ಕೆ.ಎನ್.ಪಿ.ವಾರ್ತೆ,ಗಂಗಾವತಿ,ನ.11;

ನಗರದ ಆರ್ ಜಿ ರಸ್ತೆಯಲ್ಲಿರುವ ವಸಿಷ್ಠ ಅಕಾಡಮಿಯಲ್ಲಿ ಭಾರತ ವಿಕಾಸ ಪರಿಷತ್, ಕುಮಾರ ರಾಮ ಘಟಕ, ಗಂಗಾವತಿ ಇವರ ಆಶ್ರಯದಲ್ಲಿ ‘ಭಾರತ್ ಕೋ ಜಾನೋ’ (ಭಾರತವನ್ನು ತಿಳಿಯಿರಿ) ಕರ್ನಾಟಕ ಪ್ರಾಂತ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಜರುಗಿತು.

ಉತ್ತರ ಕರ್ನಾಟಕ ಪ್ರಾಂತದ ಎಂಟು ಘಟಕಗಳಿಂದ ಶಾಖಾ ಮಟ್ಟದ ಕಾರ್ಯಕ್ರಮದಲ್ಲಿ ವಿಜೇತರಾಗಿ ಬಂದಿರುವ ಮಕ್ಕಳಿಗೆ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ರಾಜ್ಯಮಟ್ಟದ ರಸಪ್ರಶ್ನೆ ಕಾರ್ಯಕ್ರಮ 'ಭಾರತವನ್ನು ತಿಳಿಯಿರಿ'

ಇದರಲ್ಲಿ ಪ್ರಥಮ ಸ್ಥಾನ ಪಡೆದ ಮಕ್ಕಳು ದಕ್ಷಿಣ ಭಾರತ ವಲಯ ಮಟ್ಟದ ಸ್ಪರ್ಧೆಯಲ್ಲಿ ಮತ್ತು ಅಲ್ಲಿ ವಿಜೇತರಾದವರು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವರು.

ಕಾರ್ಯಕ್ರಮದಲ್ಲಿ ಭಾರತ ವಿಕಾಸ ಪರಿಷತ್ ಉತ್ತರ ಪ್ರಾಂತದ ಅಧ್ಯಕ್ಷರಾದ ಪುರುಷೋತ್ತಮ ದಾಸ್ ಇನಾನಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, 

ಬಿವಿಪಿಯ ಹುಬ್ಬಳ್ಳಿ ಪ್ರಾಂತದ ಪ್ರತಿನಿಧಿಗಳಾದ ಉದಯ ರೇವಣಕರ್ ಮತ್ತು ಶ್ರೀಮತಿ ಶೋಭಾ ಜಿಗಳೂರು ರಸಪ್ರಶ್ನೆ ಕಾರ್ಯಕ್ರಮವನ್ನು ನೆರೆವೇರಿಸಿದರು.

ಶ್ರೀಮತಿ ಸ್ವಾತಿ ಗೋಡೇಕರ್ ಭಾ.ವಿ.ಪ ಪ್ರಾಂತ ಸೆಕ್ರಟರಿ ಬೆಳಗಾವಿ, ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀಮತಿ ಚಂದ್ರಕಲಾ ಜ. ಐಲಿ ಹಾಗೂ ಕಾರ್ಯದರ್ಶಿ ಶ್ರೀಮತಿ ಶಾಲಿನಿ ಚ.ಹಳ್ಳಿ, ಖಜಾಂಚಿ ಶ್ರೀಮತಿ ಸಂಗೀತ ನೂತನಕುಮಾರ ಭಾರತ ವಿಕಾಸ ಪರಿಷತ್, ಕುಮಾರ ರಾಮ ಘಟಕದ ಪಧಾಧಿಕಾರಿಗಳಾದ ಅಶೋಕ ರಾಯಕರ್, ಯೋಗೇಶ ಮೋಟಾ, ರಾಜಶೇಖರ ಹೇರೂರು, ಶರಣಪ್ಪ, ಕಾಶೀ ವಿಶ್ವನಾಥ, ರಾಮಮೋಹನ್ ಎಂ, ಹಾಗೂ ಭಾರತ ವಿಕಾಸ ಪರಿಷತ್ ಸದಸ್ಯರು, ಸ್ಪರ್ಧಿಗಳ ಪೋಷಕರು, ವಿವಿಧ ಶಾಲೆಗಳ ಮಕ್ಕಳು ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.

ವರದಿ : ಹನುಮೇಶ್ ಭಾವಿಕಟ್ಟಿ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.