ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಆ.14;

ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಮುಸ್ಟೂರು ಗ್ರಾಮದಲ್ಲಿ ಪುರಾತನ ಶಾಸನಗಳು ಹಾಗೂ ವಿಗ್ರಹಗಳು ಪತ್ತೆಯಾಗಿವೆ.

ಗ್ರಾಮದ ಶ್ರೀ ಓಂಕಾರೇಶ್ವರ ಮಠದ ಮುಂಭಾಗದಲ್ಲಿ ಮಹಾದ್ವಾರ ನಿರ್ಮಿಸಲು ಜೆ.ಸಿ.ಬಿ ಯಂತ್ರದ ಮೂಲಕ ಬುನಾದಿ ತೆಗೆಯುತ್ತಿರುವಾಗ ಪುರಾತನ ಶಾಸನಗಳು ಹಾಗೂ ವಿಗ್ರಹಗಳು ಪತ್ತೆಯಾಗಿವೆ.

ಸುಮಾರು 7 ಅಡಿ ಆಳದ ಬುನಾದಿ ತೆಗೆಯುವಾಗ ಈಶ್ವರ, ವಿಘ್ನೇಶ್ವರ, ಪಾರ್ವತಿ ದೇವಿ, ಚಾಮುಂಡೇಶ್ವರಿ, ಪಾಣಿಪಟ್ಲು, ಗೋಡೆಗೆ ಹಾಕುವ ಶಿಲಾ ಶಾಸನಗಳು ವೀರಗಲ್ಲು, ಮಾಸ್ತಿಕಲ್ಲು, ಸೇರಿದಂತೆ ಇತರೆ ವಿಗ್ರಹಗಳು ಪತ್ತೆಯಾಗಿವೆ.

920ನೇ ಶತಮಾನದ ದಾಖಲೆಯನ್ನು ಸೇರುತ್ತವೆ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಈ ದೇವಾಲಯ ಪ್ರಾಚೀನ ಕಾಲದ ಶಿವಾಲಯದ ದೇವಾಲಯವಾಗಿದೆ ಎನ್ನಲಾಗಿದೆ.

ಒಟ್ಟಾರೆ ಇದಕ್ಕೆ ಸಂಬಂಧಪಟ್ಟ ಇಲಾಖೆಯವರು ಶಾಸನಗಳ ಬಗ್ಗೆ ಸಂಶೋಧನೆ ಮಾಡಿಸಿ ದಾಖಲೆಯನ್ನು ಹೊರ ತೆಗೆಯಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವರದಿ : ಮಹಮ್ಮದ್ ಅಬ್ದುಲ್ ರಖೀಬ್

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.