ಕೆ.ಎನ್.ಪಿ.ವಾರ್ತೆ,ಗಂಗಾವತಿ,ನ.05;
ಈ ಜಲ ವರ್ಷದಲ್ಲಿ ತುಂಗಭದ್ರಾ ಜಲಾಶಯ ಸಂಪೂರ್ಣ ತುಂಬಿ 14 ವರ್ಷಗಳ ನಂತರ ನೀರು ಹೊಳೆಗೆ ಹರಿದಿದೆ. ಇದರಿಂದಾಗಿ 2ನೇ ಬೆಳೆ ಖಚಿತವೆಂದು ಆಸೆಪಟ್ಟ ರೈತರಿಗೆ ಜಲಾಶಯದಲ್ಲಿ ಸುಮಾರು 10 ಟಿ.ಎಂ.ಸಿ ನೀರು ಮಾಯವಾಗಿದ್ದು ನಿರಾಸೆಯಾಗಿದೆ. ಆದ್ದರಿಂದ ನೀರಿನ ಲಭ್ಯತೆಯ ಬಗ್ಗೆ ಹಾಗೂ ಎರಡನೇ ಬೆಳೆಯ ಬಗ್ಗೆ ಚರ್ಚಿಸಲು ನಾಳೆ ಬೆಳಿಗ್ಗೆ 11:00 ಗಂಟೆಗೆ ಗಂಗಾವತಿ ಎ.ಪಿ.ಎಂ.ಸಿ ಯಲ್ಲಿ ರೈತರ ಸಭೆ ಕರೆಯಲಾಗಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಪಾಲ್ಗೊಳ್ಳಲು ತುಂಗಭದ್ರಾ ಉಳಿಸಿ ಆಂದೋಲನಾ ಸಮಿತಿಯ ಗೌರವಾಧ್ಯಕ್ಷ ಭಾರಧ್ವಾಜ್ ಮನವಿ ಮಾಡಿದ್ದಾರೆ.
ಈ ಜಲವರ್ಷದಲ್ಲಿ ಕರಾವಳಿಯಲ್ಲಿ ಸಮರ್ಪಕ ಮಳೆಯಾಗಿ ತುಂಗಭದ್ರಾ ಜಲಾಶಯ ತುಂಬಿತ್ತು. ಕರ್ನಾಟಕ ಸರ್ಕಾರದ ತಾಶ್ಚಾರದಿಂದ ಬಲದಂಡೆಯ ಮೇಲ್ಮಟ್ಟದ ಕಾಲುವೆಯ ಮುಖಾಂತರ ಆಂಧ್ರಕ್ಕೆ ಸುಮಾರು 07 ಟಿ.ಎಂ.ಸಿ ನೀರು ಹೆಚ್ಚುವರಿಯಾಗಿ ಹರಿದುಹೋಗಿದೆ. ಇದರಿಂದಾಗಿ ರಾಯಚೂರು ಜಿಲ್ಲೆ ಎಡದಂಡೆ ಕಾಲುವೆಯ 05 ತಾಲೂಕಿನ ರೈತರು ಬೇಸಿಗೆ ಬೆಳೆಗೆ ನೀರು ಸಿಗದಂತಾಗಿ ಕಂಗಾಲಾಗಿದ್ದಾರೆ.
ಸರ್ಕಾರವನ್ನು ಕೂಡಲೇ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಎರಡನೇ ಬೆಳೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಒತ್ತಾಯಿಸುವುದು ಹಾಗೂ ರೈತರ ಮುಂದಿನ ಹೋರಾಟಗಳ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಗುವುದು. ಆದ್ದರಿಂದ ಈ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯ ರೈತರ ಉಪಸ್ಥಿತಿ ಅನಿವಾರ್ಯವಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ತುಂಗಭದ್ರಾ ಉಳಿಸಿ, ಆಂದೋಲನಾ ಸಮಿತಿ ರೈತರಲ್ಲಿ ಕೋರಿದೆ.
ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…
ನೀವು ಕೂಡ ಬರೆಯಬಹುದು :
ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.
ಈ-ವಿಳಾಸ : karnatakanewsportal@gmail.com
ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.