ಕೆ.ಎನ್.ಪಿ.ವಾರ್ತೆ,ಬೆಂಗಳೂರು,ನ.20;

ಹಲವು ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದ್ದು, ಕೆಲ ರೈಲುಗಳ ಮಾರ್ಗ ಬದಲಾವಣೆ ಹಾಗೂ ಸಮಯ ಬದಲಾವಣೆ ಮಾಡಲಾಗಿದೆ ಎಂದು ಭಾರತೀಯ ರೈಲ್ವೆ ಇಲಾಖೆ ಪ್ರಕಟಣೆ ಹೊರಡಿಸಿದೆ.

ಮುಖ್ಯವಾಗಿ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಟ್ರೈನ್ ಸಂಖ್ಯೆ 56909, ಬೆಂಗಳೂರು-ಹೊಸಪೇಟೆ ಪ್ಯಾಸೆಂಜರ್ 8 ಗಂಟೆ ಬದಲಾಗಿದೆ 20:15ಕ್ಕೆ ಹೊರಡಲಿದೆ, ಹೊಸಪೇಟೆಯನ್ನು 8:45ಕ್ಕೆ ತಲುಪಲಿದೆ, ನವೆಂಬರ್ 18ರಿಂದ ಹೊಸ ವೇಳಾಪಟ್ಟಿ ಜಾರಿಗೆ ಬಂದಿದೆ.

ನವೆಂಬರ್ 23 ರಿಂದ 26ರ ತನಕ ವಿಜಯಪುರ-ಯಶವಂತಪುರ ನಡುವೆ ಸಂಚರಿಸುವ 06541/06542 ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ”.

ಹರಿಹರ- ದಾವಣಗೆರೆ ನಡುವೆ ಹಳಿ ಕಾಮಗಾರಿ ನಡೆಯುತ್ತಿದೆ. ಆದ್ದರಿಂದ, ಕಾಮಗಾರಿಗೆ ಅಡ್ಡಿಯಾಗಬಾರದು ಎಂದು 4 ದಿನಗಳ ಕಾಲ ರೈಲು ಸಂಚಾರ ನಡೆಸುವುದಿಲ್ಲ. ನವೆಂಬರ್ 27ರಿಂದ ನಿಗದಿತ ವೇಳಾಪಟ್ಟಿಯಂತೆ ರೈಲು ಸಂಚಾರ ನಡೆಸಲಿದೆ ಎಂದು ಇಲಾಖೆ ಹೇಳಿದೆ.

ರದ್ದಾಗಿರುವ ರೈಲುಗಳು

  • ಚಿಕ್ಕಜಾಜೂರು – ಹುಬ್ಬಳ್ಳಿ (56915) ನ.26ರಿಂದ 29ರವರೆಗೆ
  • ಹುಬ್ಬಳ್ಳಿ – ಚಿಕ್ಕಜಾಜೂರು (56916) ನ.25ರಿಂದ 28ರವರೆಗೆ
  • ಅರಸೀಕೆರೆ – ಹುಬ್ಬಳ್ಳಿ (56273) ನ.23ರಿಂದ 28ರವರೆಗೆ
  • ಹುಬ್ಬಳ್ಳಿ – ಅರಸೀಕೆರೆ (56274) ನ.23ರಿಂದ 28ರವರೆಗೆ
  • ಬೆಂಗಳೂರು – ಹುಬ್ಬಳ್ಳಿ (56913) ನ. 18ರಿಂದ 29ರವರೆಗೆ
  • ಹುಬ್ಬಳ್ಳಿ – ಬೆಂಗಳೂರು (56914) ನ.18ರಿಂದ 29ರವರೆಗೆ
  • ಬೆಂಗಳೂರು – ಹುಬ್ಬಳ್ಳಿ (56515) ನ.25ರಿಂದ 29ರವರೆಗೆ
  • ಹುಬ್ಬಳ್ಳಿ – ಬೆಂಗಳೂರು (56516) ನ. 25ರಿಂದ 29ವರೆಗೆ
  • ಬೆಂಗಳೂರು – ಹುಬ್ಬಳ್ಳಿ (56911) ನ. 24ರಿಂದ 28ರವರೆಗೆ
  • ಹುಬ್ಬಳ್ಳಿ – ಬೆಂಗಳೂರು (56912) ನ. 24ರಿಂದ 28ರವರೆಗೆ

ಭಾಗಶಃ ರದ್ದಾಗಿರುವ ರೈಲುಗಳು

ಇಂಟರ್ಸಿಟಿ ಎಕ್ಸ್ಪ್ರೆಸ್ (12725) ನ.26ರಂದು ಚಿಕ್ಕಜಾಜೂರು – ಧಾರವಾಡ ನಡುವೆ ಹಾಗೂ ಇಂಟರ್ಸಿಟಿ ಎಕ್ಸ್ಪ್ರೆಸ್ 12726, ನ.27ರಂದು ಧಾರವಾಡ – ಚಿಕ್ಕಜಾಜೂರು ನಡುವೆ. ನ.23 ಹಾಗೂ 29ರಂದು 12080 ಜನಶತಾಬ್ದಿ ಎಕ್ಸ್ಪ್ರೆಸ್ 60 ನಿಮಿಷ ವಿಳಂಬವಾಗಲಿದೆ.

ರೈಲು ಮಾರ್ಗ ಬದಲಾವಣೆ

ವಾಸ್ಕೋ ಡಗಾಮಾದಿಂದ ವೇಲಂಕರ್ಗೆ ತೆರಳುವ 17315 ರೈಲು ನ.25ರಂದು ಬಳ್ಳಾರಿ – ರಾಯದುರ್ಗ – ಚಿಕ್ಕಜಾಜೂರು ಮಾರ್ಗವಾಗಿ ತೆರಳಲಿದೆ. 

ನಂ. 14805 ಯಶವಂತಪುರ ಬರ್ಮಾರ್ ಎಕ್ಸ್ಪ್ರೆಸ್ ನ.25ರಂದು ಚಿಕ್ಕಜಾಜೂರು – ರಾಯದುರ್ಗ – ಬಳ್ಳಾರಿ ಮೂಲಕ ತೆರಳಲಿದೆ.

ನಂ. 16588 ಬಿಕನೇರ್ – ಯಶವಂತಪುರ ಎಕ್ಸ್ಪ್ರೆಸ್ ನ.28ರಂದು ಚಿಕ್ಕಜಾಜೂರು – ರಾಯದುರ್ಗ – ಬಳ್ಳಾರಿ ಮೂಲಕ ಚಲಿಸಲಿದೆ.

ಮತ್ತೆ ಚಾಲನೆ ಪಡೆದ ರೈಲುಗಳು

ನವೆಂಬರ್ 27ರ ತನಕ ರದ್ದಾಗಿದ್ದ ಟ್ರೈನ್ ಸಂಖ್ಯೆ 57134 ರಾಯಚೂರು- ವಿಜಯಪುರ ಪ್ಯಾಸೇಂಜರ್ ಮತ್ತೆ ಹಳಿಗಿಳಿಯಲಿದೆ.

ರಾಯಚೂರು-ಸೋಲಾಪುರ ನಡುವೆ ನ.16ರಿಂದ ನ.27 ರ ತನಕ ರದ್ದಾಗಿತ್ತು. ಇದೇ ರೀತಿ ಟ್ರೈನ್ ಸಂಖ್ಯೆ 57133 ಕೂಡಾ ಹಳಿಗಿಳಿಯಲು ಸಜ್ಜಾಗಿದೆ. ಈ ರೈಲು ಕೂಡಾ ರಾಯಚೂರು-ಸೋಲಾಪುರ ನಡುವೆ ನ.16ರಿಂದ ನ.27 ರ ತನಕ ರದ್ದಾಗಿತ್ತು.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.