ಕೆ.ಎನ್.ಪಿ.ವಾರ್ತೆ,ಬೆಂಗಳೂರು,ನ.17;

ಸ್ಯಾಂಡಲ್ ವುಡ್ ನಟ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತನ್ನ ಬಹುಕಾಲದ ಗೆಳತಿ ಜೊತೆ ಮದುವೆ ನಿಶ್ಚಯ ಮಾಡಿಕೊಳ್ಳಲಿದ್ದು, ಡಿಸೆಂಬರ್ 9 ರಂದು ಇವರ ಮದುವೆ ನಿಶ್ಚಿತಾರ್ಥವನ್ನು ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ ಎನ್ನಲಾಗಿದೆ.

ಪ್ರೇರಣಾ ಮತ್ತು ಧ್ರುವ ಜೋಡಿಯ ನಿಶ್ಚಿತಾರ್ಥ ಬೆಂಗಳೂರಿನ ಬನಶಂಕರಿಯಲ್ಲಿರುವ ಲಕ್ಷೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಹಾಗೂ ಆಪ್ತರು ಮಾತ್ರ ಭಾಗಿಯಾಗಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ನಟ ಧ್ರುವ ಸರ್ಜಾ ತಮ್ಮ ಬಹುಕಾಲದ ಗೆಳತಿ ಪ್ರೇರಣಾ ಶಂಕರ್ ಅವರನ್ನು ಸುಮಾರು ವರ್ಷಗಳಿಂದ ಪ್ರೀತಿಸುತ್ತಿದ್ದು, ಇತ್ತೀಚೆಗೆ ತಮ್ಮ ಮದುವೆಯ ಸುಳಿವು ಬಿಟ್ಟುಕೊಟ್ಟಿದ್ದರು. ಈಗ ನಿಶ್ಚಿತಾರ್ಥದ ವಿಷಯವನ್ನೂ ಹೊರಹಾಕಿದ್ದಾರೆ.

ಸರಿತಾ ಮತ್ತು ಶಂಕರ್‌ ಎಂಬುವವರ ಪುತ್ರಿಯಾದ ಪ್ರೇರಣಾ ಬೆಂಗಳೂರಿನ ಖಾಸಗಿ ಕಾಲೇಜ್‌ನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಆರೇಳು ವರ್ಷ ಧ್ರುವ ಅವರ ಮನೆಯ ಮುಂದೆಯೇ ಪ್ರೇರಣಾ ಅವರ ಮನೆಯಿತ್ತು. (ಈಗ ಧ್ರುವ ಮನೆಯ ಹಿಂದಿನ ರಸ್ತೆಯಲ್ಲಿ ವಾಸವಾಗಿದ್ದಾರೆ.) ಎದುರು ಮನೆಯಲ್ಲಿದ್ದಾಗಲೇ ಧ್ರುವ ಮತ್ತು ಪ್ರೇರಣಾ ನಡುವೆ ಪ್ರೀತಿಯಾಗಿದೆ. ಅಲ್ಲದೇ, ಎರಡೂ ಕುಟುಂಬಗಳು ತುಂಬಾ ಪರಿಚಯಸ್ಥರಾಗಿದ್ದ ಕಾರಣಕ್ಕಾಗಿ ಕುಟುಂಬಗಳ ಒಪ್ಪಿಗೆ ಪಡೆದುಕೊಂಡೇ ಇವರು ಮದುವೆ ಆಗುತ್ತಿದ್ದಾರೆ.

ಧ್ರುವ ಸರ್ಜಾ ಸಿನಿಮಾ ರಂಗಕ್ಕೆ ಬರುವ ಮುನ್ನವೇ ಪ್ರೇರಣಾ ಜತೆ ಲವ್ವಲ್ಲಿ ಬಿದ್ದಿದ್ದರಂತೆ. ಮೊದಲ ಸಿನಿಮಾದಿಂದ ಈವರೆಗೂ ಧ್ರುವ ಬೆಳವಣಿಗೆಯ ಹಿಂದೆ ಪ್ರೇರಣಾ ಅವರ ಸ್ಫೂರ್ತಿ, ಪ್ರೋತ್ಸಾಹ ಇದೆ ಎಂದು ತಿಳಿದುಬಂದಿದೆ.

ಡಿ.9 ರಂದು ಈ ಜೋಡಿಯು ನಿಶ್ಚಿತಾರ್ಥ ಮಾಡಿಕೊಂಡರೆ, ಹೊಸ ವರ್ಷಕ್ಕೆ ಮದುವೆಯಾಗಲಿದೆಯಂತೆ. ಮದುವೆ ದಿನಾಂಕವನ್ನು ನಿಶ್ಚಿತಾರ್ಥದ ದಿನವೇ ನಿಗದಿ ಮಾಡುತ್ತಾರೆಂದು ಸರ್ಜಾ ಕುಟುಂಬದ ಮೂಲಗಳು ತಿಳಿಸಿವೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಕತೆಕವನಲೇಖನಜೀವನ ಚರಿತ್ರೆಚುಟುಕುಹೀಗೆ ಯಾವುದೇ ಪ್ರಕಾರವಾಗಲಿ ಬರೆದುಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿಲೈಕ್ ಮಾಡಿಸಬ್ ಸ್ಕ್ರೈಬ್ ಮಾಡಿಕಮೆಂಟ್ ಮತ್ತು ಶೇರ್ ಮಾಡಿರಿ.