ಕೆ.ಎನ್.ಪಿ.ವಾರ್ತೆ,ನವದೆಹಲಿ,ಏ.02;
ತೈಲ ಬೆಲೆ ಏರಿಕೆ ನಡುವೆಯೂ, ಸಬ್ಸಿಡಿ ರಹಿತ ಅಡುಗೆ ಅನಿಲ (ಎಲ್.ಪಿ.ಜಿ) ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗಿದೆ.
ಸಬ್ಸಿಡಿ ರಹಿತ ಅಡುಗೆ ಅನಿಲ (ಎಲ್.ಪಿ.ಜಿ) ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗಿದ್ದು, ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯನ್ನು ಪ್ರತಿ ಸಿಲಿಂಡರ್ ಮೇಲೆ 35.50ರೂ ನಷ್ಟು ಇಳಿಕೆ ಮಾಡಲಾಗಿದೆ.
ಇದೇ ವೇಳೆ 19ಕೆಜಿ ತೂಕದ ವಾಣಿಜ್ಯ ಉದ್ದೇಶಿತ ಸಿಲಿಂಡರ್ ಬೆಲೆ ಕೂಡಾ 54ರೂ ನಷ್ಟು ಇಳಿಕೆಯಾಗಿದ್ದು, 5ಕೆಜಿ ತೂಕದ ಸಿಲಿಂಡರ್ ಬೆಲೆಯಲ್ಲಿ 15ರೂ ಇಳಿಸಲಾಗಿದೆ.