ಕೆ.ಎನ್.ಪಿ.ವಾರ್ತೆ,ಗದಗ,ಜ.11;

2009ರಿಂದ ಆರಂಭವಾದ ಹೋರಾಟದ ಫಲವಾಗಿ ಉತ್ತರ ಕರ್ನಾಟಕದ ಸಹ್ಯಾದ್ರಿ, ಔಷಧ ಸಸ್ಯಗಳ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ಕಪ್ಪತಗುಡ್ಡವನ್ನು ವನ್ಯಧಾಮವನ್ನಾಗಿ ರಾಜ್ಯ ಸರ್ಕಾರ ಘೋಷಿಸಿರುವುದು ಪರಿಸರ ಪ್ರಿಯರಲ್ಲಿ ಸಂತಸ ಮೂಡಿಸಿದೆ.

ಬೆಂಗಳೂರಿನಲ್ಲಿ ಬುಧವಾರ ವನ್ಯಜೀವಿ ಮಂಡಳಿ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಹಾಗೂ ಅರಣ್ಯ ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಪ್ಪತಗುಡ್ಡಕ್ಕೆ ವನ್ಯಧಾಮ ಸ್ಥಾನಮಾನ ಕಲ್ಪಿಸುವ ಜೊತೆಗೆ ತುಮಕೂರ ವಿಭಾಗದ ಬುಕ್ಕಾ ಪಟ್ಟಣ ಮೀಸಲು ಅರಣ್ಯ ಪ್ರದೇಶವನ್ನೂ ವನ್ಯಧಾಮವಾಗಿ ಘೋಷಿಸಿದ್ದು, ಮಲೆಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ.

ಬಳ್ಳಾರಿ ಜಿಲ್ಲೆಯ ಗುಡಿಕೋಟೆ ಕರಡಿಧಾಮವನ್ನು 4500 ಹೆಕ್ಟೇರ್‌ ನಿಂದ 15000 ಹೆಕ್ಟೇರ್‌ಗೆ ವಿಸ್ತರಣೆ ಹಾಗೂ ಕೈಗಾ ಅಣು ವಿದ್ಯುತ್‌ ಯೋಜನೆಯ 5 ಮತ್ತು 6 ನೇ ಘಟಕ ಸ್ಥಾಪನೆಗೆ ನಿರಪೇಕ್ಷಣಾ ಪತ್ರ ನೀಡಲು ಅರಣ್ಯ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ.

ಸರಕಾರದ ಘೋಷಣೆ :

ಔಷಧೀಯ ಸಸ್ಯಗಳ ಕಾಶಿ ಕಪ್ಪತಗುಡ್ಡವು ಗದಗ, ಮುಂಡರಗಿ, ಶಿರಹಟ್ಟಿ ತಾಲೂಕುಗಳಲ್ಲಿ ಹರಡಿಕೊಂಡಿದೆ. ಈ ಹಿಂದಿನಂತೆ ಗದಗ ತಾಲೂಕಿನ 401.811 ಹೆಕ್ಟೇರ್‌, ಮುಂಡರಗಿ ತಾಲೂಕಿನ 15,453.673 ಹೆಕ್ಟೇರ್‌, ಶಿರಹಟ್ಟಿ ತಾಲೂಕಿನ 2,016.764 ಹೆಕ್ಟೇರ್‌ ಸಹಿತ ಒಟ್ಟು 330 ಚದರ ಕಿ.ಮೀ. ವ್ಯಾಪ್ತಿಯನ್ನು ವನ್ಯಧಾಮ/ಅಭಯಾರಣ್ಯ ಎಂದು ರಾಜ್ಯ ಸರಕಾರ ಘೋಷಣೆ ಮಾಡಿದೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.