ಕೆ.ಎನ್.ಪಿ.ವಾರ್ತೆ,ಗಂಗಾವತಿ,ನ.27;

ಕಿವಿಯಲ್ಲಿ ಹೆಡ್ಫೋನ್ ಇಟ್ಟುಕೊಂಡು ಸಂಗೀತ ಆಲಿಸುತ್ತಾ ಬರುತ್ತಿದ್ದ ಯುವಕನೊಬ್ಬ ಆಯಾತಪ್ಪಿ ರೈಲು ಹಳಿಗೆ ಬಿದ್ದು ಸಾವನ್ನಪ್ಪಿದ ಘಟನೆ ನಗರದಲ್ಲಿ ನಡೆದಿದೆ.

ಮೃತನನ್ನು ಗುಜರಾತ್ ರಾಜ್ಯದ ನಂದೆಲಾ ಜಿಲ್ಲೆಯ ದಾವತ್ ಎಂಬ ಗ್ರಾಮದ ವಿಫುಲ್ (18) ಎಂದು ಗುರುತಿಸಲಾಗಿದೆ.

ನಗರದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿಯ ಕೆಲಸಕ್ಕೆಂದು ಗುಜರಾತಿನ ಹಲವು ಯುವಕರೊಂದಿಗೆ ಬಂದಿದ್ದ ಈ ಯುವಕ, ಬುಧವಾರ ಸಂಜೆ ನಗರದ ಕೊಪ್ಪಳ ರಸ್ತೆಯಲ್ಲಿರುವ ಹಳಿಯನ್ನು ದಾಟಿ ಬಹಿರ್ದೆಸೆಗೆ ಹೋಗಿದ್ದಾನೆ.

ಕಿವಿಯಲ್ಲಿ ಹೆಡ್ಫೋನ್ ಇಟ್ಟುಕೊಂಡು ಹಳಿ ದಾಟುತ್ತಿರುವಾಗ ಆಕಸ್ಮಿಕವಾಗಿ ಆಗಮಿಸಿದ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ. ರೈಲು ಗಂಗಾವತಿಯಿಂದ ಹುಬ್ಬಳ್ಳಿಗೆ ಹೊರಟಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಗಂಗಾವತಿಯಲ್ಲಿ ರೈಲು ಸೇವೆ ಆರಂಭವಾಗಿ ಒಂಭತ್ತು ತಿಂಗಳಾಯಿತು. ಇದೇ ಮೊದಲ ಬಾರಿಗೆ ರೈಲಿಗೆ ಸಿಲುಕಿ ಯುವಕ ಸಾವನ್ನಪ್ಪಿದ ಘಟನೆ ನಡೆದಿದೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.