ಕೆ.ಎನ್.ಪಿ.ವಾರ್ತೆ,ಹಾವೇರಿ,ಆ.27;

ತಾಲೂಕಿನ ಕುರುಬಗೊಂಡ ಗ್ರಾಮದಲ್ಲಿ ಪ್ರವಚನ ಕೀರ್ತನಕಾರ, ಆಕಾಶವಾಣಿ ಕಲಾವಿದ ಪಂಚಾಕ್ಷರ ಶಾಸ್ತ್ರೀಗಳು ಹಿರೇಮಠ ಕುರುಬಗೊಂಡ ಅವರ ಪಾರ್ಥಿವ ಶರೀರ ಸೋಮವಾರ ಸಂಜೆ ಪಂಚಭೂತಗಳಲ್ಲಿ ಲೀನವಾಯಿತು.

ಕುರುಬಗೊಂಡ ತಿಮ್ಮಕಾಪುರ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಪಾರ್ಥಿವ ಶರೀರ ಮೆರವಣಿಗೆ ಜರುಗಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು, ಅಭಿಮಾನಿಗಳು, ಸಂಬಂಧಿಕರು ಭಾಗಿಗಳಾಗಿ ಅಂತಿಮ ನಮನ ಸಲ್ಲಿಸಿದರು.

ಪಂಚಾಕ್ಷರಿ ಶಾಸ್ತ್ರೀ ಸೋಮವಾರ ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಗಂಗಾವತಿಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದರು. ಅವರ ಪಾರ್ಥಿವ ಶರೀರವನ್ನು ಹುಟ್ಟೂರಾದ ತಾಲೂಕಿನ ಕುರುಬಗೊಂಡ ಗ್ರಾಮಕ್ಕೆ ಕೊಂಡೊಯ್ಯಲಾಗಿತ್ತು. ವೀರಶೈವ ಪದ್ದತಿಯಂತೆ ವಿವಿಧ ಮಠಾಧೀಶರು, ಕುಟುಂಬದವರ ಸಮ್ಮುಖದಲ್ಲಿ ಅಂತಿಮ ವಿಧಿ ವಿಧಾನಗಳು ನೆರವೇರಿದವು.

ಪಂಚಾಕ್ಷರಿ ಶಾಸ್ತ್ರಿ ಪಂಚಭೂತಗಳಲ್ಲಿ ಲೀನ

ಗಣ್ಯರ ಸಂತಾಪ :

ಪಂಚ ಪೀಠದ ಜಗದ್ಗುರುಗಳು ನೆಗಳೂರ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ, ಕನಕಗಿರಿ ವಿರಕ್ತಮಠದ ಚನ್ನಮಲ್ಲ ಸ್ವಾಮೀಜಿ, ಹೊಸರಿತ್ತಿ ಗುದ್ದಲಿಶ್ವರ ಸ್ವಾಮೀಜಿ, ಸದಾಶಿವ ಸ್ವಾಮೀಜಿ, ಕೂಡಲದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಾನಿಹಳ್ಳಿ ಪುರವರ್ಗ ಮಠದ ಮಳೆಯೋಗೇಶ್ವರ ಶಿವಾಚಾರ್ಯ ಸ್ವಾಮೀಜಿ, ನಂದಿಪುರದ ಮಹೇಶ್ವರ ಸ್ವಾಮೀಜಿ ಸೇರಿದಂತೆ ನಾಡಿನ ವಿವಿಧ ಮಠಾದೀಶರು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಮಾಜಿ ಶಾಸಕ ಬಸವರಾಜ ಶಿವಣ್ಣನವರ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನವರ ಸೇರಿದಂತೆ ರಾಜಕೀಯ ಧಾರ್ಮಿಕ ಮುಖಂಡರುಗಳು ಪಂಚಾಕ್ಷರಿ ಶಾಸ್ತ್ರಿಗಳ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಚಿಕ್ಕ ಲಿಂಗದಹಳ್ಳಿ ಹೆಡಿಗೊಂಡ ಕಲ್ಲಾಪುರ ನೆಗಳೂರ ಮಾಹೂರ ಹುಬ್ಬಳ್ಳಿ ಲಕ್ಷ್ಮೇಶ್ವರ ಹಾನಗಲ್ ಗ್ರಾಮಗಳ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಗ್ರಾಮಸ್ಥರು, ಸಾರ್ವಜನಿಕರು ಪಾಲ್ಗೊಂಡು ಅಂತಿಮ ದರ್ಶನ ಪಡೆದರು.

ಪರಿಚಯ:

ಪಂಚಾಕ್ಷರ ಶಾಸ್ತ್ರೀಗಳು ಹಿರೇಮಠ ಮೂಲತಃ ಕುರುಬಗೊಂಡದವರಾಗಿದ್ದು ವೀರಭದ್ರಶಾಸ್ತ್ರಿ ನಾಗರತ್ನ ದಂಪತಿಗಳ ಹಿರಿಯ ಪುತ್ರರಾಗಿ 1.1.1963 ಜನಿಸಿದರು. ಪ್ರಾಥಮಿಕ ಹಾಗೂ ಮಾದ್ಯಮಿಕ ಶಿಕ್ಷಣವನ್ನು ಕುರುಬಗೊಂಡದಲ್ಲಿ ಮುಗಿಸಿ ತಂದೆಯಂತೆ ತಾವು ಪ್ರವಚನ ಕಾರರಾಗಬೇಕೆಂಬ ಹಂಬಲದಿಂದ ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ತೆರಳಿ ಪಂ.ಪುಟ್ಟರಾಜ ಕವಿಗವಾಯಿಗಳ ಅಚ್ಚು ಮೆಚ್ಚಿನ ಶಿಷ್ಯರಾದರು. ನಂತರ ಬಿ.ಎ ಮ್ಯೂಜಿಕ್ ಪದವಿ ಪಡೆದರು. ರಾಜ್ಯ, ಹೊರ ರಾಜ್ಯಗಳಲ್ಲಿ, ಹಳ್ಳಿ ಪಟ್ಟಣಗಳಲ್ಲಿ ಪುರಾಣ ಪ್ರವಚನ ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ನಾಡಿನ ಗುರು ವಿರಕ್ತ ಮಠಾಧೀಶರ ಅಚ್ಚುಮೆಚ್ಚಿನ ಪ್ರವಚನಕಾರಾಗಿದ್ದರು. 

ವರದಿ : ಗುರುಶಾಂತಸ್ವಾಮಿ ಹಿರೇಮಠ

http://karnatakanewsportal.com/panchakshara-shastri-hiremata-nidhana/

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.