ಕೆ.ಎನ್.ಪಿ.ವಾರ್ತೆ,ಧಾರವಾಡ,ಅ.21;
ನವ್ಹೆಂಬರ 1 ರಂದು ಎಮ್‍ಇಎಸ್ ಸಂಘಟನೆ ಮುಖಂಡರುಗಳು ಕರಾಳ ದಿನಾಚರಣೆ ಆಚರಿಸಲು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಅನುಮತಿ ಕೇಳಿರುವದ್ದಕ್ಕೆ ಕರವೇ ಸ್ವಾಭಿಮಾನಿ ಬಣದ ಬೆಳಗಾವಿ ವಿಭಾಗಿಯ ಅಧ್ಯಕ್ಷ ಪಾಪು ಧಾರೆ ಕೆ.ಎನ್.ಪಿ.ಯೊಂದಿಗೆ ಮಾತನಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿ ವರ್ಷದಂತೆ ನವ್ಹೆಂಬರ 1 ರಂದು ರಾಜ್ಯ ಸರ್ಕಾರ ಹಾಗೂ ರಾಜ್ಯದ ಜನತೆ “ಕರ್ನಾಟಕ ರಾಜ್ಯೋತ್ಸವ” ಆಚರಣೆ ಮಾಡುತ್ತಿದ್ದರೆ ಇದೇ ದಿನದಂದು ಎಮ್‍ಇಎಸ್ ಸಂಘಟನೆ ಕರಾಳ ದಿನವೆಂದು ಕಪ್ಪು ಬಟ್ಟೆ ಧರಿಸಿ ಬೆಳಗಾವಿಯ ನಗರ ತುಂಬೆಲ್ಲ ರ್ಯಾಲಿ ಮಾಡಿ ರಾಜ್ಯವಿರೋಧಿ ಚಟವಟಿಕೆ ನಡೆಸಲು ಸಂಚು ರೂಪಿಸಿದೆ.
ಮರಾಠಿ ಭಾಷಿಕರು ಹಾಗೂ ಕನ್ನಡಿಗರ ಮಧ್ಯ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಎಮ್‍ಇಎಸ್ ಸಂಘಟನೆ ಹಲವಾರು ವರ್ಷದಿಂದ ಬೆಳಗಾವಿ ಜಿಲ್ಲೆಯನ್ನು ಮಹಾರಾಷ್ಟ್ರ ರಾಜ್ಯಕ್ಕೆ ಸೇರಿಸಬೇಕೆಂದು ರಾಜ್ಯವಿರೋಧಿ ನಾಯಕರೊಡನೆ ಮತ್ತು ರಾಜ್ಯವಿರೋಧಿ ಸಂಘಟನೆಗಳೊಂದಿಗೆ ಸೇರಿ ರಾಜ್ಯದ್ರೋಹದ ಕೆಲಸ ಮಾಡುತ್ತಿದೆ.
ಎಮ್‍ಇಎಸ್ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಿ ಅದರ ಮುಖಂಡರುಗಳನ್ನು ಗಡಿಪಾರು ಮಾಡಬೇಕು. ಯಾವುದೇ ಕಾರಣಕ್ಕೆ ನವಂಬರ 1 ರಂದು ಎಮ್‍ಇಎಸ್ ಸಂಘಟನೆ ಆಚರಿಸುವ ಕರಾಳ ದಿನಕ್ಕೆ ಬೆಳಗಾವಿ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಪರವಾನಿಗೆ ನೀಡಬಾರದೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಎಮ್‍ಇಎಸ್ ಸಂಘಟನೆ ಆಚರಿಸುವ ಕರಾಳ ದಿನಕ್ಕೆ ಪರವಾನಿಗೆ ನೀಡಿದ್ದೇ ಆದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಮುಖಂಡತ್ವದಲ್ಲಿ ಎಲ್ಲ ಕನ್ನಡಪರ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟಿಸುವ ಮೂಲಕ ತನ್ನ ಹೋರಾಟ ಪ್ರಾರಂಭಿಸುತ್ತದೆ ಎಂದು ತಿಳಿಸಿದ್ದಾರೆ.
ವರದಿ: ಚಂದ್ರು ಹಿರೇಮಠ್ ಧಾರವಾಡ
ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…
ನೀವು ಕೂಡ ಬರೆಯಬಹುದು :
ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.
ಈ-ವಿಳಾಸ : karnatakanewsportal@gmail.com
ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.