ಕೆ.ಎನ್.ಪಿ.ವಾರ್ತೆ,ಗಂಗಾವತಿ,ನ.26;

ನೇಪಾಳದಲ್ಲಿ ನ.22 ರಿಂದ 25 ರ ವರೆಗೆ ನಡೆದ ಮೊದಲನೆ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಗಂಗಾವತಿಯ ಕರಾಟೆ ಪಟುಗಳು ಭಾಗವಹಿಸಿ ಕಟಾ ಹಾಗೂ ಕುಮಿತೆ ವಿಭಾಗದಲ್ಲಿ ಚಿನ್ನ, ಬೆಳ್ಳಿ ಪದಕಗಳನ್ನು ಗೆದ್ದು ಉತ್ತಮ ಸಾಧನೆ ಮೆರೆದಿದ್ದು, ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಸುಮಾರು 8 ದೇಶಗಳು ಭಾಗವಹಿಸಿದ್ದವು. 

ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಗಂಗಾವತಿಯ ಸೈಯದ್ ಬಿಲಾಲ್ ಭಾಗವಹಿಸಿ ಕಟಾ ವಿಭಾಗದಲ್ಲಿ ಚಿನ್ನದ ಪದಕ (ಸೀನಿಯರ್ ವಿಭಾಗ) ಹಾಗೂ ಕುಮಿತೆಯಲ್ಲಿ (ಫೈಟ್) ಬೆಳ್ಳಿಪದಕ (45 ರಿಂದ 50 ಕೆಜಿ ವಿಭಾಗ) ಪಡೆದುಕೊಂಡಿದ್ದಾರೆ. 

ನೆರೆ ರಾಷ್ಟ್ರದಲ್ಲಿ ಮಿಂಚಿದ ಗಂಗಾವತಿಯ ಕರಾಟೆ ಕ್ರೀಡಾ ಪಟುಗಳು

ವಡ್ಡರಹಟ್ಟಿ ಗ್ರಾಮದ ಷಣ್ಮುಖಪ್ಪ ಕುಮಿತೆ ವಿಭಾಗದಲ್ಲಿ (ಫೈಟ್) ಚಿನ್ನದ ಪದಕ (65 ರಿಂದ 70ಕೆಜಿ ವಿಭಾಗ) ಮತ್ತು ಕಟಾ ವಿಭಾಗದಲ್ಲಿ (ಸೀನಿಯರ್ ವಿಭಾಗ) ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. 

ವಿದ್ಯಾರ್ಥಿಗಳ ವಿಭಾಗ

ಸಿಂಧನೂರು ಶಿವಾನಿ 17 ವರ್ಷದ ಒಳಗಿನ ಕಟಾ ವಿಭಾಗದಲ್ಲಿ ಬೆಳ್ಳಿ ಪದಕ ಮತ್ತು ಕುಮಿತೆ (ಫೈಟ್) ವಿಭಾಗದಲ್ಲಿ ಬೆಳ್ಳಿ ಪದಕ (40ಕೆಜಿ ವಿಭಾಗ) ಪಡೆದುಕೊಂಡಿದ್ದಾರೆ.

ನೆರೆ ರಾಷ್ಟ್ರದಲ್ಲಿ ಮಿಂಚಿದ ಗಂಗಾವತಿಯ ಕರಾಟೆ ಕ್ರೀಡಾ ಪಟುಗಳು

ಜೂನಿಯರ್ ವಿಭಾಗ

ಗಂಗಾವತಿ ಚೇತನ್ ಚಳ್ಳಮರದ 6 ವರ್ಷದೊಳಗಿನ ಕಟಾ ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ ಕುಮಿತೆ (ಫೈಟ್) ವಿಭಾಗದಲ್ಲಿ ಬೆಳ್ಳಿ ಪದಕ (20ಕೆಜಿ ಒಳಗಿನ ವಿಭಾಗದಲ್ಲಿ ) ಪಡೆದುಕೊಂಡಿದ್ದಾರೆ.

ಅಭಿನಂದನೆಗಳು :

ಕರಾಟೆ ತರಬೇತುದಾರರಾದ ಷಣ್ಮುಖಪ್ಪ ಶಾವಂತಗೇರಿ, ಸೈಯದ್ ಬಿಲಾಲ್ ಪಾಲಕರಾದ ಪ್ರವೀಣ್ ಕುಮಾರ, ಶಂಭುಲಿಂಗಪ್ಪ, ಗಂಗಾವತಿಯ ಕರಾಟೆ ಶಿಕ್ಷಕರ ಸಂಘ, ವಡ್ಡರಹಟ್ಟಿ ಸೋಮಯ್ಯ, ಪಿಯಾ ನಾಯಕ್, ವಡ್ಡರಹಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರು, ಯರ್ರಿಸ್ವಾಮಿಗೌಡ, ರಮೇಶ ನಾಯಕ್, ಹರನಾಯಕ್, ಸಿದ್ದು ಹಿರೇಮಠ್, ನಾಗರಾಜ ಆಚಾರ್ಯ ಹಾಗೂ ಊರಿನ ಗುರು ಹಿರಿಯರು ಕರಾಟೆ ಪಟುಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಭಿನಂದನೆ ಸಲ್ಲಿಸಿದ್ದಾರೆ. 

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.