ಕೆ.ಎನ್.ಪಿ.ವಾರ್ತೆ,ಜಗಳೂರು,ಜು.16;

ಜಗಳೂರು ತಾಲೂಕು ಗುತ್ತಿದುರ್ಗ ಗ್ರಾಮದಲ್ಲಿ ಎರಡು ತಲೆ, ಒಂದು ದೇಹ, ಇರುವ ಮೇಕೆ ಮರಿ ಜನನವಾಗಿದೆ. ಗುತ್ತಿದುರ್ಗ ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಈ ತರಹದ ವಿಚಿತ್ರವಾದ ಮೇಕೆ ಜನನವಾಗಿದ್ದು ಅಚ್ಚರಿ ತರಿಸಿದೆ.

ಗ್ರಾಮದ ಬೊಮ್ಮಪ್ಪರ ಈರಣ್ಣ ಇವರು ಸಾಕಿರುವ ಮೇಕೆಯೊಂದು ಸೋಮವಾರ ರಾತ್ರಿ 8ಗಂಟೆಗೆ, ಈ ತರಹ ವಿಚಿತ್ರವಾದ ಮರಿ ಹಾಕಿದೆ. ಮೇಕೆಯು ಮರಿ ಹಾಕುವ ಸಂದರ್ಭದಲ್ಲಿ ತೀವ್ರ ವೇದನೆಯನ್ನು ಅನುಭವಿಸಿದ್ದು, ಒಂದೇ ಬಾರಿ ಎರಡು ತಲೆ ಹೊರಬರುವುದನ್ನು ಕಂಡು ಎರಡು ಮೇಕೆ ಮರಿ ಇರುವುದೆಂದು ತಪ್ಪಾಗಿ ಕಲ್ಪಿಸಿ, ಒಂದು ಮೇಕೆ ಮರಿಯ ತಲೆಯನ್ನು ಹಿಂದಕ್ಕೆ ತಳ್ಳಿದ್ದಾರೆ, ಒಂದು ತಲೆಯನ್ನು ಹೊರಗೆ ಎಳೆದುಕೊಂಡಾಗ, ಈ ವಿಚಿತ್ರ ಮರಿ ಅಸುನೀಗಿದೆ.

ಇಂತಹ ಮರಿಯು ಈ ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಹುಟ್ಟಿರುವುದರಿಂದ ಮೇಕೆ ಮಾಲೀಕ ಈರಣ್ಣನವರು ಬದುಕಿದ್ದರೆ ಚೆನ್ನಾಗಿತ್ತು, ಹೇಗೆ ಎರಡು ತಲೆಯಲ್ಲಿ ಬದುಕುತ್ತಿತ್ತು ಎಂಬುದನ್ನು ನೋಡಬೇಕಾಗಿತ್ತು, ದುರದೃಷ್ಟವಶಾತ್ ಅಸುನೀಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವರದಿ : ವೇದಮೂರ್ತಿ ಗುತ್ತಿದುರ್ಗ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.