ಕೆ.ಎನ್.ಪಿ.ವಾರ್ತೆ,ಹಾವೇರಿ,ಡಿ.01;

ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರ ದ ಜೆಡಿಎಸ್ ಪಕ್ಷದ ಅಭ್ಯರ್ಥಿ ಮಲ್ಲಿಕಾರ್ಜುನ ಹಲಿಗೇರಿ ಇಂದು ರಾಣಿಬೆನ್ನೂರು ನಗರದ ವಾರ್ಡ್ ನಂಬರ್ 24 ಮೃತ್ಯುಂಜಯ ನಗರದಿಂದ ವಾರ್ಡ್ ನಂಬರ್ 23, 22, 21 ದಲ್ಲಿ ಪಾದಯಾತ್ರೆ ಮೂಲಕ ಮನೆಮನೆಗೆ ತೆರಳಿ ಮತಯಾಚಿಸಿದರು.

ಈ ಸಂದರ್ಭದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕ್ಷೇತ್ರದ ಜನತೆ ಐದು ವರ್ಷದ ಅವಧಿಗೆ ಶಾಸಕರನ್ನು ಆಯ್ಕೆ ಮಾಡಿ ಕಳುಹಿಸಿರುತ್ತಾರೆಯೇ ಹೊರೆತು 14 ತಿಂಗಳುಗಳಿಗೆ ಆಯ್ಕೆಮಾಡಿ ಕಳಿಸಿರಲ್ಲ.

ಅಂತವರನ್ನು ಪ್ರಜ್ಞಾವಂತ ಮತದಾರರು ಪ್ರಶ್ನಿಸಬೇಕು. ಭ್ರಷ್ಟ, ಪಕ್ಷಾಂತರಿ, ಅನರ್ಹ ಶಾಸಕ ಆರ್ ಶಂಕರ್ ಬಿಜೆಪಿ ಸೇರಿಕೊಂಡು ಕ್ಷೇತ್ರದ ಜನತೆಗೆ ಅನ್ಯಾಯವೆಸಗಿದ್ದಾರೆ. ಮತ್ತೆ ಸಚಿವನಾಗುತ್ತೇನೆಂದು ಹಗಲುಗನಸು ಕಾಣುತ್ತಿದ್ದಾರೆ.

ಡಿಸೆಂಬರ್ 9 ರ ನಂತರ ಈ ಸರ್ಕಾರ ಇರುವುದಿಲ್ಲ. ಅನರ್ಹ ಶಾಸಕ ಶಾಶ್ವತವಾಗಿ ಅನರ್ಹ ಆಗುತ್ತಾರೆ.

ನಗರದ ಮೂಲಭೂತ ಸೌಕರ್ಯಗಳಿಗಾಗಿ, ಶಿಕ್ಷಣ, ಶುದ್ಧ ಕುಡಿಯುವ ನೀರಿಗಾಗಿ, ಬಡಾವಣೆಗಳಲ್ಲಿ ರಸ್ತೆ ನಿರ್ಮಿಸುವುದಕ್ಕಾಗಿ, ನಗರದ ಸೌಂದರ್ಯ ಹೆಚ್ಚಿಸುವುದಕ್ಕಾಗಿ, ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿಗಾಗಿ, ಕಾರ್ಖಾನೆಗಳ ಸ್ಥಾಪನೆಗಾಗಿ ನನ್ನನ್ನು ಆಯ್ಕೆ ಮಾಡಿ ತಮ್ಮ ಸೇವೆಗೆ ಅವಕಾಶ ಮಾಡಿಕೊಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಕೆ. ಎಸ್. ಸಿದ್ದಬಸಪ್ಪ ಯಾದವ್, ರಾಜ್ಯ ಕಾರ್ಯದರ್ಶಿ ಶಿವಕುಮಾರ ಮಠದ, ಮಂಜಪ್ಪ ಲಿಂಗದಹಳ್ಳಿ, ಶಂಕ್ರಪ್ಪ ಮೆಣಸಿನಹಾಳ, ಶ್ರೀಶೈಲ ಹಿರೇಬಿದರಿ, ಲತಾ ಸವನೂರು, ಸವಿತಾ ಹಡಪದ್, ದಿನೇಶ್ ಪಾಟೀಲ್, ಮಲ್ಲಿಕಾರ್ಜುನ ಅಪ್ಪಣ್ಣವರ, ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.