ಕೆ.ಎನ್.ಪಿ.ವಾರ್ತೆ,ರಾಮನಗರ,ಜೂ.21;

ಅಮ್ಯೂಸ್‍ಮೆಂಟ್ ಪಾರ್ಕಿನಲ್ಲಿ ರೋಲರ್ ಕೋಸ್ಟರ್ ಮುಗುಚಿ ನಾಲ್ವರು ಗಾಯಗೊಂಡಿರುವ ಘಟನೆ ರಾಮನಗರ ಜಿಲ್ಲೆಯ ಬಿಡದಿಯ ವಂಡರ್ ಲಾ ದಲ್ಲಿ ನಡೆದಿದೆ.

ರೋಲರ್ ಕೋಸ್ಟರ್ ಯಂತ್ರ ತಿರುಗುವ ವೇಳೆ ಜನರಿದ್ದ ರೋಲರ್ ಮಗುಚಿ ಬಿದ್ದಿದೆ. ಈ ವೇಳೆ ಐವರು ಯುವಕರು ನಾಲ್ಕೈದು ನಿಮಿಷಗಳ ಕಾಲ ಮುಗುಚಿದ ಯಂತ್ರದಡಿ ಸಿಲುಕಿದ್ದರು. ಯುವಕರ ಕಾಲುಗಳು ಆಟವಾಡುವ ರೋಲರ್ ಅಡಿ ಸಿಲುಕಿ ಗಾಯವಾಗಿದ್ದು, ನೋವಿನಿಂದ ಚೀರಾಡಿದ್ದಾರೆ. ಈ ದೃಶ್ಯವನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು, ವಿಡಿಯೋದಲ್ಲಿ ಗಾಯಾಳುಗಳು ಅಳುತ್ತಿರುವುದು ಮನಕಲಕುವಂತಿದೆ.

ಆಡಳಿತ ಮಂಡಳಿ ಗಾಯಾಳು ಯುವಕರಿಗೆ ಚಿಕಿತ್ಸೆ ನೀಡಿ ರಾಜಿ ಸಂಧಾನ ಮಾಡಿಕೊಂಡಿದ್ದಾರೆ. ಕಳೆದ ಸೋಮವಾರ ವಂಡರ್ ಲಾ ನಲ್ಲಿ ಈ ಘಟನೆ ನಡೆದಿದ್ದು, ಇದೀಗ ಯುವಕರು ಯಂತ್ರದಡಿ ಸಿಲುಕಿ ನರಳಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.