ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಏ.20;
ಪಿ.ಟಿ ಪರಮೇಶ್ವರ್ ನಾಯಕ್, ಉಚ್ಚಂಗೆಮ್ಮನ ಸನ್ನಿಧಿಯಲ್ಲಿ ಬಿ ಫಾರ್ಮ್ ಗೆ ಪೂಜೆ ಮಾಡಿಸಿದರು.
ಹರಪನಹಳ್ಳಿ ತಾಲ್ಲೂಕಿನ ಉಚ್ಚoಗೆಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿದ ಮಾಜಿ ಕಾರ್ಮಿಕ ಸಚಿವ ಪಿ.ಟಿ ಪರಮೇಶ್ವರ್ ನಾಯಕ್, ದೇವಿಯ ದರ್ಶನ ಪಡೆದು, ಬಿ ಫಾರ್ಮ್ ಗೆ ಪೂಜೆ ಮಾಡಿಸಿದರು.
ಈ ವೇಳೆ ಮಾತನಾಡಿದ ಪಿ.ಟಿ ಪರಮೇಶ್ವರ ನಾಯಕ್, ಪ್ರತಿ ಚುನಾವಣೆ ಸಂದರ್ಭದಲ್ಲಿ ನಾವು ಶಕ್ತಿ ದೇವತೆ ಉಚ್ಚoಗೆಮ್ಮನಿಗೆ ಪೂಜೆ ಮಾಡಿಸಿ ನಾಮಪತ್ರ ಸಲ್ಲಿಸುವುದು ಹಿಂದಿನಿಂದ ನಡೆದುಕೊಂಡು ಬಂದಿದೆ. ಅಂತೆಯೇ ಈ ಬಾರಿಯೂ ಸಹ ಉಚ್ಚಂಗೆಮ್ಮನ ಸನ್ನಿಧಿಯಲ್ಲಿ ಬಿ ಫಾರ್ಮ್ ಗೆ ಪೂಜೆ ಮಾಡಿಸಿರುವುದಾಗಿ ತಿಳಿಸಿದರು.
ಈ ವೇಳೆ ಉಚ್ಚoಗಿದುರ್ಗದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಹನುಮಂತಪ್ಪ ಹರಪನಹಳ್ಳಿ, ಬಿಳಿ ಚೋಡ್ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷರಾದ ಶಿವಕುಮಾರ್ ಸ್ವಾಮಿ, ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಪೊಮ್ಯಾನಾಯಕ್ ಸೇರಿದಂತೆ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಕೆಂಚಪ್ಪ ಗುಡಿ, ರಮೇಶ್ ಉಪಸ್ಥಿತರಿದ್ದರು.
ವರದಿ : ಬಸವರಾಜ್ ಪೂಜಾರ್