ಕೆ.ಎನ್.ಪಿ.ವಾರ್ತೆ,ಮೈಸೂರು,ಜೂ.10;

ಹಿರಿಯ ರಂಗ ಕಲಾವಿದೆ ರಂಗನಾಯಕಮ್ಮ(80) ನಿಧನರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ರಂಗನಾಯಕಮ್ಮ ಭಾನುವಾರ ರಾತ್ರಿ ಅಸುನೀಗಿದ್ದಾರೆ. ಇಂದು ಸಂಜೆ ಮೈಸೂರಿನಲ್ಲಿ ಅಂತ್ಯ ಸಂಸ್ಕಾರವು ನೆರವೇರಲಿದೆ.

ಬೆಂಗಳೂರಿನಲ್ಲಿ ವಾಸವಿದ್ದ ಇವರು ಅನಾರೋಗ್ಯದ ಕಾರಣ ಇತ್ತೀಚೆಗೆ ಮೈಸೂರಿನ ತಮ್ಮ ಪುತ್ರಿಯ ನಿವಾಸದಲ್ಲಿ ನೆಲೆಸಿದ್ದರು. ಭಾನುವಾರ ಉಸಿರಾಟದ ಸಮಸ್ಯೆ ಕಂಡುಬಂದಾಗ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.

ರಂಗನಾಯಕಮ್ಮ ಅವರ ಮೂಲ ಹೆಸರು ನಿರ್ಮಲಾ ಎಂದಿದ್ದು ಚಿಕ್ಕ ವಯಸ್ಸಿಗೇ ರಂಗಭೂಮಿಗೆ ಪ್ರವೇಶಿಸಿದ್ದ ಈಕೆಯ ಅಭಿನಯ ಚಾತುರ್ಯವನ್ನು ಮೆಚ್ಚಿ ಸುಬ್ಬಯ್ಯ ನಾಯ್ಡು ಅವರಿಗೆ “ರಂಗನಾಯಕಮ್ಮ” ಎಂದು ನಾಮಕರಣ ಮಾಡಿದ್ದರು. ಮುಂದೆ ಅದುವೇ ಅವರ ಹೆಸರಾಗಿ ಉಳಿಯಿತು.

ನಾಟಕ ಕಂಪನಿ ಮ್ಯಾನೇಜರ್ ಆಗಿದ್ದ ನಂಜಪ್ಪನವರ ಪತ್ನಿ ರಂಗನಾಯಕಮ್ಮ ವೃತ್ತಿ ರಂಗಭೂಮಿಯಲ್ಲಿ ಸಾಕಷ್ಟು ಹೆಸರು ಗಳಿಸಿದ್ದರು.
ಗುಬ್ಬಿ ವೀರಣ್ನ, ಹೊನ್ನಪ್ಪ ಭಾಗವತರ್, ಸುಬ್ಬಯ್ಯ ನಾಯ್ಡು ಮಹಂತೇಶ ಶಾಸ್ತ್ರಿ ಸೇರಿದಂತೆ ಹಲವಾರು ಜನರ ನಾಟಕ ಕಂಪನಿಗಳಲ್ಲಿ ಅರವತ್ತಕ್ಕೆ ಹೆಚ್ಚು ವರ್ಷಗಳ ಕಾಲ ರಂಗನಾಯಕಮ್ಮ ಸೇವೆ ಸಲ್ಲಿಸಿದ್ದರು. ವೈವಿದ್ಯಮಯ ಪಾತ್ರಗಳಲ್ಲಿ ನಟಿಸಿದ್ದ ಅವರ ಕಲಾಸೇವೆಗೆ 2014ರಲ್ಲಿ ಗುಬ್ಬಿ ವೀರಣ್ಣ ಪ್ರಶಸ್ತಿ ಒಲಿದು ಬಂದಿತ್ತು.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.