ಕೆ.ಎನ್.ಪಿ.ವಾರ್ತೆ,ಗಂಗಾವತಿ,ನ.09;

ಟಿಪ್ಪು ಜಯಂತಿ ಕಳೆದ ಮೂರು ವರ್ಷಗಳಿಂದ ವಿವಾದಕ್ಕೊಳಗಾಗಿದ್ದು, ರಾಜ್ಯದಲ್ಲಿ ಶಾಂತಿಭಂಗವಾಗಿರುವುದು ಬಹಳ ಖೇದಕರ ಸಂಗತಿಯಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಟಿಪ್ಪು ಜಯಂತಿ ಕಾಂಗ್ರೆಸ್ ಪಕ್ಷದ ಆಚರಣೆ ಎಂದು ತೋರಿಸಿಕೊಡಲು ಜಯಂತ್ಯೋತ್ಸವ ಉದ್ಘಾಟನೆ ಮಾಡಲು ಹಿಂದೇಟು ಹಾಕುವುದರ ಮೂಲಕ ರಾಜ್ಯದಲ್ಲಿ ಪ್ರಗತಿಪರರ ಟೀಕೆಗೆ ಗುರಿಯಾಗಿದ್ದಾರೆ. ಇದು ಖಂಡನಾರ್ಹ ಸಹ ಹೌದು ಎಂದು ಭಾರಧ್ವಾಜ್ ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.

ಕರ್ನಾಟಕ ರಾಜ್ಯಕ್ಕೆ ಟಿಪ್ಪು ಹೋರಾಟಗಳನ್ನು ಮಾಡುತ್ತಾ, ದುಡಿಯುವ ವರ್ಗಗಳ ಜೀವನ ಸುಧಾರಿಸಲು ಪ್ರಯತ್ನ ಮಾಡಿದ್ದಾನೆ. ಮೊಟ್ಟ ಮೊದಲನೆಯವನಾಗಿ ಭೂಸುಧಾರಣೆ ತಂದನು. ಕೇರಳದ ನಂಬೂದ್ರಿಗಳ ದೌರ್ಜನ್ಯಕ್ಕೊಳಪಟ್ಟು, ಹಿಂದೂ ಶೂದ್ರ ಮಹಿಳೆಯರು ಕುಪ್ಪಸವನ್ನು ಕಳೆದುಕೊಂಡಾಗ ಅವರ ಅಣ್ಣನಾಗಿ ಟಿಪ್ಪು ಕುಪ್ಪಸಗಳನ್ನು ದಾನ ಮಾಡಿದ. ಇಂತಹ ಸಾವಿರಾರು ಜನಪರ ಕೆಲಸಗಳನ್ನು ಮಾಡಿ, ಬ್ರಿಟಿಷರ ವಿರುದ್ಧ ಸಮರ ಸಾರಿದ. ಇಂತಹ ಹೋರಾಟಗಾರನನ್ನು ಮುಸ್ಲೀಂ ಮೂಲಭೂತವಾದಿಗಳು ಹಾಗೂ ಹಿಂದೂ ಕೋಮುವಾದಿಗಳು ತಮ್ಮ ವೈಯುಕ್ತಿಕ ಹಿತಾಸಕ್ತಿಗೆ ಚರಿತ್ರಾಹರಣ ಮಾಡಿ ಬೀದಿಗೆ ತಂದಿರುವುದು ವಿಷಾದನೀಯ.

ಕರ್ನಾಟಕ ಸರ್ಕಾರ ಖಾಸಗಿ ಜಯಂತಿಗಳನ್ನು ನಿಷೇಧಿಸಿ, ಸರ್ಕಾರಿ ಜಯಂತಿಗಳಲ್ಲಿ ಜನರು ಪಾಲ್ಗೊಳ್ಳಬೇಕೆಂದು ಒತ್ತಾಯಿಸುತ್ತಿರುವುದು ಒಂದು ರೀತಿಯ ಸರ್ವಾಧಿಕಾರವಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರು, ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ಎ.ಹೆಚ್. ವಿಶ್ವನಾಥ್‍ರವರು ಟಿಪ್ಪು ಬಗ್ಗೆ ತಮ್ಮ ನಿಲುವು ಕೂಡಲೇ ಪ್ರಕಟಿಸಬೇಕು. ಇಲ್ಲದಿದ್ದಲ್ಲಿ ಇವರನ್ನೂ ಸಹ ಮುಸ್ಲಿಂ ಮೂಲಭೂತವಾದಿಗಳು, ಹಿಂದೂ ಕೋಮುವಾದಿಗಳ ಜೊತೆಗೆ ಸೇರಿಸಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.