ಕೆ.ಎನ್.ಪಿ.ವಾರ್ತೆ,ಗಾಜಿಯಾಬಾದ್,ಏ.09;
ಬೈಕಿನಲ್ಲಿ ಬಂದ ಅಪರಿಚಿತರಿಬ್ಬರು ಪತ್ರಕರ್ತ ಅನುಜ್ ಚೌಧರಿ ಮೇಲೆ ನಿನ್ನೆ ರಾತ್ರಿ ಗುಂಡಿನ ದಾಳಿ ನಡೆಸಿದ್ದಾರೆ.
ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿ, ಹಿಂದಿ ಭಾಷೆಯ ಖಾಸಗಿ ನ್ಯೂಸ್ ಚಾನೆಲ್ ವೊಂದರ ಪತ್ರಕರ್ತರೊಬ್ಬರ ಮೇಲೆ ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ.
ಗುಂಡೇಟಿನಿಂದ ಗಾಯಗೊಂಡಿರುವ ಪತ್ರಕರ್ತ ಅನುಜ್ ಚೌಧರಿಯನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಳೆಯ ದ್ವೇಷದ ಕಾರಣ ಅಪರಿಚಿತರು ಈ ಹತ್ಯೆಗೆ ಸಂಚು ರೂಪಿಸಿರಬಹುದೆಂದು ಶಂಕಿಸಲಾಗಿದ್ದು, ತನಿಖೆ ನಡೆಯುತ್ತಿದೆ.