ಹಂಪಿ ಉತ್ಸವ-2020 ಕ್ಕೆ ಭರ್ಜರಿ ಸಿದ್ಧತೆ : ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರ ನೇತೃತ್ವದಲ್ಲಿ ಜಿಲ್ಲಾಡಳಿತ ತಂಡ ಹಂಪಿ ಭೇಟಿ ನೀಡಿದ ಅಧಿಕಾರಿಗಳು ಪರಿಶೀಲನೆ ನಡೆಸಿದರು.

ಜ.11 ಮತ್ತು 12ರಂದು ನಡೆಯಲಿರುವ ಹಂಪಿ ಉತ್ಸವ-2020 ದ ಸಿದ್ಧತೆಗಳನ್ನು ಜಿಲ್ಲಾಡಳಿತ ಮಂಗಳವಾರ ಪರಿಶೀಲಿಸಿತು.

ಎದುರು ಬಸವಣ್ಣ ಮಂಟಪದ ಎದುರುಗಡೆಯ ಸ್ಥಳ, ಗಾಯತ್ರಿ ಪೀಠದ ವೇದಿಕೆಯ ಸ್ಥಳ, ಮಾಧ್ಯಮ ಗ್ಯಾಲರಿ, ಗ್ರೀನ್ ರೂಂ, ಮಳಿಗೆಗಳ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. 

ನಂತರ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ನಿರ್ಮಿಸಲಾಗುವ ವೇದಿಕೆ ಸ್ಥಳ, ಮೆಹಂದಿ ಮತ್ತು ರಂಗೋಲಿ ಸ್ಪರ್ಧೆಗಳ ಸ್ಥಳಗಳನ್ನು ಪರಿಶೀಲಿಸಿದರು.

ಸ್ವಚ್ಛತೆ ಹಾಗೂ ಇನ್ನಿತರ ಕ್ರಮಗಳನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕಡಲೇಕಾಳು ಗಣೇಶ ಹಾಗೂ ಸಾಸಿವೆ ಕಾಳು ಗಣೇಶ ಬಳಿ ನಿರ್ಮಿಸಲಾಗುವ ವೇದಿಕೆ ಸ್ಥಳ ಪರಿಶೀಲಿಸಿದರು ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಪರಿಶೀಲಿಸಿದರು ಮತ್ತು ಟೆಂಡರ್ ಪ್ರಕ್ರಿಯೆ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಕೈಗೆತ್ತಿಕೊಳ್ಳಲು ಸೂಚಿಸಿದರು.

ಎರಡು ದಿನಗಳ ಕಾಲ ನಡೆಯಲಿರುವ ಈ ಹಂಪಿ ಉತ್ಸವದಲ್ಲಿ ನಾಲ್ಕು ವೇದಿಕೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

ಹಂಪಿ ಉತ್ಸವ :

ವಿಜಯ ಉತ್ಸವ ಎಂತಲೂ ಕರೆಯಲ್ಪಡುವ ಹಂಪಿ ಉತ್ಸವವು ಕರ್ನಾಟಕದ ವರ್ಣರಂಜಿತ ಉತ್ಸವಗಳ ಪೈಕಿ ಒಂದಾಗಿದೆ.

ರಾಜ್ಯವಲ್ಲದೆ ದೇಶದ ಹಲವು ಭಾಗಗಳಿಂದಲೂ ಸಹ ಜನರು, ಪ್ರವಾಸಿಗರು ಹಾಗೂ ಮುಖ್ಯವಾಗಿ ವಿವಿಧ ಕಲಾವಿದರು ಈ ಉತ್ಸವದಲ್ಲಿ ಪಾಲ್ಗೊಂಡು ಕಳೆ ತರುತ್ತಾರೆ. 

ಹಲವಾರು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಂಪಿ ಉತ್ಸವದ ಪ್ರಮುಖ ಆಕರ್ಷಣೆ.

ಬೊಂಬೆಗಳಾಟ, ಭಾರ ಎತ್ತುವಿಕೆ, ನಾಟಕ, ಸಂಗೀತ, ನೃತ್ಯ ಮುಂತಾದ ವಿವಿಧ ಕಾರ್ಯಕ್ರಮಗಳು ಅತ್ಯಂತ ಸಡಗರದಿಂದ ಈ ಉತ್ಸವದಲ್ಲಿ ನಡೆಯುತ್ತವೆ.

ಕಲೆ, ಸಂಸ್ಕೃತಿಗಳಲ್ಲಿ ಆಸಕ್ತಿ ಇರುವವರು ಈ ಹಂಪಿ ಉತ್ಸವ-2020ನ್ನು ಬಲು ಆತುರದಿಂದ ಎದುರು ನೋಡುತ್ತಿರುತ್ತಾರೆ ಎಂದರೆ ತಪ್ಪಾಗಲಾರದು.

ಈ ಉತ್ಸವವನ್ನು ಕರ್ನಾಟಕ ಸರ್ಕಾರದ ವತಿಯಿಂದ ಶಿಸ್ತು ಬದ್ಧವಾಗಿ ಆಯೋಜಿಸಲಾಗುತ್ತದೆ.

ಸಾಕಷ್ಟು ಪ್ರವಾಸಿಗರು ಈ ಸಮಯದಲ್ಲಿ ಇಲ್ಲಿ ಆಗಮಿಸುವುದರಿಂದ ಸಾಕಷ್ಟು ಮುಂಚಿತವಾಗಿಯೆ ಪೂರ್ವ ತಯಾರಿ ಮಾಡಿಕೊಂಡಿರಲಾಗುತ್ತದೆ.

ನಾದ ಹೊಮ್ಮಿಸುವ ಕಂಬಗಳು, ಬಡವ ಲಿಂಗ, ಸಾಸಿವೆ ಗಣೇಶ, ಕಲ್ಲಿನ ರಥ, ವಿರೂಪಾಕ್ಷ ದೇವಸ್ಥಾನ ಗೋಪುರ.

ಉಗ್ರನರಸಿಂಹನ ಸುಂದರ ಶಿಲಾ ವಿಗ್ರಹವಾಗಲಿ ಎಲ್ಲವೂ ಒಂದಕ್ಕಿಂತ ಒಂದು ವಿಶಿಷ್ಟ ಕಲಾ ರಚನೆಗಳಾಗಿದ್ದು ಅಂದಿನ ಕಲಾ ನೈಪುಣ್ಯತೆಯನ್ನು ಹಾಡಿ ಹೊಗಳುವಂತೆ ಮಾಡುತ್ತವೆ.

ರಾಜ್ಯದಲ್ಲಿನ ನೆರೆ ಹಾವಿಯಿಂದ ಈ ಬಾರಿಯ ಹಂಪಿ ಉತ್ಸವ-2020 ಸ್ವಲ್ಪ ಕಳೆಗುಂದಿರುವುದು ಮೇಲ್ನೋಟಕ್ಕೆ ಕಾಣಿಸಿತ್ತಿದ್ದು, ಉತ್ಸವ ಸಂದರ್ಭದಲ್ಲಿ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಲಿದೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.