ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಆ.05;

ದೇಶಾದ್ಯಂತ ನಿನ್ನೆ ಸ್ನೇಹಿತರ ದಿನಾಚರಣೆ ಆಚರಣೆ ಮಾಡಿಕೊಂಡಿದ್ದು.. ಸ್ನೇಹಿತರು ಪರಸ್ಪರ ಬ್ಯಾಂಡ್ ಕಟ್ಟಿ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಸರ್ವೇ ಸಾಮಾನ್ಯವಾಗಿ ಕಂಡುಬಂದಿತು..ಆದ್ರೆ ದಾವಣಗೆರೆಯ ಕೆಲ ಪುಟ್ಟ ಮಕ್ಕಳು ವಿನೂತನವಾಗಿ ಸ್ನೇಹಿತರ ದಿನಾಚರಣೆ ಆಚರಿಸಿದ್ರು..

ದಾವಣಗೆರೆಯ ಕೆಬಿ ಬಡಾವಣೆಯ ಸೋನಿ ಎನ್ನುವ ಸಾಕು ನಾಯಿಗೆ ಫ್ರೆಂಡ್​ಶಿಪ್ ಬ್ಯಾಂಡ್ ಕಟ್ಟಿ ಶುಭಾಶಯ ತಿಳಿಸಿದರು. ಸೋನು ಕೆಬಿ ಬಡಾವಣೆಯಲ್ಲಿ ಪ್ರತಿಯೊಬ್ಬರಿಗೂ ಪ್ರೀತಿ ಪಾತ್ರವಾದ ನಾಯಿಯಾಗಿದ್ದು, ಪ್ರತಿಯೊಬ್ಬರ ಬಳಿ ಸ್ನೇಹಮಯವಾಗಿ ಇರುತ್ತದೆ. ಆದ್ದರಿಂದ ಕೇವಲ ಮನುಷ್ಯರಷ್ಟೇ ಅಲ್ಲ ಪ್ರಾಣಿಗಳೊಂದಿಗೂ ಸ್ನೇಹಿತರ ದಿನಾಚರಣೆ ಆಚರಣೆ ಮಾಡಿಕೊಳ್ಳಬೇಕು ಎಂದು ವಿನೂತನವಾಗಿ ಮಕ್ಕಳು ಹಾಗೂ ನಾಯಿ ಮಾಲೀಕ ನಾಗಭೂಷಣ್ ಸೇರಿಕೊಂಡು ಸೋನು ನಾಯಿಯ ಕೈಗೆ ಫ್ರೆಂಡ್​ಶಿಪ್ ಬ್ಯಾಂಡ್ ಕಟ್ಟಿ ಸ್ನೇಹಿತರ ದಿನಾಚರಣೆಯನ್ನು ಆಚರಣೆ ಮಾಡಿ ಸಂಭ್ರಮಿಸಿದರು.

ವರದಿ : ಮಹಮ್ಮದ್ ಅಬ್ದುಲ್ ರಖೀಬ್

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.