ಕೆ.ಎನ್.ಪಿ.ವಾರ್ತೆ,ಬೆಳಗಾವಿ,ಏ.30;

ಹೊರನಾಡ ಕನ್ನಡಿಗರ ದಶಮಾನೋತ್ಸವ ಸಾಂಸ್ಕೃತಿಕ ಸಮ್ಮೇಳನದ ಅಧ್ಯಕ್ಷರಾಗಿ ಗಡಿ ಹೋರಾಟಗಾರ, ಸಾಹಿತಿ ಹಾಗೂ ವಕೀಲರಾದ ರವೀಂದ್ರ ತೋಟಿಗೇರ ನೇಮಕಗೊಂಡಿದ್ದಾರೆ.

ಮೇ.27ರಂದು ಗೋವಾದ ಬೀಚೋಲಿಯ೦ನ ರಾಧಾಬಾಯಿ ಸಭಾಂಗಣದಲ್ಲಿ ನಡೆಯಲಿರುವ ದಶಮಾನೋತ್ಸವದ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನದ ಅಧ್ಯಕ್ಷರಾಗಿ, ಗಡಿ ಹೋರಾಟಗಾರರು, ವಕೀಲರು ಮತ್ತು ಕನ್ನಡ ನುಡಿ ಸೇವಕರಾದ ರವೀಂದ್ರ ತೋಟಿಗೇರ ನೇಮಕಗೊಂಡಿದ್ದಾರೆ.

ಶನಿವಾರ ಜರುಗಿದ ಪೂರ್ವಭಾವಿ ಸಭೆಯಲ್ಲಿ, ನಾಡು-ನುಡಿ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ  ರವೀಂದ್ರ ತೋಟಿಗೇರ ರವರನ್ನು ಗೋವಾದಲ್ಲಿ ನಡೆಯಲಿರುವ ದಶಮಾನೋತ್ಸವ ಸಾಂಸ್ಕೃತಿಕ ಸಮ್ಮೇಳನದ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು, ಅವರ ಅಧ್ಯಕ್ಷತೆಯಲ್ಲಿ ದಶಮಾನೋತ್ಸವದ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನ ನಡೆಯಲಿದೆ. ಸಮ್ಮೇಳನದಲ್ಲಿ ರಾಜ್ಯದ ಕವಿಗಳು ಭಾಗವಹಿಸಲಿದ್ದು, ಕವಿತೆ ವಾಚನ ಮಾಡಲಿದ್ದಾರೆ.

ರವೀಂದ್ರ ತೋಟಿಗೇರ  :

ಬೆಳೆಗಾವಿಯ ವಕೀಲರು, ಸಾಹಿತಿ, ಕನ್ನಡದ ನುಡಿ ಸೇವಕರಾದ ರವೀಂದ್ರ ತೋಟಿಗೇರ, ಕಳೆದ 25 ವರ್ಷಗಳಿಂದ ನಾಡು-ನುಡಿ ಸೇವಕರಾಗಿ, ಗಡಿ ಹೋರಾಟಗಾರರಾಗಿ, ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಜೀವನೋತ್ಸಾಹದ ಗಡಿ ಹೋರಾಟಗಾರರು ಎಂದೇ ಖ್ಯಾತಿ ಪಡೆದ ರವೀಂದ್ರ, ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಸಾಂದರ್ಭಿಕವಾಗಿ ಕಾನೂನು ಬಗ್ಗೆ ಲೇಖನಗಳನ್ನು ಬರೆದಿದ್ದಾರೆ. ಖ್ಯಾತ ನಾಮ ಚಿತ್ರ ನಟರ, ಸಾಹಿತಿ, ದಿಗ್ಗಜರ, ಸಾಧಕರ ಒಡನಾಟದಿಂದ ಬರಹಗಾರಿಕೆಯಲ್ಲಿ ಸೈ ಎನಿಸಿಕೊಂಡಿದ್ದಾರೆ.

ಗಡಿ ಉತ್ಸವದ ಕವಿಗೋಷ್ಠಿ, ಚಂದನ, ದೂರದರ್ಶನ, ಆಕಾಶವಾಣಿ ಹಾಗೂ ಅನೇಕ ಉತ್ಸವದ ಕವಿಗೋಷ್ಠಿಗಳಲ್ಲಿ ಕಾವ್ಯ ವಾಚನ ಮಾಡಿದ್ದು, ಸಾಹಿತ್ಯಗೋಷ್ಠಿ, ಉತ್ಸವ ಮುಂತಾದ ಕಡೆಗಳಲ್ಲಿ ಉಪನ್ಯಾಸ ನೀಡಿದ್ದಾರೆ. ಬಹುಪಾಲು ಸ೦ಘದ ಜಿಲ್ಲಾಧ್ಯಕ್ಷರಾಗಿಯೂ ಸೇವೆಸಲ್ಲಿಸಿದ್ದಾರೆ.

ಕರ್ನಾಟಕ ಕಲಾ ರತ್ನ, ಕಾಯಕ ರತ್ನ, ಕರುನಾಡ ಪದ್ಮಶ್ರೀ ಪ್ರಶಸ್ತಿ, ವಿಶ್ವಚೇತನ ಸಾಧಕ ರತ್ನ ಪ್ರಶಸ್ತಿ ಸೇರಿದಂತೆ ಇನ್ನಿತರ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಪುಸ್ತಕ ಪ್ರಕಟಣೆಯ ಗ್ರಂಥ ಹೊರತರುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ.