ಕೆ.ಎನ್.ಪಿ.ವಾರ್ತೆ,ಮುಂಡರಗಿ,ಡಿ.29;

ಇಲ್ಲಿ ಜಾತಿ ಮತ ಪಂತ ಇಲ್ಲ, ನಾವೆಲ್ಲ ಹಿಂದೂಗಳು. ಹಲವರ ಮನಸ್ಸಿನ ವ್ಯತ್ಯಾಸವನ್ನು ಗುರುತಿಸಿ ಚಿಂತನೆಗಳು ಮಾಡಬೇಕಾಗಿದೆ. ದೇಶಾಭಿಮಾನ ಮತ್ತು ಹಿಂದೂ ಧರ್ಮದ ಬಗ್ಗೆ ಸ್ವಾಮಿ ವಿವೇಕಾನಂದರು ತಿಳಿಸಿದ್ದಾರೆ. ನಾವುಗಳು ದೇಶ ರಕ್ಷಣೆಗೆ ಚಿಂತನೆ ಮಾಡಬೇಕು, ದೇಶಾಭಿಮಾನ ಹೆಚ್ಚಾಗಬೇಕು ಎಂದು ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳು ಹೇಳಿದರು.

ನಗರದ ಪುರಸಭೆ ಮೈದಾನದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘ ಹಮ್ಮಿಕೊಂಡಿದ್ದ ಹಿಂದೂ ಶಕ್ತಿ ಸಂಗಮ ತಾಲೂಕು ಗಣವೇಷಧಾರಿ ಸಮಾವೇಶ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.

ಇದೇ ವೇಳೆ ರಾ.ಸ್ವ.ಸಂಘದ ವಕ್ತಾರರಾದ ನರಸಿಂಹ ಕುಲಕರ್ಣಿ ಮಾತನಾಡಿ, ಸ್ವತಂತ್ರ ಪೂರ್ವದಲ್ಲಿ ಹಲವು ಕೆಟ್ಟ ಧೋರಣೆಗಳಿಂದ ಭಾರತ ಹಿಂದೆ ಬಿದ್ದಿದೆ. ಇತಿಹಾಸದಲ್ಲಿ ನಾವು ನಮ್ಮವರಿಂದ ಸೋತ ಸತ್ಯದ ಕತೆಗಳು ಸಾಕಷ್ಟು ಇವೆ, ವೀರರು, ದೇಶಭಿಮಾನಿಗಳಂತ ವೀರರಾಣಿ ಕಿತ್ತೂರು ಚೆನ್ನಮ್ಮ, ಚಂದ್ರಶೇಖರ್ ಅಜಾದ್, ಹಲವರು ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಮುಂದಾದವರಿಗೆ ನಮ್ಮವರೆ ಬೆಳೆಯಲಿಕ್ಕೆ ಬಿಡಲಿಲ್ಲ ಎಂದು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಸಮಾಜದಲ್ಲಿ ಮೂರು ತರಹದ ಜನರಿದ್ದಾರೆ. ಅವರದೇ ಆದ ವ್ಯಕ್ತಿತ್ವ ಉಳ್ಳವರಾಗಿದ್ದಾರೆ. ಕೆಲವರು ತಾವು ಸುಖವಾಗಿರುವುದ್ದಿಲ್ಲ, ಸುಖವಾಗಿರೋದಕ್ಕೆ ಬಿಡುವುದಿಲ್ಲ. ಸ್ವಾರ್ಥ ಸಾಧನೆಗೆ ಜನರ ಉಪಯೋಗ ತೆಗೆದುಕೊಳ್ಳುವುದರ ಜೊತೆಗೆ ವಿಜಯಕ್ಕೆ ಏರುತ್ತಾರೆ. ಕೆಲವರು ಬದುಕೋದು ಇನ್ನೊಬ್ಬರಿಗೆ, ಅಂತವರು ನಿಧಾನವಾಗಿ ಸಮಾಜದಲ್ಲಿ ಗುರುತಿಕೊಳ್ಳುವ ಜೊತೆಗೆ ಮೇಲಕ್ಕೆ ಬರುತ್ತಾರೆ.

ನಮ್ಮ ದೇಶ ಭೋಗ ಮೆಟ್ಟಿ ತ್ಯಾಗ ಮೆರೆದ ಭಾರತ, ಭಾರತವು ಜಗತ್ತಿನಲ್ಲಿ ಶ್ರೇಷ್ಠವಾದದ್ದು. ಭಾರತವು ಜ್ಞಾನ ವಿಜ್ಞಾನಗಳಿಂದ ಬೆಳೆದಿದೆ ಜೊತೆಗೆ ಆಯುರ್ವೇಧ ಗಿಡಮೂಲಿಕೆಗಳ ಔಷಧಿ ಮತ್ತು ಗುರುಕುಲಗಳ ಕೇಂದ್ರ, ಇವೆಲ್ಲವನ್ನು ನೋಡಿದ ಚೀನಾದೇಶದ ಪ್ರವಾಸಿಗ ಭಾರತ ದೇಶ ಒಂದು ಸ್ವರ್ಗದ ಬೀಡು ಎಂದ, ಆದ್ರೇ ಈಗ ಶಿಕ್ಷಣ ವ್ಯಾಪಾರವಾಗಿದೆ.

ಸ್ವತಂತ್ರ ಪೂರ್ವದಲ್ಲಿ ಬ್ರಿಟಿಷರಿಂದ ದೇಶದ ಕಾಂಗ್ರೇಸಿಗರು ಮುಸ್ಲೀಂರ ಮುಲಾಜಿಗೆ ಬಲಿಯಾದ್ರು. ಇಂತಹ ಧೋರಣೆಗೆ ಬಲಿಯಾದ ಭಾರತ.

ಈ ಮಣ್ಣಿನ ಮಗ ಹಿಂದೂ ಎನ್ನುವ ವ್ಯಕ್ತಿಯನ್ನು ನಿರ್ಮಾಣ ಮಾಡಲು ರಾಷ್ಟ್ರೀಯ ಸ್ವಯಂ ಸೇವಾ ಸಂಘ ಹುಟ್ಟಿತು. ಮೊದಲು ದೇಶದಲ್ಲಿ ತಿರಸ್ಕಾರವಿತ್ತು. ನಂತರ ಫಿನಿಕ್ಸ್ತತರಹ ಬೆಳೆಯಿತು. ಈಗ 55 ಸಾವಿರ ಹಳ್ಳಿಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘಗಳಿವೆ.

72 ವರ್ಷ ನಾವು ಮೂರ್ಖರಾಗಿದ್ದೆವು. ಅಂದು ಆರ್ ಎಸ್ ಎಸ್ ಸಂಘ ಎಂದ್ರೇ ಕೋಮುವಾದಿ ಎಂದ್ರು, ಆದ್ರೇ ಸಂಘ ಎಂದೂ ಕೋಮುವಾದಿಯಲ್ಲ. ನಾವು ಮುಸ್ಲಿಂ ವಿರೋಧಿಯಲ್ಲ, ಕೋಮುವಾದಿಗಳ ವಿರೋಧಿ, ಯಾವ ಕಾನೂನು ದೇಶದ ಒಳಿತಿಗಾಗಿ ಬೇಕೋ ಆ ಕಾನೂನಿಗೆ ದೇಶದಲ್ಲಿ ವಿರೋಧ ಹುಟ್ಟಿದೆ. ದೇಶದ ಜನರಿಗೆ ನಿಜವಾದ ವಿಷಯ ತಿಳಿಸಬೇಕು, ಸಂಘದಲ್ಲಿ ಅಸ್ಪುರ್ಶತೆ ಇಲ್ಲ, ದೇಶದಲ್ಲಿ ಅಸ್ಪುರ್ಶತೆಯನ್ನು ಸಂಘ ತೆಗೆದು ಹಾಕಿದೆ ಎಂದರು.

ವರದಿ : ಕೋಗಳಿ ಶೇಖರ್

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.