ಕೆ.ಎನ್.ಪಿ.ವಾರ್ತೆ,ಮುಂಡರಗಿ,ಡಿ.18;

ಗ್ರಾಮೀಣ ಬದುಕಿನ ಸೊಗಡು ಮತ್ತು ಸಮಾಜದ ಓರೆಕೋರೆಗಳನ್ನು ಪ್ರತಿಬಿಂಬಿಸುವ ಒಂದು ಕಲೆ ಜಾನಪದ. ಸಮಾಜ ಆಧುನೀಕರಣದತ್ತ ಹೆಜ್ಜೆ ಇಡುತ್ತಿದೆ, ವಿನೂತ ತಂತ್ರಜ್ಞಾನ ಬಳಕೆಯಿಂದ ಇಂದು ಯುವ ಜನಾಂಗ ಸಿನಿಮಾ ಧಾರಾವಾಹಿಗಳಿಗೆ ಅಂಟಿಕೊಂಡು ದೃಶ್ಯಮಾಧ್ಯಮಕ್ಕೆ ಮಾರುಹೋಗಿದ್ದಾರೆ.

ಸಾಮಾಜಿಕ ನಾಟಕ, ಬಯಲಾಟ, ದೊಡ್ಡಾಟ, ಸಣ್ಣಾಟಗಳಂತ ಜಾನಪದ ಕಲೆ ದಿನದಿಂದ ದಿನಕ್ಕೆ ಅವಸಾನದಂಚಿನಲ್ಲಿರುವುದು ವಿಪರ್ಯಾಸದ ಸಂಗತಿಯಾಗಿದೆ.

ಇಂದು ಬಯಲಾಟ, ದೊಡ್ಡಾಟಗಳಂತ ಪೌರಾಣಿಕ ಭಕ್ತಿ ಪ್ರಧಾನವಾದ ಐತಿಹಾಸಿಕ ನಾಟಕದ ಪಾತ್ರಧಾರಿಗಳಿಗೆ, ಪಾತ್ರಕ್ಕೆ ತಕ್ಕಂತೆ ವೇಷಭೂಷಣಗಳು ಮುಖ್ಯವಾಗಿವೆ..

ಗ್ರಾಮೀಣ ಭಾಗದಲ್ಲಿ ಅವಸಾನದ ಅಂಚಿನಲ್ಲಿರುವ ಜಾನಪದಕಲೆ ಬಗ್ಗೆ ಆಸಕ್ತಿ ಕಡಿಮೆಯಾಗಿರುವುದರಿಂದ, ಆಡಂಬರ ಮತ್ತು ವೈಭವಿಕರಿಸುವ ಕಲೆಗೆ, ಅಭಿನಯಿಸುವ ಪಾತ್ರಗಳನ್ನು ಜೀವಂತಿಕೆಯಾಗಿ ತೋರಿಸಲು ವೇಷಭೂಷಣ ಅಷ್ಟೇ ಮುಖ್ಯವಾಗಿದೆ.

ತಾಲೂಕಿನ ಬೂದಿಹಾಳ ಗ್ರಾಮದ ಮೌನೇಶ್ವರ ಬಡೆಗೇರ ವಿಶ್ವಕರ್ಮದ ಸಮದಾಯದಲ್ಲಿ ಹುಟ್ಟಿ, ಬೆಳೆದು, ಬಡಗಿತನ ಕುಲಕಸುಬನ್ನಾಗಿ ಮಾಡಿಕೊಂಡ ಬಂದವರು.

ಮೌನೇಶ್ವರ ತಯಾರಿಸುವ ವೇಷಭೂಷಣದ ವಿನ್ಯಾಸವನ್ನು ನೋಡುವುದೇ ಅಂದ..

ಮೌನೇಶ, ಮನೆತನದ ಹಿರಿಯರು. ಪೌರಾಣಿಕ ನಾಟಕದ ಪಾತ್ರಧಾರಿಗಳಿಗೆ ಮೇಕಪ್ ಬಣ್ಣಹಾಕುವ ಕಲೆಯ ಹಾದಿಯಲ್ಲಿ ಇವರು ಒಬ್ಬರು.
ರೇಣುಕಾ ವಿಜಯ ನಾಟಕದ ಮೂಲಕ ರಂಗಕಲಾವಿದರಾಗಿ ರಂಗಭೂಮಿಯ ಗೀಳು ಅಂಟಿಕೊಂಡು, ನಂತರ ಕುಶಾಲನಗರದ ವೀರಭೂಮಿ ಪ್ರವಾಸಿ ಕಲಾಗ್ರಾಮ ಕುಡ್ಲೂರುನಲ್ಲಿ 7ವರ್ಷ ರಂಗಕಲಾವಿದರಾಗಿ ಸೇವೆ ಸಲ್ಲಿಸಿ, ಈವರೆಗೆ 2017-18ರಲ್ಲಿ ಸ್ಟೇಜ್ ಕ್ರಾಪ್ಟ್ ತರಬೇತಿಯನ್ನು ಡಾ.ಟಿ.ಬಿ.ಸೊಲಬಕ್ಕವರ ಮಾರ್ಗದರ್ಶನದಲ್ಲಿ ಕಲಿತರು.

ಪಾತ್ರದ ಮೂಲ ಕಥಾವಸ್ತುವಿಗೆ ಧಕ್ಕೆ ತರದಹಾಗೆ, ವಿನೂತನವಾದ ವೇಷಭೂಷಣಗಳನ್ನು ಜಾನಪದ ಶೈಲಿಯಲ್ಲಿ ಆಧುನಿಕ ಸ್ಥಿತಿಗೆ ಪರಿವರ್ತಿಸಿ ವಿನ್ಯಾಸವನ್ನು ತಯಾರು ಮಾಡುವಲ್ಲಿ ಕರಗತ ಮಾಡಿಕೊಂಡಿದ್ದಾರೆ.

ಸಾಕ್ಷರತ ಜನಜಾಗೃತಿ ಕಾರ್ಯಕ್ರಮ ನೀಡುವ ಮೂಲಕ ಬೀದಿನಾಟಕ, ಸಾಮಾಜಿಕ ಸಂಘಟನೆಯ ಜೊತೆಯಲ್ಲಿ ಭಾರತೀಯ ವಿಶ್ವಕರ್ಮ ಸೇವಾ ಪರಿಷತ್ ಜಿಲ್ಲಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ರಂಗಸಜ್ಜಿಕೆಯ ಬಗ್ಗೆ ವಿನೂತನ ಶೈಲಿಯ ವಿನ್ಯಾಸದಲ್ಲಿ ಪರಿಣಿತಿ ಪಡೆದು, ನಾಗರ ವೇಶರ ದ್ರಾವಿಢ ವಾಸ್ತು ಕಲೆಯ ಶೈಲಿಯಲ್ಲಿ ಪಾತ್ರದ ವಸ್ತುಸ್ಥಿತಿಗೆ ಧಕ್ಕೆ ತರದಹಾಗೆ ಕಿರೀಟ, ಮುಂಗೈ ಕಟ್ಟು, ಬುಜ ಕಿರುಟ ಸೊಂಟ ಪಟ್ಟಿ, ಕಂಠಹಾರ ಇತರೆ ವೇಷಭೂಷಣಗಳನ್ನು ಜಾನಪದ ಶೈಲಿಯಲ್ಲಿ ವಿಶಿಷ್ಠ ಮತ್ತು ವಿನೂತನ ವರ್ಣರಂಜಿತವಾಗಿ ತಯಾರಿಸುತ್ತಾರೆ.

ರಾಷ್ಟ್ರೀಯ ನಾಟಕೋತ್ಸವ ಗುಣವಂತಿ, ಮಡಿಕೇರಿ, ಬಿಜಾಪುರ, ಹೂವಿನ ಹಡಗಲಿಯಂತಹ ಹತ್ತಾರು ನಗರಗಳಲ್ಲಿ ಜಾನಪದ ಕಲೆಯ ಬಯಲಾಟ ಮತ್ತು ದೊಡ್ಡಾಟಗಳಂತ ವಿನೂತನ ವಸ್ತ್ರ ವಿನ್ಯಾಸದೊಂದಿಗೆ ನಾಟಕ ತರಬೇತಿ ಕಾರ್ಯಗಾರ ನೀಡುತ್ತ ಬಂದಿದ್ದಾರೆ.

ಹಾಗೂ ಏಕಲವ್ಯ ಸಾಂಸ್ಕೃತಿಕ ಸಂಘದ ಸಂಚಾಲಕರಾಗಿ, ತಾವೇ ತಯಾರಿಸಿದ ವೇಷಭೂಷಣಗಳೊಂದಿಗೆ 150ಕ್ಕು ಹೆಚ್ಚು ಏಕಲವ್ಯ ದೊಡ್ಡಾಟವನ್ನು ಪ್ರದರ್ಶಿಸಿದ್ದಾರೆ.

ಶಿಗ್ಗಾವಿಯ ಗೊಟಗೋಡಿ ಉತ್ಸವ ರಾಕ್ ಗಾರ್ಡನ್‍ನಲ್ಲಿ ಸುಮಾರು 80 ಮಕ್ಕಳಿಗೆ ಆಗುವಷ್ಟು ದೊಡ್ಡಾಟದ ವೇಷಭೂಷಣ ಪರಿಕರಗಳನ್ನು ಜನಪದ ಶಿಕ್ಷಣ ಸಂಸ್ಥೆಗೆ ತಯಾರಿಸಿರುವುದು ಇಂದಿಗೂ ಕಾಣಬಹುದಾಗಿದೆ.

ಎಲೆಮರೆಯಂತೆ ಇದ್ದ ಮೌನೇಶನು ಫೇಸುಬುಕ್, ವಾಟ್ಸಪ್‍ಗಳಂತಹ ಸಾಮಾಜಿಕ ಜಾಲತಾಣದಲ್ಲಿ ತಾವೇ ಅಪ್ಲೋಡ್ ಪೋಸ್ಟ್ ಮಾಡಿ ಮೆಚ್ಚುಗೆ ಪಡೆದಿದ್ದು, ಇವರ ವಿಶೇಷ ಕಲೆಯನ್ನು ಸಂಘಸಂಸ್ಥೆಗಳು ಗುರುತಿಸಿ ಡಾ|| ವಿಷ್ಣು ಸೇವಾ ಸಮಿತಿ ಧಾರವಾಡ ಸಾರ್ಥಕ ರತ್ನ ಸುಖಿಭವ ಪ್ರಶಸ್ತಿ ನೀಡಿದೆ.

ರಂಗಭಾರತಿಯಲ್ಲಿ ಮತ್ತು ಉತ್ತರ ಕರ್ನಾಟಕ ಕಲಾವಿದರ ಸಂಘದಿಂದ ಕಲಾಸೂರ್ಯ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ. 

ಬಯಲಾಟ ನಾಟಕಗಳ ಹೊಸ ಆವಿಷ್ಕಾರದ ರಂಗಪರಿಕರ ವಿನ್ಯಾಸ ಮಾಡುವಲ್ಲಿ ಒಳ್ಳೆಯ ಕುಶಲ ಕರ್ಮಿ. ಜೊತೆಗೆ ಉಡ್ಡಿನಲ್ಲಿ ವಿವಿಧ ಬಣ್ಣದ ಮರದ ತುಂಡು ಕಟ್ಟಿಗೆಯನ್ನು ಸಂಯೋಜಿಸಿ ವರ್ಣರಂಜಿತವಾಗಿ ಮೈಸೂರು ಶೈಲಿಯಲ್ಲಿ ನೆರಳು ಬೆಳಕಿನ ಕಲೆ ಮಾಡುವಂತ ಕೌಶಲ್ಯತೆಯ ಕ್ರಿಯಾಶೀಲ ಯುವಕ. ಇನ್ನು ಹೆಚ್ಚು ಆ ದೇವರು ಜಾನಪದ ಕಲೆಯ ಬಗ್ಗೆ ಕೌಶಲ್ಯತೆಯನ್ನು ನೀಡಲಿ. | ನಿಂಗು ಸೂಲಗಿ ರಂಗ ನಿರ್ದೇಶಕರು.

ಹಾಡು, ನೃತ್ಯದ ಬಗ್ಗೆ ಬಾಲ್ಯದಿಂದ ತುಂಬಾ ಆಸಕ್ತಿ ಇತ್ತು, ಜಾನಪದ ಎಲ್ಲರನ್ನು ಸ್ವಾಗತಿಸುತ್ತದೆ, ನನ್ನನು ವೇಷಭೂಷಣದ ಕಲೆ ಸ್ವಾಗತಿಸಿದೆ. ಈ ಕಲೆಯ ಹವ್ಯಾಸದಿಂದ ನನಗೆ ನೆಮ್ಮದಿ, ಸಂತೋಷ, ಹೊಸ ಹೊಸ ವಿನ್ಯಾಸಕ್ಕೆ ಕಲಾವಿದರ ಪ್ರೋತ್ಸಾಹ ಇದೆ. ಜಾನಪದ ಕಲೆಗೆ ಯಾವುದೆ ಜಾತಿಭೇದ ಇಲ್ಲ. | ಮೌನೇಶ್ವರ ನಾಗಪ್ಪ ಬಡಿಗೇರ ಬೂದಿಹಾಳ

ವರದಿ : ಕೋಗಳಿ ಶೇಖರ್

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.