ಕೆ.ಎನ್.ಪಿ.ವಾರ್ತೆ,ನವದೆಹಲಿ,ಆ.26;

ಗಾಜು ಲೇಪಿತ ಮಾಂಜಾ ದಾರಕ್ಕೆ ಮತ್ತೊಂದು ಬಲಿಯಾಗಿದ್ದು, ಗಾಳಿಪಟದ ದಾರಕ್ಕೆ 4 ವರ್ಷದ ಪುಟ್ಟ ಬಾಲಕಿಯ ಕುತ್ತು ಸಿಲುಕಿ ಕತ್ತರಿಸಿ ಹೋಗಿ ಆಕೆ ಮೃತಪಟ್ಟಿದ್ದಾಳೆ.

ಗಾಳಿಪಟ ದಾರ ನಾಲ್ಕು ವರ್ಷದ ಬಾಲಕಿಯ ಕತ್ತು ಸೀಳಿದ ಘಟನೆ ದೆಹಲಿಯಲ್ಲಿ ನಡೆದಿದೆ. ಅದು ಗಾಜು ಲೇಪಿತ ದಾರವಾಗಿದ್ದು, ತಂದೆ ಮತ್ತು ಮಗಳು ಹನುಮಾನ್ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಖಜೂರಿ ಚೌಕ್ ಪ್ರದೇಶದಲ್ಲಿ ಶನಿವಾರ ಈ ಘಟನೆ ನಡೆದಿದೆ. ಮೃತ ಬಾಲಕಿಯನ್ನು 4 ವರ್ಷದ ಇಶಿಕಾ ಎಂದು ಗುರುತಿಸಲಾಗಿದ್ದು, ಈಕೆ ಸೋನಿಯಾ ವಿಹಾರ್ ನಿವಾಸಿ ಎಂದು ತಿಳಿದುಬಂದಿದೆ. 

ಬಾಲಕಿ ಇಶಿಕಾ ತನ್ನ ತಂದೆಯೊಂದಿಗೆ ಮೋಟಾರುಬೈಕ್‍ನಲ್ಲಿ ಪ್ರಯಾಣಿಸುತ್ತಿದ್ದಾಗ ಗಾಜು ಲೇಪಿತ ಗಾಳಿಪಟದ ದಾರ ಕುತ್ತಿಗೆಗೆ ಸುತ್ತಿಕೊಂಡು ಗಾಯಗೊಂಡು ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಮಗಳ ಕುತ್ತಿಗೆಗೆ ಹೊಡೆದ ಗಾಳಿಪಟ ದಾರವನ್ನು ಗಮನಿಸಿದ ಸಂತ್ರಸ್ತೆಯ ತಂದೆ ಆಕೆಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಮಗು ಮೃತಪಟ್ಟಿದೆ ಎಂದು ಘೋಷಿಸಲಾಯಿತು.

ಕಳೆದ ಜನವರಿಯಲ್ಲಿ ಜೈಪುರದ ವಿದ್ಯಾನಗರದಲ್ಲಿ 6 ವರ್ಷದ ಬಾಲಕನೋರ್ವ ಇದೇ ಮಾಂಜಾ ದಾರಕ್ಕೆ ಬಲಿಯಾಗಿದ್ದ. ಇತ್ತೀಚೆಗೆ ಇದೇ ದೆಹಲಿಯಲ್ಲಿ ಟೆಕ್ಕಿಯೊಬ್ಬ ಬೈಕ್ ನಲ್ಲಿ ತೆರಳುತ್ತಿದ್ದಾಗ ಮಾಂಜಾ ದಾರ ಆತನ ಕುತ್ತಿಗೆ ಸೀಳಿ ಕೊಂದು ಹಾಕಿತ್ತು. ಈ ಘಟನೆ ಹಸಿರಾಗಿರುವಾಗಲೇ ಮತ್ತೊಂದು ಧಾರುಣ ಘಟನೆ ನಡೆದಿದೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.