ಕೆ.ಎನ್.ಪಿ.ವಾರ್ತೆ,ಮುನಾರ್(ಕೇರಳ),ಸೆ.09;

ವೇಗವಾಗಿ ಚಲಿಸುತ್ತಿದ್ದ ಕಾರಿನಿಂದ 1 ವರ್ಷದ ಹೆಣ್ಣು ಮಗು ಕೆಳಗೆ ಬಿದ್ದಿದೆ. ಆದರೆ ಪೋಷಕರಿಗೆ ಇದರ ಪರಿವೇ ಇಲ್ಲದೆ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾರೆ. ಇನ್ನು ಕೆಳಗೆ ಬಿದ್ದ ಮಗು ಅಳುತ್ತಾ ರಸ್ತೆ ಮಧ್ಯೆ ಅಂಬೆಗಾಲಿಡುತ್ತಾ ಓಡಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೋಷಕರ ವಿರುದ್ಧ ನೆಟ್ಟಿಗರು ಕಿಡಿಕಾರುತ್ತಿದ್ದಾರೆ.

ಕೇರಳದ ಇಡುಕಿ ಜಿಲ್ಲೆಯ ಮುನಾರ್ ನಲ್ಲಿ ಈ ಘಟನೆ ನಡೆದಿದೆ. ಕಾರೊಂದು ವೇಗವಾಗಿ ಚಲಿಸಿದ್ದು ಕಾರಿನಿಂದ ಮಗುವೊಂದು ಕೆಳಗೆ ಬಿದ್ದಿದೆ. ನಂತರ ಮಗು ಅಳುತ್ತಾ ಅಂಬೆಗಾಲಿಡುತ್ತಾ ರಸ್ತೆ ಮಧ್ಯೆ ಓಡಾಡುತ್ತಿದೆ. ಇದನ್ನು ನೋಡಿದ ಸ್ಥಳೀಯರು ಮಗುವನ್ನು ರಕ್ಷಿಸಿ ಪೋಷಕರಿಗೆ ಹಸ್ತಾಂತರಿಸಿದ್ದಾರೆ.

ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಮಗು ಕೆಳಗೆ ಬಿದ್ದ ನಂತರ ಯಾವುದೇ ವಾಹನಗಳು ಹಿಂದೆ ಬರದಿದ್ದರಿಂದ ಮಗು ಸುರಕ್ಷಿತವಾಗಿದೆ. 

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.