ಕೆ.ಎನ್.ಪಿ.ವಾರ್ತೆ,ಗಂಗಾವತಿ,ಜೂ.21;

ತಾಲೂಕಿನ ಶ್ರೀರಾಮನಗರದಲ್ಲಿ ಇಂದು ಜಿಲ್ಲಾ ಪಂಚಾಯತ್ ಕೊಪ್ಪಳ, ತಾಲ್ಲೂಕು ಪಂಚಾಯಿತಿ ಗಂಗಾವತಿ ಮತ್ತು ಗ್ರಾಮ ಪಂಚಾಯಿತಿ ಶ್ರೀರಾಮನಗರ ಮತ್ತು ಸಮುದಾಯ ಆರೋಗ್ಯ ಕೇಂದ್ರ ಶ್ರೀರಾಮನಗರ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸ್ವಚ್ಛಮೇವ ಜಯತೆ ಕಾರ್ಯಕ್ರಮದ ಅಡಿಯಲ್ಲಿ ವಿಶ್ವ ಅಂತರಾಷ್ಟ್ರೀಯ ಯೋಗ ದಿನಾಚರಣೆ ಮತ್ತು ಶ್ರಮದಾನ ಕಾರ್ಯಕ್ರಮಗಳು ಜರುಗಿದವು.

ಬಸವ ಗುರೂಜಿ ಪಿರಾಮಿಡ್ ರೇಖಿ ಕೇಂದ್ರ ಇವರುಗಳು ಯೋಗಾಸನಗಳನ್ನು ಮಾಡಿಸುತ್ತಾ ಕಾರ್ಯಕ್ರಮದ ಕುರಿತು ಮಾತನಾಡಿ, ಯೋಗಾಭ್ಯಾಸವನ್ನು ದಿನನಿತ್ಯ ಮಾಡುವುದರಿಂದ ಆರೋಗ್ಯಕರ ಜೀವನ ಸಾಗಿಸಬಲ್ಲೆವು.

ದೇಹದ ಸದೃಡತೆ ಹಾಗೂ ದೈಹಿಕ ಮಾನಸಿಕ ಒತ್ತಡಗಳಿಂದ ದೂರವಾಗಲು ಯೋಗಾಭ್ಯಾಸ ಬಹಳ ಉಪಯುಕ್ತವಾಗಿದೆ. ವಿದ್ಯಾರ್ಥಿಗಳಿಗೆ ಜ್ಞಾಪಕ ಶಕ್ತಿ ಹೆಚ್ಚಿಸಿಕೊಳ್ಳಲು ಪ್ರತಿನಿತ್ಯ ಯೋಗಾಭ್ಯಾಸ ಮಾಡಿ ಅರೋಗ್ಯ ಕಾಪಾಡಿಕೊಳ್ಳಿ ಎಂದರು. ಬಳಿಕ ಶ್ರೀರಾಮನಗರದ ಕೆನಲ್ ನ ಸ್ವಚ್ವತೆ ಕಾರ್ಯಕ್ಕೆ ಲಕ್ಷ್ಮೀಪತಿ(ಇಒ) ಕಾರ್ಯನಿರ್ವಾಹಣಾಧಿಕಾರಿಯವರು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ತಾ.ಪಂ.ಅಧ್ಯಕ್ಷರು ಮಲ್ಲಿಕಾರ್ಜುನ ಸುಳೆಕಲ್, ಕಾರ್ಯನಿರ್ವಹಣಾಧಿಕಾರಿ (ಇಒ) ಲಕ್ಷ್ಮೀಪತಿ, ಶ್ರೀರಾಮನಗರದ ಗ್ರಾ.ಪಂ.ಅಧ್ಯಕ್ಷರು ಕೆ.ಶ್ರೀನಿವಾಸ, ಪಿಡಿಒ ಮಹೇಶ, ಸ.ಆ.ಕೇಂದ್ರ ವೈದ್ಯಾಧಿಕಾರಿಗಳು ವೀರನಾಯಕ, ತಾಲೂಕ ಪಂ.ಸದಸ್ಯರಾದ ಮಹ್ಮದ್ ರಫೀ, ಹಾಗೂ ಸಿದ್ದಣ್ಣ ಜಕ್ಲಿ, ಸುಮಂಗಳ, ತ್ರಿವೇಣಿ, ವೀರವೇಣಿ, ಆ.ಇ. ಗುರುರಾಜ.ಹೆಚ್.ಎಂ ಹಾಗೂ ಸಿಬ್ಬಂದಿ, ಮರಳಿ, ಹೊಸ್ಕೇರಾ, ಗುಂಟೋಜಿ, ಬರಗೂರ ಗ್ರಾಂ.ಪ. ಅಧ್ಯಕ್ಷರು, ಸದಸ್ಯರು ಹಾಗೂ ಎ.ಕೆ.ಆರ್ .ಡಿ ಕಾಲೇಜ್, ಸರಕಾರಿ ಪಿ.ಯು. ಕಾಲೇಜು ವಿದ್ಯಾರ್ಥಿ/ನಿಗಳು, ಸಿಬ್ಬಂದಿವರ್ಗ, ಕ್ಲೀನ್ & ಗ್ರೀನ್ ಫೋರ್ಸ ತಂಡ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಯುವಕರು, ಇನ್ನಿತರರು ಭಾಗಿಯಾಗಿದ್ದರು.

ವರದಿ : ಹನುಭಾವಿ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.