ಕೆ.ಎನ್.ಪಿ.ವಾರ್ತೆ,ಚಿಟಗುಪ್ಪ,ನ.12;

ಸಂಗಮೇಶ ಎನ್ ಜವಾದಿಯವರಿಗೆ ಕಾಯಕ ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಲಾಯಿತು.

ಸಂಗಮೇಶ ಎನ್ ಜವಾದಿ ಅವರ ವೈಚಾರಿಕ ಸಾಹಿತ್ಯ, ಸಾಂಸ್ಕೃತಿಕ ಸೇವೆ, ನಾಡು ನುಡಿ ಭಾಷೆ, ನೆಲ – ಜಲ, ಸಂಘಟನೆ, ಸಾಮಾಜಿಕ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ, ಬೀದರ ಜಿಲ್ಲಾಡಳಿತದ ವತಿಯಿಂದ ನ.01ರಂದು ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಈ ಪ್ರಯುಕ್ತ ಚಿಟಗುಪ್ಪಾ ನಗರದ ಕಾಯಕ ಗೆಳೆಯರ ಬಳಗದ ಕಾರ್ಯಾಲಯದಲ್ಲಿ ಅಭಿನಂದನಾ ಸನ್ಮಾನ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ಜರುಗಿತು.

ಈ ವೇಳೆ ಮಾತನಾಡಿದ ಉಪನ್ಯಾಸಕ ಬೀಮಶೆಟ್ಟಿ ವಡ್ಡನಕೇರಾ, ಪ್ರಗತಿಪರ ವೈಚಾರಿಕ ಸಾಹಿತಿ, ಸಾಂಸ್ಕೃತಿಕ ನಾಯಕ, ಶರಣ ತತ್ವ ಪ್ರಚಾರಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಹಗಲಿರುಳು ದುಡಿಯುತ್ತಿರುವ ಸರಳ ಸಜ್ಜನೀಕೆಯ ಸಾಹಿತಿ, ಪ್ರಗತಿಪರ ಚಿಂತನೆಯ ಧೀಮಂತ ಹೋರಾಟಗಾರರಾದ ಸಂಗಮೇಶ ಎನ್ ಜವಾದಿ ರವರ ನಿಷ್ಕಲ್ಮಶ ಮತ್ತು ನಿಷ್ಕಳಂಕ ಸ್ನೇಹಮಯ ಸೇವೆಗೆ ಇಲ್ಲಿಯವರೆಗೆ ಅನೇಕ ಪ್ರಶಸ್ತಿಗಳು ಸಂದಿವೆ ಹಾಗೂ ಇವರನ್ನು ಹುಡುಕಿಕೊಂಡು ಬಂದಿವೆ ಅಂದರೆ ತಪ್ಪಾಗಲಾರದು ಎಂದರು.

ತದನಂತರ ಮುರುಳಿದರ ಸಿ ಆರ್ ಸಿ,ಮಾಹಾರುದ್ರಪ್ಪಾ ಅಣದೂರೆ, ರಾಜಕುಮಾರ ಬೆಲೂರೆ, ಸುರೇಶ ಕುಂಬಾರ ರವರು ಸಂಗಮೇಶ ಎನ್ ಜವಾದಿಯವರ ಸಾಧನೆಯ ಕುರಿತು ಮಾತನಾಡಿದರು.

ಸ್ವಾಗತವನ್ನು ಎಂ.ಎನ್. ಮಲಶೆಟ್ಟಿ ಕೋರಿದರು, ರಾಜಕುಮಾರ ಉಪ್ಪಿನ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ರಾಮದಾಸ ಮಂಕಲ್, ರಾಜಕುಮಾರ ಉಪ್ಪಿನ, ಡಾ.ದಯಾನಂದ ಕಾರಬಾರಿ, ಶಿವಕುಮಾರ, ವೀರೇಶ, ನಾರಾಯಣ, ಆನಂದ ಸ್ವಾಮಿ, ರಾಜಗೋಪಾಲ, ಶರದ್, ಪ್ರಕಾಶ ತೆಲಂಗ, ನಟವರ ಪವಾರ್, ಪ್ರೇಮ ಸಿಂಗ್, ಬಾಬು,ಪ್ರಲಾದ್, ಮಾಹಾರುದ್ರಪ್ಪಾ ಅಣದೂರೆ, ರಾಜಕುಮಾರ ಬೆಲೂರೆ,

ಎಂ.ಎನ್. ಮಲಶೆಟ್ಟಿ, ಬೀಮಶೆಟ್ಟಿ, ಮಲ್ಲಿಕಾರ್ಜುನ ತಿರಲಾಪೂರೆ ,ತಿಪ್ಪಣ್ಣಾ ಶರ್ಮಾ, ಶ್ರಾವಣಕುಮಾರ ಹಮ್ಮಿಲಪುರಕರ್, ಚಂದ್ರಕಾಂತ ಮಠಪತಿ, ಮನೋಹರ ಜಕ್ಕಾ, ಚಂದ್ರಕಾಂತ ಪೋಟೋ ಗ್ರಾಪರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.