ಕೆ.ಎನ್.ಪಿ.ವಾರ್ತೆ,ಗಂಗಾವತಿ,ಡಿ.25;

ಆರೋಗ್ಯಕರ ಮತ್ತು ಸಮೃದ್ಧ ಸಮಾಜದ ನಿರ್ಮಾಣದಲ್ಲಿ ಇಂದಿನ ಯುವ ಜನಾಂಗದ ಪಾತ್ರ ಮಹತ್ವದಾಗಿದೆ. ಬಲಿಷ್ಠ ಭಾರತ ನಿರ್ಮಾಣದಲ್ಲಿ ಯುವ ಜನಾಂಗ ಪ್ರಮುಖ ಪಾತ್ರ ವಹಿಸಬೇಕು, ಹಾಗೆಯೇ ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಉಳಿಸಿ ಬೆಳೆಸಿ ಮುಂದಿನ ಯುವ ಪೀಳಿಗೆಗೆ ಪರಿಚಯಿಸಬೇಕು ಎಂದು ಸಂಕಲ್ಪ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಸಪ್ಪ ಶಿರಿಗೇರಿ ತಿಳಿಸಿದರು.

ನಗರದ ಸಂಕಲ್ಪ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಭಾರತ ಸರ್ಕಾರ ನೆಹರೂ ಯುವ ಕೇಂದ್ರ ಕೊಪ್ಪಳ ಜಾಗೃತಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಇವರ ಸಹಯೋಗದಲ್ಲಿ ನಡೆದ ಗಂಗಾವತಿ ತಾಲೂಕು ಮಟ್ಟದ ನೆರೆಹೊರೆ ಯುವ ಸಂಸತ್ತು ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದರು.

ದೇಶ ನಮಗೇನು ಕೊಟ್ಟಿದೆ ಎನ್ನುವದಕಿಂತ ನಾವು ದೇಶಕ್ಕೆ ಏನ್ನನಾದರೂ ಕೊಡುಗೆ ನೀಡಬೇಕು, ಆ ನಿಟ್ಟಿನಲ್ಲಿ ಯುವಕರು ಸಾಗಬೇಕು ಎಂದು ತಿಳಿಸಿದರು.

ನಂತರ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಶರೀಫ್ ರವರು ಸದೃಢ ಹಾಗೂ ಸಂಸ್ಕಾರಯುತ ಭಾರತ ನಿರ್ಮಾಣದಲ್ಲಿ ಯುವ ಜನಾಂಗ ದೇಶದ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಳ್ಳಬೇಕು. ಯುವಕರು ನಿರಂತರ ಕಾರ್ಯ ಚಟುವಟಿಕೆಯಿಂದ ಇರಬೇಕು. ಆತ್ಮವಿಶ್ವಾಸ ಹಣಕೊಟ್ಟು ಪಡೆಯುವ ವಸ್ತುವಲ್ಲ, ಉತ್ತಮ ಬದುಕು ಸುಂದರವಾಗಿರುತ್ತದೆ. ಅಲ್ಲದೇ ಸಮಾಜದಲ್ಲಿನ ಪ್ರಸ್ತುತತೆಯ ಅರಿವಾಗುತ್ತದೆ. ಆದ್ದರಿಂದ ಎಲ್ಲ ಯುವ ಸಮುದಾಯ ಒಳ್ಳೆಯ ಸಂಸ್ಕಾರಯುತ ಜೀವನ ಕಲಿಯಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ.ಪಂಡರಿನಾಥ ಅಗ್ನಿಹೊತ್ರಿ, ವಿಶ್ವನಾಥ, ಮೀನಾಕ್ಷಿ, ನೆಹರು ಯುವ ಕೇಂದ್ರದ ಜ್ಯೋತಿ ಮೂಲಿಮನಿ ಸ್ವಯಂ ಸೇವಕರಾದ ಅಮರಯ್ಯ ಸ್ವಾಮಿ ಮರಕುಂಬಿ, ಜಗದೀಶ ಬನ್ನಿಮಠ, ಸಿದ್ದು ಸ್ವಾಮಿ ಸೋಮನಾಳ ಮತ್ತು ಯುವ ಸಂಸ್ಥೆಯ ವೀರೇಶ ಸ್ವಾಮಿ ನವಲಿ, ಶರಣ ಕುಮಾರ ನವಲಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಸಿದ್ದು ಸ್ವಾಮಿ ನಿರೂಪಿಸಿದರು. ಅಮರಯ್ಯ ಸ್ವಾಮಿ ವಂದನಾರ್ಪಣೆ ಮಾಡಿದರು.

ವರದಿ : ಸ್ವಾಮಿ ನವಲಿ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.