ಕೆ.ಎನ್.ಪಿ.ವಾರ್ತೆ,ಗಂಗಾವತಿ,ನ.26;

ತಾಲೂಕಿನ ಶ್ರೀರಾಮ ನಗರದಲ್ಲಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಪುರೋಗಾಮಿ ಮೊದಲ ಚಿಂತನ ಮಂಥನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಸಸಿ ನೆಡುವ ಮೂಲಕ ವೆಂಕಟೇಶ ಜಿ.ಕೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜೀವನದಲ್ಲಿ ಮೊದಲು ಗುರಿ ಇರಬೇಕು. ಖಾಲೀ ಕೂರದೆ ಜೀವನದಲ್ಲಿ ಸದಾ ಕಾಯಕದೊಂದಿಗೆ ಶ್ರಮ ವಹಿಸಬೇಕು. ಆಟ, ಪಾಠ, ನಲಿವಿನೊಂದಿಗೆ ಓದುವ ಮೂಲಕ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂದರು.

ಶರಣಪ್ಪ ಮಾತನಾಡಿ, ಯಾವುದು ಅನುಪಯೋಗವಲ್ಲ. ಈ ಜಗತ್ತಿನಲ್ಲಿ ಪ್ರಯತ್ನ ಶೀಲರಾಗಬೇಕು. ಸಾಧನೆಯ ಹಾದಿ ನಮ್ಮದಾಗಬೇಕು, ಸಾಧಕರಾಗಬೇಕು ಎಂದರು.

ಕೆ.ಕೆ.ಎಸ್.ಎಸ್.ವಿ ಪ್ರಸಾದ ಮಾತನಾಡಿ, ಪರೀಕ್ಷೆಯಲ್ಲಿ ಭಾಷೆ ಹೆದರಿಕೆ ಇರಬಾರದು. ನಮ್ಮ ಕನ್ನಡ ಮಾತೃ ಭಾಷೆ ಕಲಿತಾಗ ಇತರೆ ಭಾಷೆಗಳು ಸರಳವಾಗುತ್ತವೆ.

ಎಲ್ಲರಿಗೂ ಸ್ಪರ್ಧಾತ್ಮಕ ಪರೀಕ್ಷೆ ಎಂದರೆ ಭಯವಾಗಿದೆ. ಅದಕ್ಕೆ ಕಾರಣ ಅಗತ್ಯ ಮಾರ್ಗದರ್ಶನದ ಕೊರತೆ. ಅದಕ್ಕೆ ಹೇಗೆ ಸಿದ್ಧತೆ ನಡೆಸಬೇಕೆಂಬ ಬಗ್ಗೆ ಅವರಲ್ಲಿ ಗೊಂದಲ ಇರುವುದು ಸಹಜ.

ಈ ನಿಟ್ಟಿನಲ್ಲಿ ನಮ್ಮ ಪುರೋಗಾಮಿ ತಂಡದಿಂದ ಸರಕಾರಿ ಶಾಲೆಯ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಬಗೆಯ ಕುರಿತಾದ ಪ್ರಯತ್ನಗಳನ್ನು ಮಾಡುತ್ತೇವೆಂದು ತಿಳಿಸಿದರು.

ಪುರೋಗಾಮಿ ಮೊದಲ ಚಿಂತನ ಮಂಥನ ಕಾರ್ಯಕ್ರಮ

ಕಾರ್ಯಕ್ರಮದಲ್ಲಿ ಇಂಗ್ಲೀಷ್ ವ್ಯಾಕರಣ ಪುಸ್ತಕಗಳನ್ನು ಶಾಲಾ ಮಕ್ಕಳಿಗೆ ಹಾಗೂ ಪುರೋಗಾಮಿ ಗುಂಪಿಗೆ, ಪುಸ್ತಕ ಜೋಳಿಗೆಗೆ ಉಚಿತವಾಗಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಿದ್ದಣ್ಣ ಜಕ್ಲಿ, ಸತ್ಯನಾರಾಯಣ ಶಿಕ್ಷಕರು, ಎಂ.ಡಿ.ರಪೀ ತಾಲೂಕ ಪಂ.ಸದಸ್ಯರು, ಶರಣಪ್ಪ ಪ್ರಾಂಶುಪಾಲರು, ಸಿ.ಪ್ರಭಾಕರ, ಸೋಮು ಕುದಿರಿಹಾಳ, ಶರಣಬಸಪ್ಪ ಶಿಕ್ಷಕರು, ಶರಣಬಸವರಾಜ ರೆಡ್ಡಿ, ಸುಮಂಗಲ, ನಾಗರಾಜ ಎ.ಇ, ಮಂಜುಳಾ ಭಾರತೀಶ್, ತ್ರಿವೇಣಿ ಹಾಗೂ ವೀರವೇಣಿ ಶಾಲಾ ಮಕ್ಕಳು ಭಾಗಿಯಾಗಿದ್ದರು.

ವರದಿ : ಹನುಮೇಶ್ ಭಾವಿಕಟ್ಟಿ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.