ಕೆ.ಎನ್.ಪಿ.ವಾರ್ತೆ,ಭುವನೇಶ್ವರ,ಜೂ.07;

ವಿಶ್ವದ ಜನಸಂಖ್ಯೆಯಲ್ಲಿ ಶೇಕಡ 92ರಷ್ಟು ಜನತೆಗೆ ಉಸಿರಾಡಲು ಶುದ್ಧ ಗಾಳಿ ಸಿಗುತ್ತಿಲ್ಲ. ಕಲುಷಿತ ವಾಯು ಸೇವನೆಯು ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಪರಿಸರ ವಿಜ್ಞಾನಿ ಪ್ರೊ.ಉಮಾ ಚಂದ್ರನ್‌ ಮೊಹಾಂತಿ ಹೇಳಿದ್ದಾರೆ.

ಅತಿಯಾದ ಕೈಗಾರಿಕೆಗಳು, ನಿಯಂತ್ರಣವಿಲ್ಲದ ಗಣಿಗಾರಿಕೆ, ಮೂಲಸೌಕರ್ಯ ನೆಪದಲ್ಲಿ ನಡೆಯುವ ಕಾಮಗಾರಿಗಳು, ಹವಾಮಾನದಲ್ಲಿ ಆಗುವ ದಿಢೀರ್‌ ಬದಲಾವಣೆಯಿಂದ ವಾಯು ಮಾಲಿನ್ಯ ಹೆಚ್ಚುತ್ತಿದೆ. ಅಶುದ್ಧ ಗಾಳಿ ಸೇವಿಸಿ ಜಗತ್ತಿನಾದ್ಯಂತ ವರ್ಷಕ್ಕೆ 70 ಲಕ್ಷ ಜನರು ಮೃತಪಡುತ್ತಿದ್ದಾರೆ” ಎಂದು ಹೇಳಿದ್ದಾರೆ.

”ವಾಯು ಮಾಲಿನ್ಯ ನಮ್ಮ ಜೀವಿತಾವಧಿಯನ್ನು 2ರಿಂದ 3 ವರ್ಷ ಕಡಿಮೆಯಾಗಿಸುತ್ತಿದೆ. ಭಾರತದಲ್ಲಿ ಪ್ರತಿ ವರ್ಷ 1.20 ಲಕ್ಷ ಜನ ಸಾಯುತ್ತಿದ್ದಾರೆ. ದಿಲ್ಲಿ, ಭುವನೇಶ್ವರ, ಕಟಕ್‌, ನೊಯ್ಡಾ ಸೇರಿದಂತೆ 102 ನಗರಗಳಲ್ಲಿ ವಾಯು ಗುಣಮಟ್ಟ ತೀವ್ರ ಕುಸಿತ ಕಂಡಿದೆ” ಎಂದಿದ್ದಾರೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.