ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಡಿ.29;

ವಾಟ್ಸಪ್ (WhatsApp ) 2020ರ ಜನವರಿಯಿಂದ ಕೆಲವೊಂದು ಫೋನ್‌ಗಳಲ್ಲಿ ಕೆಲಸ ಮಾಡುವುದಿಲ್ಲ. ಹೀಗೆಂದು ಸ್ವತಃ ವಾಟ್ಸಪ್ ಘೋಷಿಸಿದ್ದು, ಮುಂದಿನ ವರ್ಷ ಕೂಡ ವಾಟ್ಸಪ್ ಬಳಸಬೇಕಾದರೆ ಜನರು ಪರಿಷ್ಕೃತ ಆವೃತ್ತಿ ಬೆಂಬಲಿಸುವ ಸ್ಮಾರ್ಟ್‌ಫೋನ್ ಖರೀದಿಸಬೇಕಿದೆ.

ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಪ್ ಈಗ ಬಹುತೇಕ ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲೂ ಬಳಕೆಯಾಗುತ್ತಿದೆ. ಆದರೆ ಕೆಲವೊಂದು ಆವೃತ್ತಿಗಳಲ್ಲಿ ಮುಂದಿನ ವರ್ಷದಿಂದ ವಾಟ್ಸಪ್ ಕೆಲಸ ಮಾಡುವುದಿಲ್ಲ!

ವಿಂಡೋಸ್ ಫೋನ್‌ಗೆ ಬೆಂಬಲವಿಲ್ಲ :

ಮೈಕ್ರೋಸಾಫ್ಟ್‌ನ ವಿಂಡೋಸ್ ಫೋನ್ ಬಳಸುವ ಗ್ರಾಹಕರಿಗೆ 2019 ಡಿ. 31ರ ನಂತರ ವಾಟ್ಸಪ್ ಬಳಸಲು ದೊರೆಯುವುದಿಲ್ಲ. ಅಲ್ಲಿಗೆ ವಾಟ್ಸಪ್ ಬೆಂಬಲ ಮತ್ತು ಕಾರ್ಯಾಚರಣೆ ವಿಂಡೋಸ್ ಫೋನ್‌ಗೆ ಸ್ಥಗಿತಗೊಳ್ಳಲಿದೆ. ಅಂದರೆ ವಿಂಡೋಸ್ ಫೋನ್ ಬಳಕೆದಾರರಿಗೆ 2020ರ ಜನವರಿಯಿಂದ ವಾಟ್ಸಪ್ ಬಳಕೆ ಸಾಧ್ಯವಿಲ್ಲ ಎಂದು ಫೇಸ್‌ಬುಕ್ ಸ್ಪಷ್ಟಪಡಿಸಿದೆ.

ಐಫೋನ್‌ನಲ್ಲೂ ಸ್ಥಗಿತ

ಹಳೆಯ ಐಓಎಸ್ ಆವೃತ್ತಿ ಬಳಸುವ ಐಫೋನ್‌ಗಳಲ್ಲಿ ಕೂಡ ವಾಟ್ಸಪ್ ಸ್ಥಗಿತವಾಗಲಿದೆ. ಅಂದರೆ ಐಒಎಸ್ 8 ಅಥವಾ ಅದಕ್ಕಿಂತ ಹಿಂದಿನ ಆವೃತ್ತಿಯನ್ನು ಯಾರಾದರೂ ಐಫೋನ್‌ಗಳಲ್ಲಿ ಬಳಸುತ್ತಿದ್ದರೆ, ಅವರಿಗೆ ಫೆ. 1, 2020ರಿಂದ ವಾಟ್ಸಪ್ ಬೆಂಬಲವಿರುವುದಿಲ್ಲ. ವಾಟ್ಸಪ್ ಹಳೆಯ ಐಫೋನ್‌ಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಲಿದೆ.

ಆಂಡ್ರಾಯ್ಡ್ ಫೋನ್‌ಗಳಿಗೂ ಲಭ್ಯವಿಲ್ಲ

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಸುತ್ತಿರುವ ಹಲವರಿಗೂ ವಾಟ್ಸಪ್ ಸಮಸ್ಯೆ ಎದುರಾಗಲಿದೆ. ಅಂದರೆ ಹಳೆಯ ಸ್ಮಾರ್ಟ್‌ಫೋನ್‌ನಲ್ಲಿ ಆಂಡ್ರಾಯ್ಡ್ 2.3.7 ಅಥವಾ ಅದಕ್ಕಿಂತ ಹಳೆಯ ಆಂಡ್ರಾಯ್ಡ್ ಓಎಸ್ ಫೋನ್‌ನಲ್ಲಿದ್ದರೆ, ನಿಮಗೆ ವಾಟ್ಸಪ್ ಬೆಂಬಲ ಲಭ್ಯವಿಲ್ಲ. ಹೀಗಾಗಿ ಆಂಡ್ರಾಯ್ಡ್ ಬಳಕೆದಾರರು ತಮ್ಮ ವಾಟ್ಸಪ್ ಆವೃತ್ತಿಯನ್ನು ಚೆಕ್ ಮಾಡಿಕೊಳ್ಳುವುದು ಒಳಿತು. ಹಳೆಯ ಆವೃತ್ತಿಗೆ ಫೆ. 1, 2020ರಿಂದ ಬೆಂಬಲ ಸ್ಥಗಿತವಾಗಲಿದೆ.

ಯಾಕೆ WhatsApp ಬೆಂಬಲ ಸ್ಥಗಿತ?

ವಾಟ್ಸಪ್ ಹೊಸ ಆಯ್ಕೆಗಳನ್ನು, ಕಾಲಕಾಲಕ್ಕೆ ಪರಿಷ್ಕೃತ ಫೀಚರ್‌ಗಳನ್ನು ಬಳಕೆದಾರರಿಗೆ ನೀಡುತ್ತಿದೆ. ಆದರೆ ಅದಕ್ಕೆ ತಕ್ಕ ಹಾರ್ಡ್‌ವೇರ್ ಮತ್ತು ಓಎಸ್ ಬೆಂಬಲ ಅಗತ್ಯವಾಗಿ ಬೇಕಾಗುತ್ತದೆ. ಹಳೆಯ ಸ್ಮಾರ್ಟ್‌ಫೋನ್‌ಗಳಿಗೆ ಅಂತಹ ಆವೃತ್ತಿ ಒದಗಿಸಿದರೆ ಅದು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಿವುದಿಲ್ಲ, ಅಲ್ಲದೆ, ಅದರ ನಿರ್ವಹಣೆಗೆ ವಾಟ್ಸಪ್‌ಗೆ ಹೆಚ್ಚು ವೆಚ್ಚವಾಗಲಿದೆ. ಹೀಗಾಗಿ ಹಳೆಯ ಆವೃತ್ತಿಗೆ ವಾಟ್ಸಪ್ ಬೆಂಬಲ ಸ್ಥಗಿತಗೊಳಿಸುತ್ತಿದೆ.

​ಬಳಕೆದಾರರು ಏನು ಮಾಡಬೇಕು?

ಹಳೆಯ ಆವೃತ್ತಿ, ಅದರಲ್ಲೂ ವಿಂಡೋಸ್ ಫೋನ್ ಬಳಕೆದಾರರು ವಾಟ್ಸಪ್ ಬಳಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅಗತ್ಯವಿದ್ದಲ್ಲಿ, ಪ್ರಮುಖ ಚಾಟ್ ಇದ್ದಲ್ಲಿ, ಬ್ಯಾಕ್‌ಅಪ್ ತೆಗೆದಿಟ್ಟುಕೊಳ್ಳುವುದು ಒಳಿತು. ಜತೆಗೆ ವಾಟ್ಸಪ್ ಮುಂದೆಯೂ ಬೇಕಾಗಿದ್ದಲ್ಲಿ ಹೊಸ ಫೋನ್‌ಗೆ ಬದಲಾಯಿಸುವ ಮೂಲಕ ವಾಟ್ಸಪ್ ಬಳಕೆಯನ್ನು ಮುಂದುವರಿಸಬಹುದು.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.