ಕೆ.ಎನ್.ಪಿ.ವಾರ್ತೆ,ನವದೆಹಲಿ,ಜ.01;

ಹೊಸವರ್ಷದ ಮುನ್ನಾದಿನವೇ ಕೇಂದ್ರ ಸರಕಾರ ರೈಲು ಪ್ರಯಾಣಿಕರಿಗೆ ಶಾಕ್‌ ನೀಡಿದೆ. ರೈಲ್ವೆ ಸೇವೆಗಳ ಶುಲ್ಕ ಹೆಚ್ಚಳ ಮಾಡಿ ಕೇಂದ್ರ ಸರಕಾರ ಘೋಷಣೆ ಮಾಡಿದೆ.

ಉಪ ನಗರ ರೈಲ್ವೆ ಸೇವೆಗಳ ಶುಲ್ಕ ಹೊರತುಪಡಿಸಿ ಉಳಿದ ಶುಲ್ಕಗಳು ಹೊಸ ವರ್ಷದ ದಿನದಿಂದಲೇ (ಜನವರಿ 1, 2020) ಹೆಚ್ಚಾಗಲಿದೆ.

ಮಂಗಳವಾರ ರಾತ್ರಿ ಆದೇಶ ಹೊರಡಿಸಲಾಗಿದೆ. ಸಾಮಾನ್ಯ, ಹವಾನಿಯಂತ್ರಿತೇತರ ರೈಲು ದರಗಳು ಪ್ರತಿ ಕಿಲೋ ಮೀಟರ್‌ ಪ್ರಯಾಣಕ್ಕೆ 1 ಪೈಸೆ ಏರಿಕೆಯಾಗಲಿದೆ.

ಮೇಲ್‌, ಎಕ್ಸ್‌ಪ್ರೆಸ್‌, ಎಸಿ ರೈಲುಗಳಲ್ಲಿ ಪ್ರಯಾಣ ದರ 2 ಪೈಸೆ, ಹವಾನಿಯಂತ್ರಿತ ರೈಲುಗಳಲ್ಲಿ ಪ್ರತಿ ಕಿಲೋ ಮೀಟರ್‌ಗೆ 4 ಪೈಸೆ ಏರಿಕೆಯಾಗಲಿದೆ.

ಶತಾಬ್ಧಿ, ರಾಜಧಾನಿ, ತುರಂತ್ ರೈಲುಗಳ ಸೇವಾ ಶುಲ್ಕವೂ ಹೆಚ್ಚಾಗಲಿದೆ. ಮುಂಗಡ ಟಿಕೆಟ್‌ ಮತ್ತು ಸೂಪರ್‌ ಫಾಸ್ಟ್‌ ಶುಲ್ಕದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.