ದೇಹದ ತೂಕ ಇಳಿಸಲು ಆಗುತ್ತಿಲ್ಲವೇ? ಇಲ್ಲಿದೆ ತೂಕ ಇಳಿಸುವ ಸುಲಭ ವಿಧಾನಗಳು. ದೇಹದ ತೂಕ ಇಳಿಸುವುದೇ ಈಗಿನ ಬಹು ದೊಡ್ಡ ಟ್ರೆಂಡ್‌. ತೂಕ ಇಳಿಸುವ ವಿಧಾನಗಳು ಇಲ್ಲಿವೆ ಮಾಡಿ ನೋಡಿ…

ಜೀವನಶೈಲಿಯ ಬದಲಾವಣೆ, ಸಮಯಕ್ಕೆ ಸರಿಯಾಗಿ ಊಟ ತಿಂಡಿ ಮಾಡದೇ ಇರುವುದು, ಆಹಾರ ಕ್ರಮದಲ್ಲಿ ಬದಲಾವಣೆ ಹೀಗೆ ಅನೇಕ ಕಾರಣಗಳಿಂದ ಸ್ಥೂಲಕಾಯತೆ ಇಂದು ಹೆಚ್ಚು ಜನರನ್ನು ಕಾಡತೊಡಗಿದೆ.

ದೇಹದ ತೂಕ ಇಳಿಸಲು ಆಗುತ್ತಿಲ್ಲವೇ? ಇಲ್ಲಿದೆ ತೂಕ ಇಳಿಸುವ ಸುಲಭ ವಿಧಾನಗಳು

ನೀವು ತೂಕ ಇಳಿಸುವ ಛಲವನ್ನು ಹೊತ್ತವರಾಗಿದ್ದರೆ ಅದಕ್ಕೆ ಸರಿಯಾದ ಸಮಯವಾಗಿದೆ ಮುಂಜಾನೆ. ಬೆಳಗ್ಗೆಯೇ ನೀವು ಪ್ರಾರಂಭಿಸಿದರೆಂದರೆ ಹೆಚ್ಚುವರಿ ತೂಕವನ್ನು ನೀವು ಕಳೆದುಕೊಂಡಂತೆಯೇ.

ದೇಹದ ತೂಕ ಇಳಿಸಲು ಆಗುತ್ತಿಲ್ಲವೇ? ಇಲ್ಲಿದೆ ತೂಕ ಇಳಿಸುವ ಸುಲಭ ವಿಧಾನಗಳು

ಓಡುವುದು, ಜಾಗ್ ಮಾಡುವುದು, ವೇಗವಾಗಿ ನಡೆಯುವುದು ಇವು ಮೂರು ವೇಗವಾಗಿ ತೂಕ ಇಳಿಸಲು ಸಹಾಯ ಮಾಡುತ್ತವೆ. ಇದಲ್ಲದೆ ನಿಮ್ಮ ಆಹಾರ ಕ್ರಮದ ಕಡೆಗೂ ನೀವು ಗಮನ ಹರಿಸಬೇಕಾದ್ದು ಅತ್ಯವಶ್ಯಕ.

ದೇಹದ ತೂಕ ಇಳಿಸಲು ಆಗುತ್ತಿಲ್ಲವೇ? ಇಲ್ಲಿದೆ ತೂಕ ಇಳಿಸುವ ಸುಲಭ ವಿಧಾನಗಳು

ರಾತ್ರಿಯ ವೇಳೆ ನೀವು ಯಾವುದೇ ದೈಹಿಕ ಸಾಮರ್ಥ್ಯವನ್ನು ಪ್ರದರ್ಶಿಸದೇ ವಿಶ್ರಾಂತಿಯನ್ನು ತೆಗೆದುಕೊಳ್ಳುವ ವೇಳೆಯಾದ್ದರಿಂದ ರಾತ್ರಿ ಹೆಚ್ಚು ಆಹಾರವನ್ನು ತೆಗೆದುಕೊಳ್ಳಬಾರದು.

ದೇಹದ ತೂಕ ಇಳಿಸಲು ಆಗುತ್ತಿಲ್ಲವೇ? ಇಲ್ಲಿದೆ ತೂಕ ಇಳಿಸುವ ಸುಲಭ ವಿಧಾನಗಳು

ತಜ್ಞರ ಪ್ರಕಾರ ಬೆಳಗ್ಗಿನ ಹೊತ್ತು ತೂಕ ಇಳಿಸುವ ವಿಧಾನ ತುಂಬಾ ಪ್ರಯೋಜನಕಾರಿಯಾಗಿರುತ್ತದೆ. ಮತ್ತು ಬೆಳಗ್ಗಿನ ಹೊತ್ತು ದಿನದ ಪ್ರಾರಂಭವಾದ್ದರಿಂದ ನೀವು ಹೆಚ್ಚು ಚಟುವಟಿಕೆಯುಳ್ಳವರಾಗಿರುತ್ತೀರಿ.

ಇದರಿಂದ ವರ್ಕ್ಔಟ್ ಮಾಡುವ ಶಕ್ತಿ ನಿಮ್ಮಲ್ಲಿರುತ್ತದೆ. ಬನ್ನಿ ಹಾಗಿದ್ದರೆ ಮುಂಜಾನೆಯ ಸಮಯದಲ್ಲಿ ತೂಕ ಇಳಿಸುವ ವಿಧಾನಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

ತೂಕ ಇಳಿಸುವ ವಿಧಾನಗಳು  :

ಬಿಸಿ ನೀರು ಕುಡಿಯಿರಿ :

ದೇಹದ ತೂಕ ಇಳಿಸಲು ಆಗುತ್ತಿಲ್ಲವೇ? ಇಲ್ಲಿದೆ ತೂಕ ಇಳಿಸುವ ಸುಲಭ ವಿಧಾನಗಳು

ಬೆಳಿಗ್ಗೆ ಎದ್ದ ತಕ್ಷಣ ಕಾಫಿ ಕುಡಿಯುವುದನ್ನು ಬಿಟ್ಟು, ಕಾದ ಬಿಸಿ ನೀರು ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಜೀರ್ಣ ಕ್ರಿಯೆಯನ್ನು ಸುಗಮಗೊಳಿಸುವುದಲ್ಲದೆ, ದೇಹದ ಸಮತೋಲನವನ್ನು ಕಾಪಾಡುತ್ತದೆ. 

ಲಿಂಬೆ ಜ್ಯೂಸ್:

ದೇಹದ ತೂಕ ಇಳಿಸಲು ಆಗುತ್ತಿಲ್ಲವೇ? ಇಲ್ಲಿದೆ ತೂಕ ಇಳಿಸುವ ಸುಲಭ ವಿಧಾನಗಳು

ಲಿಂಬೆ ನಿಮ್ಮ ಕೊಬ್ಬನ್ನು ವೇಗವಾಗಿ ಕರಗಿಸುತ್ತದೆ. ನೀವು ಮಾಡಬೇಕಾದ್ದು ಇಷ್ಟೇ ಉಪ್ಪಿನಿಂದ ಬೆರೆತ ಬಿಸಿಯಾದ ಲಿಂಬೆ ಜ್ಯೂಸ್ ಅನ್ನು ಬೆಳಗ್ಗೆ ಸೇವಿಸಿ. ಸಕ್ಕರೆ ಇದಕ್ಕೆ ಸೇರಿಸಬೇಡಿ. ಬೆಳಗ್ಗೆ ಲಿಂಬೆ ಜ್ಯೂಸ್ ಅನ್ನು ಸೇವಿಸುವುದು ದೇಹದಲ್ಲಿ ಹೆಚ್ಚಿರುವ ಕೊಬ್ಬನ್ನು ಕರಗಿಸಿ ತೀವ್ರ ಹಸಿವನ್ನು ನಿವಾರಿಸುತ್ತದೆ.

ದಾಲ್ಚಿನಿ ಬ್ರೇಕ್‌ಫಾಸ್ಟ್:

ದೇಹದ ತೂಕ ಇಳಿಸಲು ಆಗುತ್ತಿಲ್ಲವೇ? ಇಲ್ಲಿದೆ ತೂಕ ಇಳಿಸುವ ಸುಲಭ ವಿಧಾನಗಳು

ದಾಲ್ಚೀನಿಯನ್ನು ನಿಮ್ಮ ಬೆಳಗ್ಗಿನ ಆಹಾರದಲ್ಲಿ ಸೇವಿಸುವುದು ಅತೀ ಉತ್ತಮವಾದುದು. ಬೆಳಗ್ಗಿನ ಆಹಾರದಲ್ಲಿ ಪೂರ್ಣ ಗೋಧಿ ಸ್ಯಾಂಡ್‌ವಿಚ್ ಅನ್ನು ಜೇನು ಅಥವಾ ದಾಲ್ಚೀನಿ ಬೆರೆತ ಪೇಸ್ಟ್‌ನೊಂದಿಗೆ ಸ್ಯಾಂಡ್‌ವಿಚ್ ಸೇವಿಸಿ. 

ವ್ಯಾಯಾಮ & ಜಾಗಿಂಗ್  

ಎಲ್ಲಕ್ಕಿಂತ ಮುಖ್ಯವಾದುದು ದೈಹಿಕ ಕಸರತ್ತು. ಹೊಟ್ಟೆ ತುಂಬಾ ತಿಂದು, ಕುಳಿತಲ್ಲಿಯೇ ಕುಳಿತಿದ್ದರೆ, ಬೊಜ್ಜು ಬೆಳೆಯುವುದು ಸಹಜ. ಹಾಗಾಗಿ ದೇಹದಿಂದ ಸ್ವಲ್ಪ ಬೆವರಿಳಿಸುವ ಕೆಲಸವನ್ನೂ ಮಾಡಿ. ದೇಹಕ್ಕೆ ದೈಹಿಕ ಕಸರತ್ತು ಕೊಡಲು ವ್ಯಾಯಾಮ ಮಾಡಿ.

ದೇಹದ ತೂಕ ಇಳಿಸಲು ಆಗುತ್ತಿಲ್ಲವೇ? ಇಲ್ಲಿದೆ ತೂಕ ಇಳಿಸುವ ಸುಲಭ ವಿಧಾನಗಳು

ಬೆಳಗ್ಗಿನ ಸಮಯದಲ್ಲಿ ತೂಕ ಇಳಿಸಿಕೊಳ್ಳುವ ಉತ್ತಮ ವಿಧಾನವೆಂದರೆ ಜಾಗಿಂಗ್ ಮಾಡುವುದು. ಜಾಗಿಂಗ್‌ನಿಂದ ದೈಹಿಕ ಆರೋಗ್ಯವು ಅಷ್ಟೇ ಅಲ್ಲದೇ ಮಾನಸಿಕ ಆರೋಗ್ಯವೂ ಕೂಡಾ ಸುಧಾರಿಸುತ್ತದೆ.

ಸಕ್ಕರೆ ಸೇವನೆ ಇಳಿತ:

ನಿಮ್ಮ ಬೆಳಗ್ಗಿನ ಸಮಯದಲ್ಲಿ ಕೊಬ್ಬು ನಿವಾರಿಸಲು ಸಹಾಯ ಮಾಡುವ ಒಂದು ಉತ್ತಮ ವಿಧಾನವೆಂದರೆ ಬೆಳಗ್ಗಿನ ಹೊತ್ತು ಸಕ್ಕರೆಯನ್ನು ತೆಗೆದುಕೊಳ್ಳದೇ ಇರುವುದಾಗಿದೆ.

ದೇಹದ ತೂಕ ಇಳಿಸಲು ಆಗುತ್ತಿಲ್ಲವೇ? ಇಲ್ಲಿದೆ ತೂಕ ಇಳಿಸುವ ಸುಲಭ ವಿಧಾನಗಳು

ನೀವು ಸಿಹಿಯನ್ನು ತುಂಬಾ ಇಷ್ಟಪಡುವವರಾಗಿದ್ದಲ್ಲಿ, ಹಂತ ಹಂತವಾಗಿ ಸಕ್ಕರೆ ಸೇವನೆಯನ್ನು ಕಡಿಮೆ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ.

ಸೂರ್ಯನ ಬೆಳಕನ್ನು ಬಳಸಿ ಕ್ಯಾಲೋರಿ ಇಳಿಸಿ:

ದೇಹದ ತೂಕ ಇಳಿಸಲು ಆಗುತ್ತಿಲ್ಲವೇ? ಇಲ್ಲಿದೆ ತೂಕ ಇಳಿಸುವ ಸುಲಭ ವಿಧಾನಗಳು

ಸೂರ್ಯನ ಬೆಳಕನ್ನು ಬಳಸಿ ಕ್ಯಾಲೋರಿ ಇಳಿಸಿ. ಹೌದು ನಿಮಗೆ ನೈಸರ್ಗಿಕ ವಿಧಾನದ ಮೂಲಕ ತೂಕ ಇಳಿಸುವ ಮನಸಿದ್ದಲ್ಲಿ ವೇಗವಾಗಿ ನಡೆಯಿರಿ. ಉತ್ತಮ ಶಕ್ತಿಶಾಲಿ ಮತ್ತು ಪೇಯ ಹಾಗೂ ಸೂರ್ಯನ ಪ್ರಖರತೆಯಿಂದ ಸಂರಕ್ಷಿಸಿಕೊಳ್ಳುವ ವಿಧಾನವನ್ನು ಅನುಸರಿಸಿ ತೂಕ ಇಳಿಸಿಕೊಳ್ಳಿ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.