ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಏ.27;

ಬೇಸಿಗೆ ಶುರುವಾಗುತ್ತಲೇ ಜಗಳೂರು ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ನೀರಿನ ಬವಣೆ ಉಂಟಾಗಿದ್ದು ಕುಡಿಯಲು ನೀರು ಸಿಗದಿದಕ್ಕೆ ನೀರಿನ ತೊಟ್ಟಿಗೆ ಎಗರಿದ ಎಮ್ಮೆ ಬಳಿಕ ಒದ್ದಾಟ ನಡೆಸಿದ ಕರುಳು ಹಿಂಡುವಂತಹ ವಿಡಿಯೋ ವೈರಲ್ ಆಗಿದೆ…

ಹೌದು.. ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಆಹಾಕಾರ ಉಂಟಾಗಿದೆ. ದಾವಣಗೆರೆ ಬರಪೀಡಿತ ತಾಲ್ಲೂಕು ಎಂದು ಘೋಷಣೆಯಾಗಿರುವ ಜಗಳೂರು ತಾಲ್ಲೂಕಿನಲ್ಲಿ ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ದಿನಗಟ್ಟಲೇ ನಿಂತರು ಒಂದು ಕೊಡ ನೀರು ಸಿಗದ ಪರಿಸ್ಥಿತಿ ತಲೆದೋರಿದೆ. ಇಷ್ಟಿದ್ದರು ಜನ‌ಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನಹರಿಸಿಲ್ಲ. ಇದರಿಂದಾಗಿ ಜನರು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಹಾಲೇಕಲ್ಲು ಗ್ರಾಮದಲ್ಲಿ ನೀರಿನ ಸಮಸ್ಯೆ ಗಂಭೀರ ಸ್ವರೂಪ ತಾಳಿದೆ. ಗ್ರಾಮದಲ್ಲಿ ಜನಗಳಿಗೆ ಕೇವಲ ಎರಡು ಟ್ಯಾಂಕ್ ಕಳಿಸಿ ಕೊಡಲಾಗುತ್ತದೆ. ಆದರೆ ಜಾನುವಾರುಗಳಿಗೆ ಕುಡಿಯಲು ನೀರಿನ ಸಮಸ್ಯೆ ಎದುರಾಗಿದೆ. ಕುಡಿಯಲು ನೀರಿಲ್ಲದೆ ಜಾನುವಾರ ಸ್ಥಿತಿ ನೋಡಿ ಸಂಕಟ ಪಡುವಂತಿದೆ.

ಗ್ರಾಮದಲ್ಲಿ ಜಾನುವಾರುಗಳು ನೀರು ಕುಡಿಯಲು ಎರಡು ತೊಟ್ಟಿಗಳಿದ್ದು ಸುಮಾರು ಮೂರು ತಿಂಗಳು ಈ ತೊಟ್ಟಿಗೆ ನೀರು ಬಿಟ್ಟಿಲ್ಲ. ಹೀಗಾಗಿ ಬಾಯಾರಿಕೆ ತಾಳಲಾರದೇ ಎಮ್ಮೆಯೊಂದು ನೀರು ಕುಡಿಯಲು ಆಗಮಿಸಿದೆ, ತಳದಲ್ಲಿದ್ದ ಅಳಿದುಳಿದ ನೀರು ಬಾಯಿಗೆ ಸಿಕ್ಕಿಲ್ಲ, ಬಾಯಾರಿಕೆಯಿಂದ ಎಮ್ಮೆ ತೊಟ್ಟಿಗೆ ಜಿಗಿದಿದೆ. ತಳದಲ್ಲಿದ್ದ ನೀರನ್ನು ಕುಡಿದಿದೆ. ಆದರೆ ಬಳಿಕ ಹೊರ ಬರಲು ಹರಸಾಹಸ ಪಡುತ್ತಿರುವ ದೃಶ್ಯ ಕರಳು ಹಿಂಡುವಂತಿದೆ. ಈ ಒಂದು ದೃಶ್ಯವನ್ನು ಗ್ರಾಮದ ಯುವಕ ಬಸವರಾಜ್ ಎಂಬಾತ ತೆಗೆದಿದ್ದು ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದೆ..

ಇನ್ನೂ ಇನ್ನೊಂದು ಎಮ್ಮೆಯೂ ಸಹ ನೀರು ಕುಡಿಯಲು ಬಂದಾಗ ಅದರ ಬಾಯಿಗೆ ನೀರು ಸಿಗುವುದಿಲ್ಲ, ಎಗರಿ ಎಗರಿ ನೀರು ಕುಡಿಯಲು ಪ್ರಯತ್ನ ಪಡುತ್ತಿರುವ ದೃಶ್ಯ ಕೂಡ ವಿಡಿಯೋ ಆಗಿದೆ. ಗ್ರಾಮದಲ್ಲಿ ಎಲ್ಲಾ ಬೋರ್ ವೆಲ್ ಗಳು ಬತ್ತಿದ್ದು ಜನಗಳಿಗೂ ಸಹ ನೀರಿನ ಸಮಸ್ಯೆ ಎದುರಾಗಿದೆ. ಪಿಡಿಒ ಗೆ ಹಲವು ಭಾರಿ ವಿಷಯ ತಿಳಿಸಿದ್ದರು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಗ್ರಾಮದ ಯುವಕ ಬಸವರಾಜ್ ಅವರ ಆರೋಪವಾಗಿದೆ..

ಒಂದು ದಿನಕ್ಕೆ ಕೇವಲ ಒಂದೋ ಎರಡೊ ಟ್ಯಾಂಕರ್ ಮೂಲಕ ನೀರು ಪೂರೈಕೆ‌ಯಾಗುತ್ತಿದೆ. ನೀರಿಗಾಗಿ ಜನರು ಹೋರಾಟ ನಡೆಸಿದ್ದು, ಜನ ಜಾನುವಾರುಗಳ ಅಗತ್ಯಕ್ಕೆ ಅನುಗುಣವಾಗಿ ನೀರು ಪೂರೈಕೆಗೆ ಆಗ್ರಹಿಸಿದ್ದಾರೆ.

ವರದಿ : ಮಹಮ್ಮದ್ ಅಬ್ದುಲ್ ರಖೀಬ್

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.