ಕೆ.ಎನ್.ಪಿ.ವಾರ್ತೆ,ಮುಂಡರಗಿ,ನ.04;

ಜನರಿಗೆ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸರ್ಕಾರ ಕೋಟಿಗಟ್ಟಲೆ ಹಣ ಖರ್ಚುಮಾಡಿ ಸ್ವಚ್ಛಭಾರತ ಅಭಿಯಾನ ಯೋಜನೆಯಡಿ ಸ್ವಚ್ಛತೆಗಾಗಿ ಜಾದು ಸ್ವಚ್ಛತೆಗಾಗಿ ಸಂಗೀತ ಎಂಬಂತಹ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಇದರಿಂದ ಜನರು ಜಾಗೃತಿಯಾದರು ಪುರಸಭೆಯ ಸಿಬ್ಬಂದಿಗಳು ಮಾತ್ರ ಸ್ವಚ್ಛತೆಯ ಬಗ್ಗೆ ಜಾಗೃತಿಯಾಗಿಲ್ಲ.

ನಗರದ ಪುರಸಭೆ ವ್ಯಾಪ್ತಿಗೆ ಬರುವ ಎಸ್.ಎಸ್.ಪಾಟೀಲ ನಗರದಲ್ಲಿ ಪುರಸಭೆ ಪೌರಕಾರ್ಮಿಕರು ಅ.೧೨ರಂದು ಕೊಳಕು ಹೂಳು ತುಂಬಿದ ಚರಂಡಿಯನ್ನು ಸ್ವಚ್ಛಗೊಳಿಸಿದ್ದರು. ಆದರೆ ೨೦ ದಿನಗಳು ಕಳೆದರು ಪುರಸಭೆಯವರು ಚರಂಡಿಯಲ್ಲಿ ತೆಗೆದ ತ್ಯಾಜ್ಯವನ್ನು ಇನ್ನು ವಿಲೆವಾರಿಮಾಡಿಲ್ಲ. ಕಸ, ಹೂಳನ್ನು ಚರಂಡಿ ಪಕ್ಕದಲ್ಲೇ ಹಾಕಿ ಅಲ್ಲಿಯೇ ಬಿಡಲಾಗಿದೆ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಇಲ್ಲಿಯ ಜನತೆಗೆ ಸಹಿಸಲಾರದಷ್ಟು ದುರ್ನಾತ ಬೀರುತ್ತಿದೆ. 

ಈಗಾಗಲೇ ನಗರದಲ್ಲಿ ಡೆಂಗ್ಯೂ ಜ್ವರದಂತ ಮಾರಕ ರೋಗಗಳು ಉದ್ಭವಿಸಿವೆ. ಸ್ಥಳೀಯರು ರೋಗ ಹರಡುವ ಭೀತಿಯಲ್ಲಿದ್ದಾರೆ. ಯಾವಾಗ ತ್ಯಾಜ್ಯವನ್ನು ವಿಲೇವಾರಿಮಾಡುತ್ತಾರೆ ಎಂದು ಕಾದು ಕುಳಿತ್ತಿದ್ದಾರೆ. ತ್ಯಾಜ್ಯವನ್ನು ವಿಲೇವಾರಿ ಮಾಡಲು ತಿಳಿಸಿದ್ದರು ಅಧಿಕಾರಿಗಳು ಇತ್ತಕಡೆ ಗಮನಹರಿಸದೆ ನಿರ್ಲಕ್ಷ ತೋರುತ್ತಿದ್ದಾರೆ. ಹೇಳಿದಾಗ ಸುಳ್ಳು ಭರವೆಸೆಯನ್ನು ನೀಡುತ್ತಿದ್ದಾರೆ ಎಂಬುದು ಸ್ಥಳೀಯರ ಮಾತಾಗಿದೆ.

ಕೊಳೆತ ತ್ಯಾಜ್ಯದಿಂದ ದಿನದಿಂದ ದಿನಕ್ಕೆ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಸುತ್ತಮುತ್ತಲಿನ ವಾತಾರಣ ಕಲುಷಿತಗೊಳ್ಳುವ ಮೊದಲು ಪರಿಸರ ಮಾಲಿನ್ಯವಾಗದಂತೆ ಹಾಗೂ ಸಾರ್ವಜನಿಕರ ಅಹವಾಲುಗಳಿಗೆ ಅಧಿಕಾರಿಗಳು ಗಮನಹರಿಸಬೇಕಾಗಿದೆ.

ಮೌಖಿಕವಾಗಿ ಪುರಸಭೆಯವರಿಗೆ ತಿಳಿಸಿದರು ಪುರಸಭೆಯ ಅಧಿಕಾರಿಗಳು ಮಾತ್ರ ಕೊಳಕು ಇದ್ದ ಜಾಗಕ್ಕೆ ಕಾಲು ಇಡುತ್ತಿಲ್ಲ. ಸ್ಥಳೀಯರಿಗೆ ಉತ್ತಮ ಆರೋಗ್ಯಕರ ಜೀವನಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಅವಕಾಶ ಮಾಡಿಕೊಡಬೇಕಾಗಿದೆ | ಅಡೆವೆಪ್ಪ ಚಲವಾದಿ ತಾಲೂಕು ಚಲವಾದಿ ಮಹಸಭಾ ಅಧ್ಯಕ್ಷ

ಇನ್ನು ಎರಡು ಮೂರು ದಿನದಲ್ಲಿ ಸ್ಥಳೀಯ ಚರಂಡಿ ಪಕ್ಕದಲ್ಲೇ ಹಾಕಿದ ತ್ಯಾಜ್ಯವನ್ನು ಶೀಘ್ರದಲ್ಲಿ ವಿಲೇವಾರಿ ಮಾಡಲು ಸೂಕ್ತ ಕ್ರಮ ಕೈಗೂಳ್ಳಲಾಗುವುದು. | ಎಸ್.ಹೆಚ್.ನಾಯ್ಕರ ಪುರಸಭೆ ಮುಖ್ಯಾಧಿಕಾರಿ

ವರದಿ : ಕೋಗಳಿ ಶೇಖರ್ 

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.