ಕೆ.ಎನ್.ಪಿ.ವಾರ್ತೆ,ಬೆಂಗಳೂರು,ನ.23;

ಡಿಸೆಂಬರ್ 01ರಿಂದ ದೇಶದಲ್ಲಿ ಎಲ್ಲ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚಲಿಸುವ ವಾಹನಗಳು ಟೋಲ್ ಸಂಗ್ರಹ ಕೇಂದ್ರ ದಾಟಬೇಕಾದರೆ FASTag ಹೊಂದುವುದು ಕಡ್ಡಾಯವಾಗಲಿದೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಇದನ್ನು ನಿರ್ವಹಿಸುತ್ತಿದೆ. FASTag ಒಂದು ರೀತಿ ವಾಹನಗಳ ‘ಆಧಾರ್ ಕಾರ್ಡ್‌’ನಂತೆ ಕಾರ್ಯ ನಿರ್ವಹಿಸುತ್ತದೆ.

ಮುಂದಿನ ತಿಂಗಳು ಡಿಸೆಂಬರ್ 1ರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಶುಲ್ಕ ಪಾವತಿಗೆ ತಡೆರಹಿತ ಸೌಲಭ್ಯ ಒದಗಿಸುವ ಸಂಬಂಧ ಫಾಸ್ಟ್‌ ಟ್ಯಾಗ್

ಅಳವಡಿಕೆಯನ್ನು ಕಡ್ಡಾಯಗೊಳಿಸುತ್ತಿದ್ದು, ಸೀಮಿತ ಅವಧಿಯೊಳಗೆ ಯಾವುದೇ ಹೆಚ್ಚುವರಿ ಮೊತ್ತವಿಲ್ಲದೇ ಈ ಸೌಲಭ್ಯವನ್ನು ಉಚಿತವಾಗಿ ನೀಡಲು ಮುಂದಾಗಿದೆ.

ಡಿಸೆಂಬರ್ 1ರಿಂದ ಫಾಸ್ಟ್‌ ಟ್ಯಾಗ್ ಇಲ್ಲದ ವಾಹನ ಸವಾರರು ದುಪ್ಪಟ್ಟು ಶುಲ್ಕ ಪಾವತಿ ಮಾಡಬೇಕಿದ್ದು, ಈ ಸಂಬಂಧ ದೇಶದ ಬಹುತೇಕ ಟೋಲ್ ಗೇಟ್‌ಗಳನ್ನು ಉನ್ನತೀಕರಿಸಲಾಗಿದೆ.

ಗಂಟೆಗಟ್ಟಲೇ ಕ್ಯೂ ನಿಂತು ಟೋಲ್‌ ಶುಲ್ಕ ಕಟ್ಟುವ ತಾಪತ್ರಯ ಇನ್ಮುಂದೆ ಕಡಿಮೆಯಾಗಲಿದ್ದು, ವಾಹನಗಳ ಮಾಲೀಕರಿಗೆ ಫಾಸ್ಟ್‌ ಟ್ಯಾಗ್ ಖರೀದಿಗೂ ಸಹ ಸರಳವಾಗುವಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಈ ಸೌಲಭ್ಯದಿಂದಾಗಿ ವಾಹನ ಮಾಲೀಕರಿಗೆ ಸಾಕಷ್ಟು ಅನುಕೂಲತೆಗಳಿದ್ದು, ಇದನ್ನು ಖರೀದಿಸಲೂ ಗ್ರಾಹಕರಿಗೆ ಸುಲಭವಾಗುವಂತೆ ಅಮೆಜಾನ್‌ ಡಾಟ್‌ ಕಾಮ್‌ನಲ್ಲೂ ಸಹ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ.

ಇಷ್ಟು ದಿನ ಫಾಸ್ಟ್‌ ಟ್ಯಾಗ್ ಸೌಲಭ್ಯ ಪಡೆದುಕೊಳ್ಳಲು ಬಯಸುವ ವಾಹನ ಮಾಲೀಕರು ಟೋಲ್ ಬೂತ್‌ಗಳ ಬಳಿ ಇರುವ ಫಾಸ್ಟ್‌ ಟ್ಯಾಗ್ ಕೇಂದ್ರಗಳನ್ನು ಸಂಪರ್ಕಿಸಿ ಅಗತ್ಯ ದಾಖಲೆಗಳನ್ನು ನೀಡಬೇಕಾಗಿತ್ತು. ಇದರಿಂದ ವಾಹನ ಮಾಲೀಕರಿಗೆ ಕಿರಿಕಿರಿ ಉಂಟಾಗುತ್ತಿತ್ತು.

ಆದರೆ ಫಾಸ್ಟ್‌ ಟ್ಯಾಗ್ ಖರೀದಿ ಸುಲಭವಾಗಿಸಲು ಆನ್‌ಲೈನ್ ಮೂಲಕವೇ ಮಾರಾಟಕ್ಕೆ ಚಾಲನೆ ನೀಡಲಾಗಿದ್ದು, ಅಮೆಜಾನ್‌ನಲ್ಲಿ ಆಸಕ್ತ ವಾಹನ ಮಾಲೀಕರು ಅಗತ್ಯ ದಾಖಲೆಗಳನ್ನು ಪೂರೈಸುವ ಮೂಲಕ ಸುಲಭವಾಗಿ ಈ ಸೌಲಭ್ಯವನ್ನು ಪಡೆಯಬಹುದಾಗಿದೆ.

ಎಲ್ಲೆಲ್ಲಿ FASTag ಖರೀದಿಗೆ ಲಭ್ಯ?

ಟೋಲ್ ಪ್ಲಾಜ್‌ಗಳಲ್ಲೇ ಫಾಸ್ಟ್‌ ಟ್ಯಾಗ್ ಖರೀದಿ ಮಾಡಬಹುದಾಗಿದ್ದು, ಇಲ್ಲವೇ ಫಾಸ್ಟ್‌ ಟ್ಯಾಗ್ ಮಾರಾಟ ಮಾಡುವ ಖಾಸಗಿ ಏಜೆನ್ಸಿಗಳಿಂದಲೂ ಖರೀದಿ ಮಾಡಬಹುದು.

ಜೊತೆಗೆ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ಗಳಲ್ಲೂ ಫಾಸ್ಟ್‌ ಟ್ಯಾಗ್ ವಿತರಣೆಗೆ ಅವಕಾಶ ಕಲ್ಪಿಸಲಾಗಿದ್ದು, ಅಮೆಜಾನ್ ಡಾಟ್ ಕಾಮ್‌ ಮೂಲಕ ಫಾಸ್ಟ್‌ ಟ್ಯಾಗ್ ಪಡೆಯಬಹುದಾಗಿದೆ.

FASTag ನಿಂದ ಏನು ಪ್ರಯೋಜನ?

ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ಫಾಸ್ಟ್‌ ಟ್ಯಾಗ್ ಹೊಂದಿದ್ದರೆ ಹಲವು ಪ್ರಯೋಜನಗಳಿದ್ದು, ಸುಲಭವಾಗಿ ಟೋಲ್ ಶುಲ್ಕ ಪಾವತಿ ಮಾಡಬಹುದಲ್ಲದೇ ಆನ್‌ಲೈನ್ ರೀಚಾರ್ಜಿಂಗ್, ಎಸ್ಎಂಎಸ್ ಅಲರ್ಟ್ ಸೌಲಭ್ಯವಿರುತ್ತದೆ.

ಇದರಿಂದ ನಿಮ್ಮ ಫಾಸ್ಟ್‌ ಟ್ಯಾಗ್ ನಲ್ಲಿರುವ ಮೊತ್ತ ಮತ್ತು ನೀವು ಹೊರಟಿರುವ ಸ್ಥಳಗಳಲ್ಲಿನ ಟೋಲ್ ಸಂಗ್ರಹ ಕೇಂದ್ರಗಳ ಮಾಹಿತಿ ಜೊತೆ ಶುಲ್ಕುಗಳ ಮಾಹಿತಿ ಸಂದೇಶಗಳನ್ನು ಪಡೆಯಬಹುದಾಗಿದ್ದು, ವಿಶೇಷ ಸಂದರ್ಭಗಳಲ್ಲಿ ನೀವು ಕ್ಯಾಶ್ ಬ್ಯಾಕ್ ಆಫರ್‌ಗಳನ್ನು ಸಹ ಪಡೆಯುವ ಅವಕಾಶವಿರುತ್ತೆ.

FASTag ರೀಚಾರ್ಜ್ ಹೇಗೆ?

ಕ್ರೇಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಕಿಂಗ್ ಇಲ್ಲವೇ ಚೆಕ್ ಪಾವತಿಸಿಯೂ ರೀಚಾರ್ಜ್ ಮಾಡಿಕೊಳ್ಳಬಹುದಾಗಿದ್ದು, ಕನಿಷ್ಠ ರೂ.100 ರಿಂದ ಗರಿಷ್ಠ 1 ಲಕ್ಷ ತನಕ ರೀಚಾರ್ಜ್ ಮಿತಿ ಹೊಂದಿರುತ್ತೆ.

FASTag ಪಡೆಯೋದು ಹೇಗೆ? ಇಲ್ಲಿದೆ ನೋಡಿ ಮಾಹಿತಿ…

FASTag ಕಡ್ಡಾಯ : ಎಲ್ಲಾ ವಾಹನಕ್ಕೂ ಕಡ್ಡಾಯ ಏಕೆ? FASTag ಅಂದ್ರೇನು?

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.