ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಡಿ.18;

ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ನೀಡುವಂತೆ ಆಗ್ರಹಿಸಿ ಜಗಳೂರು ತಾಲ್ಲೂಕಿನ ಚಿಕ್ಕ ಉಜ್ಜಯನಿ ಗ್ರಾಮದ ಕಾರ್ಮಿಕರು ತಾಲ್ಲೂಕು ಪಂಚಾಯತಿ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದರು.

ಕೇವಲ 7 ದಿನ ಮಾತ್ರ ಕೆಲಸ ನೀಡಲಾಗುತ್ತಿದೆ. ಈ ಮೊದಲು 14 ದಿನ ಕೆಲಸ ನೀಡುತ್ತಿದ್ದರು ಎಂದು ಕಾರ್ಮಿಕರು ಆರೋಪಿಸಿದರು. ಅಲ್ಲದೆ ಮೊದಲು ಚಿಕ್ಕ ಉಜ್ಜಯಿನಿ ಕೆರೆಯಲ್ಲಿ ಕೆಲಸ ನೀಡಲಾಗುತ್ತಿತ್ತು ಆದರೆ ಇದೀಗ ಗಡಿ ಮಾಕುಂಟೆ ಗ್ರಾಮದಲ್ಲಿ ಕೆಲಸ ನೀಡುತ್ತಿದ್ದು ನಮಗೆ ದೂರವಾಗುತ್ತಿದೆ. ನಮಗೆ ನಮ್ಮ ಗ್ರಾಮದಲ್ಲೇ ತಿಂಗಳಿಗೆ 14 ದಿನ ಕೆಲಸ ನೀಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಂಜುನಾಥ, ಕರಿಯಪ್ಪ, ಉಮೇಶ್, ಕೆಂಚಪ್ಪ, ಈರಯ್ಯ, ನಾಗೇಂದ್ರಪ್ಪ, ನಾಗಮ್ಮಾ, ಮಾರಮ್ಮ, ಲಲಿತಮ್ಮ, ಚೌಡಮ್ಮ, ಚನ್ನಬಸಮ್ಮ, ಮಹಾಲಕ್ಷ್ಮಿ, ಅಮೃತ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ : ಮಹಮ್ಮದ್ ಅಬ್ದುಲ್ ರಖೀಬ್

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.