ಕೆ.ಎನ್.ಪಿ.ವಾರ್ತೆ,ಮುಂಡರಗಿ,ಜೂ.09;
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು ಪಟ್ಟಣದಲ್ಲಿ ಕೈಗೊಂಡಿರುವಂತ ಹೆದ್ದಾರಿ ರಸ್ತೆ ಕಾಮಗಾರಿಯು ಅವೈಜ್ಞಾನಿಕ ಮತ್ತು ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದೆ ಎಂದು ಪುರಸಭೆ ಅಧ್ಯಕ್ಷೆ ಹೇಮಾವತಿ ಅಬ್ಬಿಗೇರಿ ಆರೋಪಿಸಿದರು.
ಪಟ್ಟಣದಲ್ಲಿ ನಡೆಯುತ್ತಿರುವ ಹೆದ್ದಾರಿ ರಸ್ತೆ ಕಾಮಗಾರಿ ಪರಿಶೀಲಿಸಿ ನಂತರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಇಬಿ ಬಳಿ ಇರುವಂತ ಸೇತುವೆ ಮೇಲೆ ನಿಲ್ಲುವಂತ ನೀರು ಸೇತುವೆ ಕೆಳಗಡೆಯ ಹಳ್ಳದಲ್ಲಿರುವ ಪ್ರತ್ಯೇಕ ಚರಂಡಿಗೆ ಹೋಗುವಂತೆ ಮಾಡಬೇಕು ಎಂದು ಗುತ್ತಿಗೆದಾರರಿಗೆ ತಿಳಿಸಿದ್ದೆವು. ಆದರೆ, ಸೇತುವೆ ಮೇಲಿನ ನೀರು ಯಾವ ಕಡೆಗೆ ಹೋಗಬೇಕೆನ್ನುವಂತ ವ್ಯವಸ್ಥೆಯನ್ನು ಸರಿಯಾಗಿ ಮಾಡಿಲ್ಲ ಎಂದು ತಿಳಿಸಿದರು.
ಕಾಮಗಾರಿ ಮಾಡದಂತೆ ನೋಟಿಸ್ ನೀಡಿದರೂ ಗುತ್ತಿಗೆದಾರರು ಯಾರು ಇಲ್ಲದ ಸಮಯದಲ್ಲಿ ತಡರಾತ್ರಿಯಲ್ಲಿ ಕಾಮಗಾರಿ ಮಾಡುತ್ತಾರೆ. ಒಟ್ಟಿನಲ್ಲಿ ಯಾರ ಮಾತಿಗೂ ಅವರು ಬೆಲೆ ಕೊಡುತ್ತಿಲ್ಲ. ಎರಡು ಬದಿಗಳಲ್ಲಿ ಪಾದಚಾರಿಗಳಿಗೆ ನಡೆದಾಡಲು ಪುಟ್‍ಬಾತ್ ವ್ಯಸಸ್ಥೆ ಕಲ್ಪಿಸಿಲ್ಲ. ನೀರು ಪೂರೈಸುವ ಬೃಹತ್ ಪೈಪ್‍ಗಳ ಮೇಲೆ ಚರಂಡಿ ಕಾಮಗಾರಿ ಮಾಡಲು ಮುಂದಾಗಿದ್ದು, ನೀರು ಪೂರೈಕೆಯಲ್ಲಿ ವ್ಯತ್ಯಯಾದ್ರೆ ಪೈಪ್‍ಲೈನ್ ದುರಸ್ಥಿಗೊಳಿಸುವುದಾದರೂ ಹೇಗೆ? ಎಂದು ಅವರು ಪ್ರಶ್ನೆಸಿದರು.
ಪುರಸಭೆ ಸ್ಥಾಯಿ ಕಮಿಟಿ ಅಧ್ಯಕ್ಷ ಪ್ರಭು ಅಬ್ಬಿಗೇರಿ ಮಾತನಾಡಿ, ಹೆಸರೂರ ಸರ್ಕಲ್‍ನಿಂದ ಬ್ಯಾಲವಾಡಗಿ ಸರ್ಕಲ್‍ವರೆಗಿನ ರಸ್ತೆ ವಿಭಜಕವು ಕಳಪೆ ಮಟ್ಟದಲ್ಲಿದೆ. ವಿಭಜಕದ ಮಧ್ಯೆ ಹೂಗಿಡ, ಶೋಗಿಡಗಳನ್ನು ಬೆಳೆಸುವುದಕ್ಕೆ ಫಲವತ್ತಾದ ಮಣ್ಣನ್ನು ಹಾಕಬೇಕು. ಆದರೆ, ಗುತ್ತಿಗೆದಾರರು ದೊಡ್ಡ ದೊಡ್ಡ ಕಲ್ಲು ಮಿಶ್ರಿತ ಮಣ್ಣನ್ನು ಹಾಕಿದ್ದಾರೆ ಎಂದರು.
ಸದಸ್ಯ ಬಸವರಾಜ ರಾಮೇನಹಳ್ಳಿ ಮಾತನಾಡಿ, ಹೆದ್ದಾರಿ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ ಮತ್ತು ಅವೈಜ್ಞಾನಿಕದಿಂದ ಕೂಡಿದೆ. ಇದಕ್ಕೆ ಸಂಬಂಧಿಸಿದ ಮೇಲಾಧಿಕಾರಿಗಳು ತಕ್ಷಣ ಈ ಬಗೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಎಸಿಬಿ ಹಾಗೂ ಕೋರ್ಟ್ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆ ಪುರಸಭೆ ಉಪಾಧ್ಯಕ್ಷ ಬಸವರಾಜ ನರೇಗಲ್ಲ, ಸದಸ್ಯರಾದ ಪರುಶುರಾಮ ಕರಡಿಕೊಳ್ಳ, ವೀರೇಶ ಸಜ್ಜನರ, ಲಿಂಗರಾಜಗೌಡ ಪಾಟೀಲ, ಪಕ್ರುಸಾಬ್ ಹಾರೋಗೇರಿ, ಮುಖಂಡರಾದ ಮಂಜುನಾಥ ಇಟಗಿ, ಶ್ರೀನಿವಾಸ ಅಬ್ಬಿಗೇರಿ, ದೇವು ಹಡಪದ, ನಾಗರಾಜ ಗುಡಿಮನಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ವರದಿ : ಕೊಗಳಿ ಶೇಖರ್
ನೀವು ಕೂಡ ಬರೆಯಬಹುದು :
ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.
9513326661
ಈ-ವಿಳಾಸ : karnatakanewsportal@gmail.com
ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.