ಕೆ.ಎನ್.ಪಿ.ವಾರ್ತೆ,ಮುಂಡರಗಿ,ಅ.20;

ಮುಂಡರಗಿ ಪುರಸಭೆ ವ್ಯಾಪ್ತಿಯ ವಸತಿ ರಹಿತ ಫಲಾನುಭವಿಗಳಿಗೆ ಸರಕಾರ ಆಶ್ರಯ/ ವಸತಿ ನಿವೇಶನಗಳನ್ನು ನಿರ್ಮಿಸಿಕೊಟ್ಟಿಲ್ಲ. ಕಾರಣ ನಗರದಲ್ಲಿ ಅಕ್ಟೋಬರ್ 24 ರಂದು ಗದಗ-ಹರಪನಹಳ್ಳಿ ರೈಲ್ವೆಮಾರ್ಗ ರಚನೆಯ ಜಂಟಿ ಕ್ರಿಯಾ ಸಮಿತಿ, ವಸತಿ ರಹಿತರು, ಎಲ್ಲಾ ಪ್ರಗತಿಪರ ಮತ್ತು ಅಭಿವೃದ್ಧಿಪರ ಚಿಂತನೆಯ ಸಂಘಟನೆಗಳು ಧರಣಿಗೆ ಕೂರಲು ಸಿದ್ಧ ಎಂದು ಗದಗ-ಹರಪನಹಳ್ಳಿ ರೈಲ್ವೆಮಾರ್ಗ ರಚನೆಯ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷ ಮಂಜುನಾಥ ವೀ. ಕಾಗನೂರಮಠ ತಿಳಿಸಿದರು.

ನಗರದಲ್ಲಿ 2 ಕೋಟಿ 25ಲಕ್ಷ ರೂ.ವೆಚ್ಚದಲ್ಲಿ ನಿವೇಶನ ನೀಡಲು 2 ವರ್ಷದ ಹಿಂದೆಯೇ ಪುರಸಭೆಯವರು ಭೂಮಿಯನ್ನು ಖರೀದಿ ಮಾಡಿದ್ದರು, ಆದರೆ ಇದುವರೆಗೆ ನಗರದ ಪುರಸಭೆ ವ್ಯಾಪ್ತಿಗೆ ಬರುವ ರೈತರು, ಬಡವರಿಗೆ ಕೃಷಿಕಾರ್ಮಿಕರಿಗೆ, ನಿವೇಶನ ರಹಿತರಿಗೆ ಎಲ್ಲಾ ಜಾತಿ ಜನಾಂಗದ ಬಡವರಿಗೆ 15 ವರ್ಷದಿಂದ ನಿವೇಶನ ರಹಿತರಿಗೆ ಇದುವರೆಗೂ ನಿವೇಶನ ಹಂಚಿಕೆ ಮಾಡದೇ ಕಾಲಹರಣಮಾಡುತ್ತಿದ್ದು, ವಸತಿ ನಿವೇಶನ ಬಡವರ ಪಾಲಿಗೆ ಗಗನ ಕುಸುಮವಾಗಿದೆ. ಕಡು ಬಡವರ ನಿವೇಶನ ಕಷ್ಟ ಪರಿಹರಿಸುವುದು ಇಷ್ಟ ಇಲ್ಲ ಎಂಬಂತೆ ಸರಕಾರ ವರ್ತನೆ ತೋರಿದೆ.

ನಿವೇಶನ ಹಂಚಿಕೆಗೆ ಕ್ರಮವಹಿಸಲು ಆಡಳಿತ ತೋರಿರುವ ನಿರ್ಲಕ್ಷ್ಯ ಬಡ ಕುಟುಂಬಗಳ ಬದುಕಿಗೆ ಉರುಳಾಗುವಂತಾಗಿದೆ. ಜನಪ್ರತಿನಿಧಿಗಳು ಈ ಕುರಿತು ಗಮನಹರಿಸದೆ ಬಡವರ ವಿರೋಧಿ ಧೋರಣೆಯಲ್ಲಿರುವುದು ಸಾಬೀತಾಗುವಂತಿದೆ.

ಅಕ್ಟೋಬರ್ 24 ರಂದು ವಸತಿ ರಹಿತರ ಪ್ರತಿಭಟನೆ : ಕಾಗನೂರಮಠ

ಸಾರ್ವಜನಿಕ ಸಮಸ್ಯೆಗಳ ಕುರಿತು ಇದುವರೆಗೂ ಪತ್ರಿಕೆಗಳು ವರದಿ ಮಾಡಿದ್ದರು ಸಹ ಅಧಿಕಾರಿಗಳು ಗಮನಹರಿಸುತ್ತಿಲ್ಲ, ಕಾರಣ ಅಕ್ಟೋಬರ್ 24ನೇ ರಂದು ಗುರುವಾರ ಮುಂಜಾನೆ 11 ಗಂಟೆಗೆ ನಮ್ಮ ಹಕ್ಕೊತ್ತಾಯಕ್ಕಾಗಿ ಧರಣಿ ಸತ್ಯಾಗ್ರಹ ಕೂರಲು ತಹಸೀಲ್ದಾರರಿಗೆ ಪತ್ರದ ಮೂಲಕ ವಿನಂತಿಸಿಕೊಳ್ಳಲಾಗಿದೆ ಎಂದು ಕಾಗನೂರಮಠ ತಿಳಿಸಿದರು.

ವರದಿ : ಕೋಗಳಿ ಶೇಖರ್

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.