ಕೆ.ಎನ್.ಪಿ.ವಾರ್ತೆ,ಕೊಪ್ಪಳ,ನ.10;
ಕೊಪ್ಪಳ ತಾಲ್ಲೂಕಿನ ಹಳೇ ಬಂಡಿಹರ್ಲಾಪುರ ಗ್ರಾಮದಲ್ಲಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಸರಳವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷ ಮಹ್ಮದ ಪಿ.ಮಾತನಾಡಿ, ಟಿಪ್ಪು ಒಬ್ಬ ಮಹಾನ್ ಸೇನಾನಿ. ದೇಶಕ್ಕಾಗಿ ತಮ್ಮ ಎರಡು ಮುದ್ದು ಮಕ್ಕಳನ್ನ ಒತ್ತೆಯಾಳಾಗಿ ಇಟ್ಟು, ರಾಜ್ಯವನ್ನ ಕಾಪಾಡಿದಂತವರು. ಇವರ ಜಯಂತಿ ಬಗ್ಗೆ ಬೇರೆ ಬೇರೆ ರೀತಿಯಲ್ಲಿ ಮಾತನಾಡುವುದದು ಸರಿಯಲ್ಲ .ಇವರು ಅಪ್ಪಟ ಅಪರಂಜಿ ಆಗಿನ ಕಾಲದಲ್ಲಿ ಮದ್ಯ ಮಾರಾಟ, ವೈಶ್ಯವಾಟಿಕೆಯನ್ನ ನಿಷೇಧ ಮಾಡಿದವರು.
ಟಿಪ್ಪು ಬಗ್ಗೆ ನಾವು ಪ್ರಾಥಮಿಕ ಶಿಕ್ಷಣದಿಂದ ಓದುತ್ತ ಬಂದಿದ್ದೇವೆ. ಅವರು ಒಬ್ಬ ದೇಶ ಭಕ್ತ. ಆ ದೇಶ ಭಕ್ತನ ನೆನೆಪಿಸುವ ಜಯಂತಿಯನ್ನು ಎಲ್ಲರು ಸೇರಿ ಅಚರಿಸಲು ಅನುವು ಮಾಡಿಕೊಡಿ. ಇವರು ಕೇವಲ ಒಂದೆ ವರ್ಗಕ್ಕೆ ಸೀಮಿತವಲ್ಲ. ಮಕ್ಕಳೆ ಇದು ನಿಮ್ಮ ಗಮನದಲ್ಲಿ ಇಡಿ, ನಾವು ದೇಶಕ್ಕಾಗಿ ದುಡಿದವರನ್ನ ಎಂದು ಮರೆಯುವದು ಬೇಡ ಎಂದರು.
ಈ ವೇಳೆ ಗ್ರಾಮ ಪಂಚಾಯತ ಅಧ್ಯಕ್ಷೆ ಕಮಲಮ್ಮ, ಮಾಜಿ ತಾಲೂಕ ಪಂಚಾಯತ ಅಧ್ಯಕ್ಷ ದೇವಪ್ಪ ಮೇಕಾಳಿ, ಗ್ರಾಮ ಪಂಚಾಯತ ಸದಸ್ಯರಾದ ಚಮೈಬೂಬ ಆಲಂ, ಚನ್ನಕೃಷ್ಣ ಗೊಲ್ಲರ, ಹುಸೇನ ಬಾಷ, ರಾಮಣ್ಣ, ಸಿಧ್ಧಮ್ಮ, ರ್ಮುತುಜಸಾಬ ಬಾಗ್ಲಿ, ಬಾಷಸಾಬ ಜಿ.ರಾಜಸಾಬ, ಭೀಮಶೇಪ್ಪ, ಶಿವಪ್ಪ, ಯಂಕಪ್ಪ ಕುರದಗಡ್ಡಿ, ಉಪಾಧ್ಯಕ್ಷ ರೀಯಾಜ್ ಮುದಗಲ್, ಆಸೀಫ್ ಖಾನ್, ಮಹೇಬೂಬ, ಮರ್ಧಾನ, ತೋಷಿಪ್ ಚಟ್ನಿ, ಅಬ್ಬುಬಕ್ಕರ್, ಹುಸೇನ ಪೀರಾ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಸಮೀರ ಬಳೆಗೆರ ಕಾರ್ಯಕ್ರಮದ ನಿರೂಪಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…
ನೀವು ಕೂಡ ಬರೆಯಬಹುದು :
ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.
ಈ-ವಿಳಾಸ : karnatakanewsportal@gmail.com
ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.
Tippu Sultan jayanthi ya prauka tha visthara vagi mattu Arathapurnavagi vivarvannu k p n report nali kotidake aathmiya vagi vandanegalu ,,,,,k p n is best report in karanataka