ಕೆ.ಎನ್.ಪಿ.ವಾರ್ತೆ,ರಜೌರಿ,ನ.03;

ಜೋಡಿಯೊಂದು ನಡು ರಸ್ತೆಯಲ್ಲಿ ಬೈಕ್ ನಲ್ಲಿಯೇ ರೊಮ್ಯಾನ್ಸ್ ಮಾಡಿರುವ ಘಟನೆ ರಜೌರಿಯಲ್ಲಿ ನಡೆದಿದೆ. ಯುವ ಜೋಡಿಯೊಂದು ವಾಹನ ದಟ್ಟಣೆಯಿರುವ ರಸ್ತೆಯಲ್ಲಿ ಮಾಡಿರುವ ಸ್ಟಂಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಗರಂ ಆಗಿದ್ದಾರೆ.

ಬೈಕ್ ನ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತಿರುವ ಯುವತಿ, ಯುವಕನನ್ನು ತಬ್ಬಿಕೊಂಡು ಅವನನ್ನು ಚುಂಬಿಸುತ್ತಾ ನಡು ರಸ್ತೆಯಲ್ಲೇ, ಸರಸವಾಡುತ್ತಾ ಸಾಗಿದ್ದಾರೆ.

ಐಪಿಎಸ್ ಅಧಿಕಾರಿ ಹೆಚ್. ಪಿ. ಎಸ್. ದಲಿವಾಲ್ ಈ ಜೋಡಿಯ ರೊಮ್ಯಾನ್ಸ್ ವಿಡಿಯೋವನ್ನು ಟ್ವೀಟರ್ ನಲ್ಲಿ ಶೇರ್ ಮಾಡಿದ್ದು, ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಇಂತಹ ಚೆಲ್ಲಾಟ ತಡೆಗೆ ಮೋಟಾರು ವಾಹನ ಉಲ್ಲಂಘನೆಯ ಕಾಯ್ದೆಗೆ ನೂತನ ಸೆಕ್ಷನ್ ಗಳನ್ನು ಸೇರಿಸುವ ಅಗತ್ಯವಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.