ಕೆ.ಎನ್.ಪಿ.ವಾರ್ತೆ,ಬೆಂಗಳೂರು,ನ.17;

ಡಿಸೆಂಬರ್ 5 ರಂದು ನಡೆಯಲಿರುವ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ಪ್ರಚಾರಕ್ಕೆ ಬಿಜೆಪಿ ತಯಾರಿ ನಡೆಸಿದ್ದು, ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿರುವ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ರಾಜ್ಯ ಬಿಜೆಪಿ ಬಿಡುಗಡೆಗೊಳಿಸಿದೆ.

15 ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಪ್ರಹ್ಲಾದ್ ಜೋಶಿ ಸೇರಿದಂತೆ ರಾಜ್ಯ ಸಚಿವರು, ಸಂಸದರು ಹಾಗೂ ಬಿಜೆಪಿಯ ಪ್ರಮುಖ ನಾಯಕರು ಸೇರಿದಂತೆ 40 ಪ್ರಮುಖ ಸ್ಟಾರ್ ಪ್ರಚಾರಕರು ಪಟ್ಟಿಯಲ್ಲಿದ್ದಾರೆ.

ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ, ನಳಿನ್ ಕುಮಾರ್ ಕಟೀಲ್ ಅವರಿಗೆ ಮೊದಲ ಸ್ಥಾನ ನಂತರ ಬಿ.ಎಸ್.ಯಡಿಯೂರಪ್ಪ ಎರಡನೇ ಸ್ಥಾನ ನೀಡಲಾಗಿದೆ.

ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ನಳಿನ್ ಅವರ ನಡುವೆ ಶೀತಲ ಸಮರ ನಡೆಯುತ್ತಿದೆ ಎಂಬ ಊಹಾಪೋಹಗಳ ಬೆನ್ನಲ್ಲೇ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸಿಎಂ ಗಿಂತ ಮೇಲೆ ನಳಿನ್ ಅವರ ಹೆಸರು ಕಾಣಿಸಿಕೊಂಡಿರುವುದು ತೀವ್ರ ಕುತೂಹಲ ಕೆರಳಿಸಿದೆ.

ಬಿಜೆಪಿ ಬಿಡುಗಡೆಗೊಳಿಸಿದ ಸ್ಟಾರ್ ಪ್ರಚಾರಕರ ಪಟ್ಟಿ ಹೀಗಿದೆ-

 1. ನಳಿನ್ ಕುಮಾರ್ ಕಟೀಲ್
 2. ಬಿ.ಎಸ್.ಯಡಿಯೂರಪ್ಪ
 3. ಡಿ.ವಿ ಸದಾನಂದಗೌಡ
 4. ಪ್ರಹ್ಲಾದ್ ಜೋಷಿ
 5. ಬಿ.ಎಲ್ ಸಂತೋಷ್
 6. ಮುರುಳೀಧರರಾವ್
 7. ಅರುಣ್ ಕುಮಾರ್
 8. ಜಗದೀಶ್ ಶೆಟ್ಟರ್
 9. ಲಕ್ಷ್ಮಣ ಸವದಿ
 10. ಗೋವಿಂದ ಕಾರಜೋಳ
 11. ಡಾ.ಸಿ.ಎನ್ ಅಶ್ವತ್ಥನಾರಾಯಣ್
 12. ಕೆ.ಎಸ್.ಈಶ್ವರಪ್ಪ
 13. ಅರವಿಂದ ಲಿಂಬಾವಳಿ
 14. ಸಿ.ಟಿ ರವಿ
 15. ಶೋಭಾ ಕರಂದ್ಲಾಜೆ
 16. ಎನ್.ರವಿಕುಮಾರ್
 17. ಮಹೇಶ್ ತೆಂಗಿನಕಾಯಿ
 18. ಆರ್.ಅಶೋಕ್
 19. ಪಿ.ಸಿ ಮೋಹನ್
 20. ಶ್ರೀರಾಮುಲು
 21. ಪ್ರತಾಪ್ ಸಿಂಹ
 22. ವಿ.ಸೋಮಣ್ಣ
 23. ಬಸವರಾಜ ಬೊಮ್ಮಾಯಿ
 24. ರಮೇಶ್ ಜಿಗಜಿಣಗಿ
 25. ಪ್ರಭಾಕರ್ ಕೋರೆ
 26. ನಿರ್ಮಲ್ ಕುಮಾರ್ ಸುರಾನಾ
 27. ಶಶಿಕಲಾ ಜೊಲ್ಲೆ
 28. ಸುರೇಶ್ ಅಂಗಡಿ
 29. ಚಲವಾದಿ ನಾರಾಯಣಸ್ವಾಮಿ
 30. ಶೃತಿ
 31. ತಾರಾ ಅನೂರಾಧ
 32. ರಾಜೂಗೌಡ
 33. ಭಾರತಿ ಶೆಟ್ಟಿ
 34. ಸಿ.ಸಿ ಪಾಟೀಲ್
 35. ಬಿ.ಜೆ ಪುಟ್ಟಸ್ವಾಮಿ
 36. ಉಮೇಶ್ ಕತ್ತಿ
 37. ಕೋಟಾ‌ ಶ್ರೀನಿವಾಸ ಪೂಜಾರಿ
 38. ಪ್ರಭು ಚೌಹಾನ್
 39. ಎಸ್.ಆರ್.ವಿಶ್ವನಾಥ್
 40. ಮಾಧುಸ್ವಾಮಿ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.