಿ ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮ ಪಂಚಾಯತ ಸಿಬ್ಬಂದಿಗಳು ಪಾಲ್ಗೋಂಡು ಕಾರ್ಯಕ್ರಮವನ್ನ ಯಶಸ್ವಿಗೊಳಿಸಿದರು.

ವರದಿ : ನವಲಿ ಸ್ವಾಮಿ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.