ಕೆ.ಎನ್.ಪಿ.ವಾರ್ತೆ,ಮುಂಡರಗಿ,ನ.07;

ಸ್ವಾತಂತ್ರ್ಯ ಬಂದ ಏಳು ದಶಕಗಳಿಂದ ದೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಬಹುದಾದ ಬದಲಾವಣೆಗಳು ಆಗಿವೆಯಾದರೂ ಭ್ರಷ್ಟಾಚಾರವೆಂಬ ರೋಗಗ್ರಸ್ತ ಮನಸ್ಥಿತಿಯುಳ್ಳ ಅಧಿಕಾರಶಾಹಿ ಮತ್ತು ಅವರನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದ ರಾಜಕೀಯ ವ್ಯವಸ್ಥೆಯ ಕಾರಣ, ಇನ್ನು ನಾಡಿನಲ್ಲಿ ನಿರೀಕ್ಷಿತ ಪ್ರಗತಿ ಆಗಲೇ ಇಲ್ಲ ಎಂದು ತಾಲೂಕು ಅಭಿವೃದ್ಧಿ ಹೋರಾಟಗಾರ ಮತ್ತು ಕುರಿ ಮತ್ತು ಹುಣ್ಣಿ ನಿಗಮದ ಮಾಜಿ ಅಧ್ಯಕ್ಷ ವಾಯ್. ಎನ್. ಗೌಡರ ಹೇಳಿದರು.

ಇತ್ತೀಚಿನವರಗೆ ಇದ್ದಂತಹ ಜಡ್ಡುಗಟ್ಟಿದ ಮನಸ್ಥಿತಿಯನ್ನು ಇಂದಿನ ಯುವಶಕ್ತಿ ಸರಿಯಾದ ಮಾರ್ಗದರ್ಶನದಲ್ಲಿ ಬದಲಾವಣೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸೇವೆ ಮೂಲಕ ಸಮಾಜದಲ್ಲಿ ಬದಲಾವಣೆ ತರಬಹುದು.

ತಾಲೂಕಿನ ಬೆಣ್ಣಿಳ್ಳಿ ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಸ. ಹಿ. ಪ್ರಾ.ಶಾಲೆ ಹಾಗೂ ಬೆಣ್ಣಿಳ್ಳಿ ಗ್ರಾಮದ ಗುರು ಹಿರಿಯರ ಸಂಯುಕ್ತ ಆಶ್ರಯದಲ್ಲಿ ನಡೆದ ಎನ್. ಎಸ್. ಎಸ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಇವತ್ತು ಸಮಾಜದಲ್ಲಿ ವಿದ್ಯಾವಂತರೆನಿಸಿಕೊಂಡವರು ಹಾಗೂ ಉನ್ನತ ಅಧಿಕಾರದಲ್ಲಿರುವವರು ತಮ್ಮ ಮನೆಯ ನಾಯಿಯ ಬಗ್ಗೆ ಇರುವ ಕಾಳಜಿಯನ್ನು ಹೆತ್ತ ತಂದೆ ತಾಯಿ ಬಗ್ಗೆ ತೋರುವುದಿಲ್ಲ.

ಜನ್ಮ ನೀಡಿದ ಹೆತ್ತವರು ವೃದ್ಧಾಶ್ರಮದಲ್ಲಿ ಇರುವುದು ನಾಚಿಕೆ ಸಂಗತಿಯಾಗಿದೆ. ಶಿಬಿರಾರ್ಥಿಗಳು ಓದಿನಿಂದ ಎಷ್ಟು ಕಲಿಯುತ್ತೇವೆ, ಅಷ್ಟೇ ಸಮಾಜ ಮತ್ತು ಪರಿಸರದಿಂದ ಕಲಿಯುವುದು ಸಾಕಷ್ಟಿದೆ.

ಸೇವೆ ಮೂಲಕ ಸಮಾಜದಲ್ಲಿ ಬದಲಾವಣೆ ತರಬಹುದು ಎಂದು ವಾಯ್. ಎನ್. ಗೌಡರ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಮಂಜುನಾಥ ಇಟಗಿ ಮಾತನಾಡಿ, ದೇಶದ ಅರ್ಥಶಾಸ್ತ್ರ ತಜ್ಞರು ಭಾರತ ದೇಶದ ಬಗ್ಗೆ ವ್ಯಾಖ್ಯಾನ ಹೇಳುವಾಗ ಭಾರತ ಬಡವರಿಂದ ಕೂಡಿದ ಶ್ರೀಮಂತ ದೇಶ ಎಂದು ಹೇಳುತ್ತಾರೆ. ಇಂದೂ ಕೂಡ ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶ ಎಂಬುದಾಗಿ.

ನಾವು ನಮ್ಮ ಕುರಿತು ಅಭಿವೃದ್ಧಿ ಹೊಂದಿದ ರಾಷ್ಟ್ರ ಎಂದು ಎದೆ ತಟ್ಟಿ ಹೇಳುವುದು ಯಾವಾಗ ಎಂಬುದು ಯಾವಾಗಲೂ ಕಾಡುತ್ತಿತ್ತು. ಈಗ ಬದಲಾವಣೆ ಕಾಣಬಹುದು. ಪರಿಶ್ರಮಕ್ಕೆ ಸೋಲಿಲ್ಲ.

ಪ್ರಬಲವಾದ ಇಚ್ಛಾಶಕ್ತಿ ಇದ್ದರೆ ಮನುಷ್ಯನಿಗೆ ಅಸಾಧ್ಯ ವೆಂಬುದಿಲ್ಲ ಎನ್ನುವುದು ಇಂದಿನ ಯುವಕರು ಕಠಿಣ ಪರಿಶ್ರಮ ಮತ್ತು ಉನ್ನತ ಗುರಿ ಇಟ್ಟುಕೊಂಡು ಛಲದಿಂದ ಸಾಧಿಸಬೇಕು.

ಈ ಏಳು ದಿನದ ಶಿಬಿರದಲ್ಲಿ ಗ್ರಾಮದಲ್ಲಿ ಸಾಕಷ್ಟು ವಿಷಯಗಳ ಬಗ್ಗೆ ಜನರಿಗೆ ಮಾಹಿತಿ ಮತ್ತು ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಿರಿ ಎಂದರು.

ಬಳಿಕ ಶಿಬಿರ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಗ್ರಾಮದ ಗುರು ಹಿರಿಯರಿಗೆ ಧನ್ಯವಾದಗಳನ್ನು ಆರ್ಪಿಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ರಂಗಪ್ಪ ಕ್ಯಾದಗಿಹಳ್ಳಿ, ವೀರೇಶ ಸಜ್ಜನರ, ಶಿವಮೂರ್ತಿಗೌಡ ಪಾಟೀಲ, ಹಾಲಪ್ಪ ತಳಕಲ್ಲ, ಈರಪ್ಪ ಹೊಸಕುರಬರ, ಗುರುಪಾದಗೌಡ ಪಾಟೀಲ, ಫಕೀರೆಡ್ಡಿ ಡಂಬಳ, ಈರಪ್ಪ ದಾಸರ, ರಾಮಪ್ಪ ಹಟ್ಟಿ, ಮನೋಹರ ಎಸ್, ಪ್ರಾಚಾರ್ಯರಾದ ಎಂ. ಎಂ. ಹೆಬ್ಬಾಳ, ಬಿ. ಜಿ. ನಾಡಗೌಡರ ಕಾಲೇಜು ಉಪನ್ಯಾಸಕರು ಹಾಗೂ ಶಿಕ್ಷಕರು ಮುಂತಾದವರು ಭಾಗವಹಿಸಿದ್ದರು.

ಕಾರ್ಯಕ್ರಮದ ನಿರೂಪಣೆ ಶಿವಗಂಗಾ ಮ್ಯಾಗೇರಿ ಮಾಡಿದರು. ಕೊನೆಗೆ ಎ. ಎಮ್. ಗೌಡರ ವಂದಿಸಿದರು.

ವರದಿ : ಕೋಗಳಿ ಶೇಖರ್

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.