ಕೆ.ಎನ್.ಪಿ.ವಾರ್ತೆ,ಕಮಲಾಪುರ,ಡಿ.18;

ಹಂಪಿ ವಿದ್ಯಾರಣ್ಯದ ಕನ್ನಡ ವಿಶ್ವವಿದ್ಯಾಲಯ ಮಂಟಪ ಸಭಾಂಗಣದಲ್ಲಿ ಡಿ.20 ರಿಂದ ಎರಡು ದಿನಗಳ ಕಾಲ “ನೇಕಾರಿಕೆ: ವೃತ್ತಿ ಮತ್ತು ಸಂಸ್ಕೃತಿ” ವಿಷಯ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಏರ್ಪಡಿಸಲಾಗಿದೆ.

ಅದಕ್ಕಾಗಿ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ದೇವರ ದಾಸಿಮಯ್ಯ ಅಧ್ಯಯನ ಪೀಠದ ಸಂಚಾಲಕ ಹಾಗೂ ಶ್ರೀ ಮುದನೂರ ಮಹಾಸಂಸ್ಥಾನ ಮಠದ ಕಾರ್ಯದರ್ಶಿ ರಾಮಸ್ವಾಮಿ ಜಂಟಿಯಾಗಿ ಹೇಳಿದ್ದಾರೆ.

ಹಂಪಿ ಕನ್ನಡ ವಿಶ್ವವಿದ್ಯಾಲಯ ದೇವರ ದಾಸಿಮಯ್ಯ ಅಧ್ಯಯನ ಪೀಠ ಮತ್ತು ಮುದನೂರ ಮಹಾಸಂಸ್ಥಾನ ಮಠ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ

ನಡೆಯುವ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಡಿ.20 ರಂದು ಬೆಳಿಗ್ಗೆ 10.30 ಕ್ಕೆ ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ ಉದ್ಘಾಟಿಸಲಿದ್ದಾರೆ.

ಮುದನೂರ ಮಹಾಸಂಸ್ಥಾನ ಮಠದ ಡಾ.ಈಶ್ವರಾನಂದಸ್ವಾಮಿ ನೇತೃತ್ವ ವಹಿಸಲಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ ಆಶಯ ನುಡಿಗಳನ್ನಾಡಲಿದ್ದಾರೆ.

ವಿಠ್ಠಪ್ಪ ಗೋರಂಟ್ಲಿ ರಚನೆಯ `ದೇವರ ದಾಸಿಮಯ್ಯನವರ ವಚನಗಳ ಪ್ರಸ್ತುತತೆ’ ಪುಸ್ತಕವನ್ನು ಹಿರಿಯ ರಂಗಕರ್ಮಿ ಪ್ರಸನ್ನ ಅವರು ಬಿಡುಗಡೆ ಮಾಡಲಿದ್ದಾರೆ. ಹಂಪಿ ಕನ್ನಡ ವಿವಿ ಕುಲಪತಿ ಪ್ರೊ.ಸ.ಚಿ.ರಮೇಶ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಗಂಗಾವತಿ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಕೊಪ್ಪಳದ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಕಾಳಪ್ಪ ಕೊಂಕ್ತಿ, ಬಳ್ಳಾರಿ ಜಿಲ್ಲಾ ನೇ.ಸ.ಒಕ್ಕೂಟದ ಅಧ್ಯಕ್ಷ ಸಿ.ದೇವಾನಂದ, ಸಾಹಿತ್ಯ ಚಿಂತಕ ಜಿ.ಆರ್.ಮಂಜೇಶ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.

ಮಧ್ಯಾಹ್ನ 2.30 ಕ್ಕೆ ನಡೆಯುವ ಗೋಷ್ಠಿ-2 ರಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ನೇಕಾರರ ಕೊಡುಗೆ ಕುರಿತು ಸಂಸ್ಕೃತ ಉಪನ್ಯಾಸಕಿ ಗೌ.ತಿ.ವೆಂಕಟಾಚಲ, ನೇಕಾರರ ಸಾಂಸ್ಕೃತಿಕ ಪರಂಪರೆ ಕುರಿತು ಬೆಳಗಾವಿಯ ಕಾದಂಬರಿಗಾರ್ತಿ ಪಾರ್ವತಿ ಪಿಟಗಿ ಮಾತನಾಡಲಿದ್ದಾರೆ.

ದೇವಾಂಗ ಸೇವಾ ಸಮುದಾಯ ಅಧ್ಯಕ್ಷ ಎಂ.ಪಿ.ಉಮಾಶಂಕರ, ಕೆ.ಜಿ.ನಾರಾಯಣ ಕಕ್ಕೀರಿ, ಫರಗಿ ನಾಗರಾಜ ಅತಿಥಿಯಾಗಿ ಆಗಮಿಸಲಿದ್ದಾರೆ.

ಡಾ.ಮಂಜಪ್ಪಶೆಟ್ಟಿ ಮಸಗಲಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ. ಡಿ.21 ರಂದು ಬೆಳಿಗ್ಗೆ 10.30 ಕ್ಕೆ ನಡೆಯುವ ಗೋಷ್ಠಿ-4 ರಲ್ಲಿ ನೇಕಾರ ಸಮುದಾಯ ಕುರಿತು ಬೆಂಗಳೂರಿನ ಎಂ.ವಿಶ್ವನಾಥ, ಸಮುದಾಯ ಪತ್ರಿಕೆಗಳ ಗೊತ್ತುಗುರಿ ಕುರಿತು ಧಾರವಾಡ ಪ್ರಾಧ್ಯಾಪಕ ಡಾ.ನಾಗರಾಜ ಹಳ್ಳಿ ಅವರು ಮಾತನಾಡಲಿದ್ದಾರೆ.

ಹಾಸನದ ಆರ್.ಆಲ್.ದೇವರಾಜು, ಬೆಂಗಳೂರಿನ ಡಿ.ಕೃಷ್ಣಯ್ಯ, ಕಲಬುರಗಿಯ ಹಿರಿಯ ಪತ್ರಕರ್ತ ಸಂಗಮನಾಥ ರೇವತಗಾಂವ ಅತಿಥಿಯಾಗಿ ಆಗಮಿಸಲಿದ್ದಾರೆ. ನೇಕಾರವಾಣಿ ಮಾಸಪತ್ರಿಕೆ ಸಂಪಾದಕ ಲಿಂಗರಾಜು ಡಿ.ನೊಣವಿನಕೆರೆ ಅಧ್ಯಕ್ಷತೆ ವಹಿಸಲಿದ್ದಾರೆ.

ಮಧ್ಯಾಹ್ನ 12 ಕ್ಕೆ ಮಹಿಳೆಯರ ನಡೆಯುವ ಗೋಷ್ಠಿ-5 ರಲ್ಲಿ ನೇಕಾರಿಕೆ ವೃತ್ತಿಯಲ್ಲಿ ಮಹಿಳೆಯರ ಪಾತ್ರ ಕುರಿತು ಡಾ.ಪ್ರಜ್ಞಾ, ನೇಕಾರ ಸಾಮಾಜಿಕ ಸ್ಥಿತಿಗತಿ ಕುರಿತು ಲಲಿತಾ ನಾರಾಯಣ ವಗ್ಗಾ ಮಾತನಾಡಲಿದ್ದಾರೆ.

ಪುಷ್ಪಾವತಿ ಏಳುಬಾವಿ, ಸುನಂದಾ ವಕೀಲರು, ಆರ್.ಶೋಭಾ ಮುರಳಿಕೃಷ್ಣ ಅತಿಥಿಯಾಗಿ ಆಗಮಿಸಲಿದ್ದಾರೆ. ಆಳಂದ ಉ.ಪ್ರಾ.ಪ.ಮಹಿಳಾ ಘಟಕದ ಅಧ್ಯಕ್ಷೆ ರುಕ್ಮಿಣಿ ಸಂಗಾ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ಮಧ್ಯಾಹ್ನ 2 ಕ್ಕೆ ಡಾ.ಅಶೋಕ ಹುಗ್ಗಣ್ಣವರ್ ಅವರಿಂದ ದೇವರ ದಾಸಿಮಯ್ಯ ವಚನಗಳ ಗಾಯನ ಜರುಗಲಿದೆ. 

ಮಧ್ಯಾಹ್ನ 3 ಕ್ಕೆ ಸಂಗೀತ ಮತ್ತು ನೃತ್ಯ ಹಾಗೂ ದೃಶ್ಯಕಲಾ ವಿಭಾಗದ ವಿದ್ಯಾರ್ಥಿಗಳಿಂದ ವಚನ ಗಾಯನ ಕುಂಚ ನಡೆಯಲಿದೆ.

ಪ್ರಹ್ಲಾದ ಅಗಳಿ, ವಿಜಯಕುಮಾರ ಪೊಬ್ಬತ್ತಿ, ಜಯರಾಮ ವಗ್ಗಾ ಅತಿಥಿಯಾಗಿ ಆಗಮಿಸಲಿದ್ದಾರೆ.

 ಸಂಜೆ 4 ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಡಾ.ಈಶ್ವರಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ.

ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಸಚಿವ ಎ.ಸುಬ್ಬಣ್ಣ ರೈ ಅಧ್ಯಕ್ಷತೆ ವಹಿಸಲಿದ್ದಾರೆ. 

ವಿಧಾನ ಪರಿಷತ ಸದಸ್ಯ ಕೆ.ಸಿ.ಕೊಂಡಯ್ಯ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಸಮಾರೋಪ ನುಡಿಗಳನ್ನಾಡಲಿದ್ದಾರೆ.

ಕೆಎಚ್‍ಡಿಸಿ ಮಾಜಿ ಅಧ್ಯಕ್ಷ ರವೀಂದ್ರ ಕಲಬುರಗಿ, ಗೋ.ತಿಪ್ಪೇಶ್, ನಿವೃತ್ತ ಪೊಲೀಸ ಅಧಿಕಾರಿ ಡಾ.ಜಿ.ರಮೇಶ, ಡಾ.ಕೆ.ಜಿ.ಲಕ್ಷ್ಮೀನಾರಾಯಣಪ್ಪ, ಡಾ.ಕೆ.ವಿ.ಶೇಖರ್, ಬಸವರಾಜ ನಾಲತ್ವಾಡ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.

ನಂತರ ಹಿರಿಯ ಸಾಹಿತಿಗಳಿಗೆ ಮತ್ತು ಪ್ರಾಯೋಜಕರಿಗೆ ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮವಿದೆ ಎಂದು ಅವರು ಹೇಳಿದ್ದಾರೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.