ಕೆ.ಎನ್.ಪಿ.ವಾರ್ತೆ,ಹರಪನಹಳ್ಳಿ,ಜೂ.11;
ಬೆಳೆಗಳನ್ನು ನಾಶಮಾಡಲು ಹೊಲಗಳಿಗೆ ಬಂದಿರುವ ಸೈನಿಕಹುಳುಗಳು ರೈತರ ಹೊಟ್ಟೆ ಮೇಲೆ ಹೊಡೆಯಲು ಸಜ್ಜಾಗಿವೆ.
ತಾಲ್ಲೂಕಿನಲ್ಲಿ ಬೆಳೆಗೆ ಸೈನಿಕಹುಳುಗಳು ಕಾಣಿಸಿಕೊಂಡು ರೈತರನ್ನು ಚಿಂತೆಗೆ ದೂಡಿದ್ದು, ಉತ್ತಮ ಮಳೆಯಾದ ಸಂತೋಷದಲ್ಲಿದ್ದ ರೈತರಿಗೆ ಸೈನಿಕಹುಳುಗಳು ಹೈರಾಣಾಗಿಸಿವೆ.
ಕೇವಲ 10 ದಿನದ ಹಿಂದೆ ಹಾಕಿದ್ದ ಸಸಿಗಳ ಮೇಲೆ ಸೈನಿಕ ಹುಳುಗಳು ದಾಳಿಮಾಡಿದ್ದು ರೈತರನ್ನು ಚಿಂತೆಗೆ ತಳ್ಳಿದೆ. ತಾಲ್ಲೂಕಿನ ಜಂಗಮತುಂಬಿಗೆರೆಯಲ್ಲಿ ಮೆಕ್ಕೆಜೋಳಕ್ಕೆ ಮತ್ತೆ ಸೈನಿಕ ಹುಳುಗಳ ಹಾವಳಿ ಪ್ರಾರಂಭವಾಗಿದ್ದು, ಹುಳುಗಳನ್ನು ಕಂಡ ರೈತರು ಭಯಭೀತರಾಗಿದ್ದಾರೆ.
ಈ ವರ್ಷ ಉತ್ತಮ ಮುಂಗಾರು ಆರಂಭವಾಗಿದೇ ಎಂದು ಸಂತೋಷದಿಂದ ಇದ್ದ ರೈತರಿಗೆ ಸೈನಿಕ ಹುಳುಗಳ ದಾಳಿಯಿಂದಾಗಿ ಕೈಗೆ ಬಂದದ್ದು ಬಾಯಿಗೆ ಬರದಂತಹ ಸ್ಥಿತಿ ನಿರ್ಮಾಣವಾಗಿ ಬೆಳೆ ನಷ್ಟದ ಆತಂಕ ಆವರಿಸಿದೆ.
ಹಿಂದಿನ ವರ್ಷ ಇದೆ ರೀತಿ ಸೈನಿಕ ಹುಳುಗಳು ಎಲ್ಲಾ ಮೆಕ್ಕೆಜೋಳ ತಿಂದು ಹೊಲ ಬರಿದು ಮಾಡಿ ರೈತರನ್ನು ಸಾಲಗಾರನನ್ನಾಗಿ ಮಾಡಿದ್ದವು. ಈ ವರ್ಷ ಇನ್ನೂ ಬೀಜ ಹಾಕಿದ 10 ದಿನಗಳಲ್ಲಿ ಮೆಕ್ಕೆಜೋಳ ಸಸಿಗಳಿಗೆ ಹುಳ ಬಿದ್ದಿದ್ದು ಕೃಷಿ ಅಧಿಕಾರಿಗಳು ರೈತರನ್ನು ಸಂಪರ್ಕಿಸಿ ಹುಳುಗಳು ಬೆಳೆಗಳನ್ನು ನಾಶ ಮಾಡದಂತೆ ನೋಡಿಕೊಳ್ಳುಬೇಕು ಎಂದು ಶ್ರೀನಿವಾಸಪುರದ ರೈತ ಕೊಟ್ರೆಶ್ ಹಾಗೂ ಜಂಗಮ ತುಂಬಿಗೆರೆ ರೈತ ದ್ಯಾಮಣ್ಣ ಮನವಿ ಮಾಡಿದ್ದಾರೆ.
ವರದಿ : ಬಸವರಾಜ್ ಪೂಜಾರ್
ನೀವು ಕೂಡ ಬರೆಯಬಹುದು :
ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.
9513326661
ಈ-ವಿಳಾಸ : karnatakanewsportal@gmail.com
ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.