ಕೆ.ಎನ್.ಪಿ.ವಾರ್ತೆ,ಗಂಗಾವತಿ,ಜೂ.05;

ಗಂಗಾವತಿ ತಾಲೂಕಿನ ಗಡ್ಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ 30ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಈ ವೇಳೆ ಸಂಘದ ಮಾಜಿ ಅದ್ಯಕ್ಷರಾದ ತಿಪ್ಪಣ್ಣ ಬುನ್ನಟ್ಟಿ ಮಾತನಾಡಿ, ಸದ್ಯದ ದಿನಮಾನಗಳಲ್ಲಿ ಗಿಡಮರಗಳನ್ನು ನಾಶಮಾಡುತ್ತಿರುವುದರಿಂದ ಬಿಸಿಲಿನ ತಾಪ, ಬರಗಾಲ ಹೆಚ್ಚುತ್ತಿದೆ. ನಾವುಗಳೆಲ್ಲ ನಮ್ಮ ಸ್ವಾರ್ಥಕ್ಕೆ ಪರಿಸರವನ್ನು ನಾಶ ಮಾಡುತ್ತಿದ್ದೇವೆ. ಆರೋಗ್ಯವಂಥ ಬದುಕಿಗಾಗಿ ಎಲ್ಲರೂ ಪರಿಸರ ಉಳಿವಿಗೆ ಮುಂದಾಗಬೇಕು. ಗಿಡಮರಗಳನ್ನು ಬೆಳೆಸೋಣ ಎಂದರು.

ಈ ವೇಳೆ ಸಂಘದ ಮಾಜಿ ಅಧ್ಯಕ್ಷ ತಿಪ್ಪಣ್ಣ ಬುನ್ನಟ್ಟಿ ಹಾಗೂ ಗ್ರಾಮದ ಚಿದಾನಂದಗೌಡ, ಕಾರ್ಯದರ್ಶಿಯಾದ ವಿನಯಕುಮಾರ, ಸಿಬ್ಬಂದಿಗಳಾದ ವೀರೇಶ, ಶರಣಬಸವ, ವೀರೇಶ ಎಮ್ ಸೇರಿದಂತೆ ಸಂಘದ ಸರ್ವ ಸದಸ್ಯರು ಭಾಗಿಯಾಗಿದ್ದರು.

ವರದಿ : ಹನುಮೇಶ ಭಾವಿಕಟ್ಟಿ ಡಣಾಪೂರ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.