ಕೆ.ಎನ್.ಪಿ.ಕವಿತೆ,ಜೂ.02;
ಕವಿಮಿತ್ರರೆ, ಇಂದು ಕೆ.ಎನ್.ಪಿ.ಯ ಕವಿತೆ ವಿಭಾಗದಲ್ಲಿ ಯುವ ಕವಿ ಜಯಕವಿ, ಮೈಸೂರು ಅವರ ಕವಿತೆ ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ/ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.
ನಿನ್ನ ಮುಗುಳು ನಗೆಗೆ ಸೋತೆ..!
ನಿನ್ನ ಮುಗುಳು ನಗೆಗೆ ಸೋತೆ
ಮೂಡಿ ಬಂತು ಕವಿತೆ..!
ಸಂಜೀವನವನ್ನೆ ತಂತು
ಆಗಿ ಬರಡಿಗೊರತೆ..!
ನವಿಲು ಕುಕಿಲು ಜಿಂಕೆ ಭರಿಸಿ
ಬದುಕ ಮಾಡಿ ನಂದನ..!
ಕಂಪಾಗಿಸಿತೀ ಜೀವನ
ತೇದ ಹಾಗೆ ಚಂದನ..!
ನೀನು ಮಳೆಯಬಿಲ್ಲೆ!? ತಿಳಿಯೆ
ಬಣ್ಣ ಬಳಿದೆ ಬದುಕಿಗೆ..!
ಇರುಳಿನಲ್ಲಿ ನರಳಿದೆನ್ನ
ಕರೆದು ತಂದೆ ನಸುಕಿಗೆ..!
ಈಜ ಕಲಿತೆ ಭಾವ ಕಡಲ
ಕವಿಯ ಸಮಯ ವಿಸ್ಮಯ..!
ಮುತ್ತನೆಷ್ಟೊ ಹೆಕ್ಕಿಕೊಂಡೆ
ಏರಿ ಕನಸ ನಾವೆಯ..!
ಮಣ್ಣು ನಾನು ಕಣ್ಣು ತಂದೆ
ನನ್ನೊಳಿರುವ ಹೊನ್ನಿಗೆ..!
ಕಾಣದಂಥ ಲೋಕ ತೆರೆಸಿ
ನಿಂತೆ ನನ್ನ ಬೆನ್ನಿಗೆ..!
ನಿನ್ನ ಹೂವ ಬೆರಳಿನಲ್ಲಿ
ಬೆಳಕಿನೂರ ತೋರಿಹೆ..!
ನಿನಗೆ ನಿತ್ಯ ಋಣಿಯು ನಾನು
ನೀ ರೂಪಕ ಮೀರಿಹೆ..!
- ಜಯಕವಿ, ಮೈಸೂರು
ನಿಮ್ಮ ಕವಿತೆಗಳನ್ನು ಕೂಡ ಕಳುಹಿಸಬಹುದು.
9513326661
ನೀವು ಕೂಡ ಬರೆಯಬಹುದು :
ಆತ್ಮೀಯರೇ ಕೆ.ಎನ್.ಪಿ.ಯಲ್ಲಿ ನೀವು ಕೂಡ ಬರೆಯಬಹುದಾಗಿದೆ. ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆಯಿರಿ, ಕೆ.ಎನ್.ಪಿ.ಗೆ ಕಳುಹಿಸಿರಿ.
ಈ-ವಿಳಾಸ : karnatakanewsportal@gmail.com
ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.
ಸುಂದರವಾದ ಕವಿತೆ… ನಾನು ಸೋತೆ
ಕವಿತೆಗಳು ಎಲ್ಲರನ್ನು ಸೋಲಿಸುತ್ತಿವೆ ಸರ್….