ಕೆ.ಎನ್.ಪಿ.ವಾರ್ತೆ,ಜಗಳೂರು,ಜು.01;

ತಾಲೂಕಿಗೆ ಸಮಗ್ರ ನೀರಾವರಿ ಯೋಜನೆಯನ್ನು ಜಾರಿಮಾಡಲು ಒತ್ತಾಯಿಸಿ ಭದ್ರಾ ಮೇಲ್ದಂಡೆ ನೀರಾವರಿ ಸಮಿತಿ ಜಗಳೂರು ವತಿಯಿಂದ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ.

ತಾಲೂಕಿಗೆ ಸಮಗ್ರ ನೀರಾವರಿ ಯೋಜನೆಯನ್ನು ಜಾರಿಮಾಡಲು ಒತ್ತಾಯಿಸಿ ಹಾಗೂ ಬೇಳಗಟ್ಟ ಮಾರ್ಗವಾಗಿ ಸಂಗೇನಹಳ್ಳಿ ಕೆರೆಗೆ ನೀರನ್ನು ತಂದು ಸಂಗೇನಹಳ್ಳಿಯ ಕೆರೆಯಿಂದ ಲಿಪ್ಟ್ ಮಾಡಬೇಕೆಂದು ಒತ್ತಾಯಿಸಿ 15ದಿನಗಳಿಂದ ಧರಣಿ ನಡೆಸಲಾಗುತ್ತಿದೆ.

ಇಂದಿನ ಮುಷ್ಕರದಲ್ಲಿ ತಾಲೂಕಿನ ಹಿರೆಮಲ್ಲನಹೊಳೆ, ಗೊಲ್ಲರಹಟ್ಟಿ ಗ್ರಾಮದ ರೈತರು ಹಾಗೂ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡು ತಾಲೂಕಿನ ಪ್ರಮುಖ ಬೀದಿಗಳಲ್ಲಿ ಘೋಷಣೆಗಳನ್ನು ಕೂಗುತ್ತಾ, ತಾಲೂಕು ಕಛೇರಿ ಎದುರು ಭಜನೆಯನ್ನು ಮಾಡುವ ಮೂಲಕ ಧರಣಿ ಮಾಡಿದರು‌.

ತಾಲೂಕಿನ ಸಮಗ್ರ ನೀರಾವರಿ ಅನುಷ್ಠಾನಕ್ಕೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಮುಷ್ಕರ

ಈ ಸಂದರ್ಭದಲ್ಲಿ ಭದ್ರಾ ಮೇಲ್ದಂಡೆ ನೀರಾವರಿ ಹೋರಾಟ ಸಮಿತಿಯ ಸದಸ್ಯ ಪ್ರಕಾಶ್ ರೆಡ್ಡಿ, ಲಿಂಗರಾಜು, ಮಹಾಲಿಂಗಪ್ಪ, ಅನಂತರಾಜು, ಹಿರೆಮಲ್ಲನಹೊಳೆ, ಗೊಲ್ಲರಹಟ್ಟಿ ಗ್ರಾಮ ಪಂಚಾಯಿತಿ ಸದಸ್ಯರಾದ ತಿಮ್ಮರಾಯಪ್ಪ, ಗ್ರಾಮದ ಮುಖಂಡರಾದ ಬಸವರಾಜಪ್ಪ, ಅಮರಪ್ಪ, ಶೇಖರಪ್ಪ, ಯೋಗಿಶ್, ಶರಣಪ್ಪ, ಕುಮಾರಸ್ವಾಮಿ, ಎತ್ತನೆರು ಚಂದ್ರಪ್ಪ, ಯಜಮಾನ್ರು, ಪಾಲಪ್ಪ, ಮಂಜಣ್ಣ, ನಾಗೇಂದ್ರಪ್ಪ, ರವಿಚಂದ್ರ, ಶಿವಣ್ಣ, ನಾಗಲಿಂಗಪ್ಪ ಹಾಗೂ ಭಜನಾ ಮಂಡಳಿಯ ಸದಸ್ಯರು ಹಾಜರಿದ್ದರು.

ವರದಿ : ಮಹಮ್ಮದ್ ಅಬ್ದುಲ್ ರಖೀಬ್

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.